ಪಾಂಡವರು ಶಂಖನಾದ ಮಾಡುವಾಗ ಶ್ವೇತ ಬಣ್ಣದ ಕುದುರೆಗಳನ್ನು ಹೊಂದಿದ ರಥಿಕರು ಎಂದು ತಿಳಿಸಲಾಗಿದೆ (ಶ್ವೇತೈರ್ಹಯೈರ್ಯುಕ್ತೇ). ಶ್ವೇತವೆಂದರೆ ಬಿಳಿ ಅನ್ನುತ್ತೇವೆ. ಆದರೆ ಆಳಕ್ಕೆ ಹೋದರೆ ಇನ್ನಷ್ಟು ಅರ್ಥಗಳು ಸಿಗುತ್ತವೆ.
ಬಣ್ಣಕ್ಕೂ ಮನಸ್ಸಿಗೂ ಸಂಬಂಧವಿದೆ. ಬಣ್ಣವು ಗುಣವನ್ನು ತೋರಿಸುತ್ತದೆ. ಯಾವ ಬಣ್ಣದ ಬಟ್ಟೆ ಹೊಂದಿರುತ್ತಾರೋ ಅದರ ಆಧಾರದಲ್ಲಿ ಅವರ ಮನಸ್ಸನ್ನೂ ಅರಿಯಬಹುದು. ಇದನ್ನು “ಬಣ್ಣದ ವಿಜ್ಞಾನ’ ಎನ್ನಬಹುದು. ವ್ಯಕ್ತಿ ಹೇಗೆ ನಡೆಯುತ್ತಾನೋ (ಹೆಜ್ಜೆ) ಹಾಗೆ ಮನಸ್ಸನ್ನು ಅರ್ಥ ಮಾಡಿಕೊಳ್ಳಬಹುದು.
“ಅವನ ನಡತೆ ಸರಿ ಇಲ್ಲ’ ಅಂದರೆ “ನಡಿಗೆ ಸರಿ ಇಲ್ಲ’ ಎಂಬ ಅರ್ಥವನ್ನು ಹೊರಸೂಸುತ್ತದೆ. ನಡತೆ ಸರಿ ಇಲ್ಲದಿದ್ದರೆ ನಡಿಗೆಯೂ ಸರಿ ಇರುವುದಿಲ್ಲ. “ಅವನ ನಡೆ ನೋಡು’ ಎನ್ನುವುದು ಇದೇ ಅರ್ಥದಲ್ಲಿ. ಅವರವರ ಮನೋಧರ್ಮಕ್ಕೆ ಅನುಸಾರ ವ್ಯಕ್ತಿಗಳು ಬಣ್ಣವನ್ನು ಆಯ್ಕೆ ಮಾಡುತ್ತಾರೆ. “ಬಣ್ಣ ಬಯಲಾಯಿತು’ ಎನ್ನುವ ವಾಗ್ರೂಢಿ ಬಂದದ್ದು ಇದೇ ಕಾರಣದಿಂದ. ಧರಿಸಿದ ಬಟ್ಟೆ ಗುಣವನ್ನು ತೋರಿಸುತ್ತದೆ.
“ಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ’ (ಗೀತೆ 4-13) ಎನ್ನುವಾಗ ಶ್ರೀಕೃಷ್ಣ ಬಣ್ಣವನ್ನು ಸ್ವಭಾವ ಅಂತ ಹೇಳಿದ್ದಾನೆ. ಯಾವ ಸ್ವಭಾವವಿರುತ್ತದೋ ಅಂತಹ ಬಣ್ಣ ಇರುತ್ತದೆ ಎಂದು ಅರ್ಥ. ಬಿಳಿ ಬಣ್ಣ ಸಾತ್ವಿಕತೆಯ ಸಂಕೇತ. ಪಾಂಡವರ ಉದ್ದೇಶವೂ ಸಾತ್ವಿಕವಾದುದು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811