ಅರ್ಜುನ ಅಂದರೆ ತೃಣ ಎಂಬರ್ಥವೂ ಇದೆ. ಆದ್ದರಿಂದಲೇ ಗೀತೆಯಲ್ಲಿ ಅರ್ಜುನ ಉವಾಚ ಎಂದಿದೆಯೆ ವಿನಾ ಪಾರ್ಥ ಉವಾಚ, ಧನಂಜಯ ಉವಾಚ ಎಂದಿಲ್ಲ. ಅಂದರೆ ತೃಣವನ್ನು ಗಮನದಲ್ಲಿರಿಸಿಕೊಂಡೇ ಮಹಾಭಾರತ, ಗೀತೆಯ ರಚನೆಯಾಗಿದೆ. ಶಿಕ್ಷಕರು ಪಾಠವನ್ನು ಎಲ್ಲರಿಗೂ ಒಂದೇ ತೆರದಿ ಮಾಡುತ್ತಾರೆ, ಸ್ವೀಕರಿಸುವ ಮಟ್ಟ ಒಬ್ಬೊಬ್ಬ ವಿದ್ಯಾರ್ಥಿಯದು ಒಂದೊಂದು ಬಗೆ. ಕೊನೆಯ ಮಟ್ಟದ ವಿದ್ಯಾರ್ಥಿಗೆ ಅರ್ಥವಾದರೆ ಬುದ್ಧಿವಂತರು ಅರ್ಥ ಮಾಡುಕೊಳ್ಳುವುದು ಸಹಜ. ಇದು ವೇದವ್ಯಾಸರ, ಸನಾತನ ಧರ್ಮದ ವೈಶಿಷ್ಟ್ಯ. ಇದರ ತಿಳಿವಳಿಕೆ ಬೇಕಾಗಿದೆ. ಎಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆಂದು ಶ್ರೀಕೃಷ್ಣ ಹೇಳಿದಂತೆ, ವೇದವ್ಯಾಸರು ಯಾರನ್ನೂ ಜ್ಞಾನದಿಂದ ವಂಚಿತರನ್ನಾಗಿ ಮಾಡಲಿಲ್ಲ, ಕೇವಲ ಇಷ್ಟೇ ಅಲ್ಲ “inclusiveness” (ಒಳಗೊಳ್ಳುವಿಕೆ) ಇದೆ.
ಸನ್ಯಾಸಿಗಳಿಗೆ ಗಾಯತ್ರೀ ಮಂತ್ರವನ್ನೂ, ಗೃಹಸ್ಥರಿಗೆ ಪ್ರಣವ ಮಂತ್ರವನ್ನೂ ನಿಷೇಧಿಸಲಾಗಿದೆ. ಇದರರ್ಥ ಸನ್ಯಾಸಿಗಳನ್ನು ಗಾಯತ್ರೀ ಮಂತ್ರಗಳಿಂದ ವಂಚಿತರನ್ನಾಗಿಸಿದರು,ಗೃಹಸ್ಥರನ್ನು ಪ್ರಣವ ಮಂತ್ರದಿಂದ ವಂಚಿತರನ್ನಾಗಿಸಿದರು ಎಂದಾಗುತ್ತದೆಯೆ? ಇದೊಂದು ವ್ಯವಸ್ಥೆ ಅಷ್ಟೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮಹಾಭಾರತದಲ್ಲಿ ವೇದಾರ್ಥವೂ, ವೇದಗಳಲ್ಲಿ ಹೇಳದೆ ಇರುವುದರರಿಂದಲೇ “ಪಂಚಮವೇದ’ ಎಂದು ಪರಿಗಣಿತವಾಗಿದೆ. ಮಹಾಭಾರತವನ್ನು “ಸಂಹಿತಾ’ ಎಂದು ಶ್ರೀಮದಾಚಾರ್ಯರು ಕೊಂಡಾಡಿದ್ದಾರೆ. ವೇದತುಲ್ಯವಾದದ್ದೇ ಇದಕ್ಕೆ ಕಾರಣ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811