Advertisement
“ಯಾವುದೇ ಒಂದು ಕೆಲಸ ಮಾಡುವಾಗ ಈ ಜಗತ್ತಿಗೆ ಉತ್ತಮ ಸೇವೆ ಸಲ್ಲಿಸಲು ಭಗವಂತ ಅವಕಾಶ ಕೊಟ್ಟಿದ್ದಾನೆ. ಅದನ್ನು ಕರ್ತವ್ಯಪ್ರಜ್ಞೆಯಿಂದ ಮಾಡಬೇಕು. ಈ ಕರ್ತವ್ಯದಿಂದ ತಪ್ಪಿಸಿಕೊಳ್ಳುವಂತಿಲ್ಲ’ ಎಂಬ ಚಿಂತನೆ ಅಗತ್ಯ. ನಾನು, ನನ್ನದು ಎಂಬ ಚಿಂತನೆ ಬಿಟ್ಟಾಗ ನಿರ್ಲಿಪ್ತತೆ ಬರುತ್ತದೆ, ತತ್ಕ್ಷಣವೇ ಆ ಜಾಗದಲ್ಲಿ ಕರ್ತವ್ಯಪ್ರಜ್ಞೆಯನ್ನು ಪ್ರತಿಷ್ಠಾಪಿಸಬೇಕು. ಬೈಸಿಕಲ್ ತುಳಿಯುವಾಗ ಬ್ಯಾಲೆನ್ಸ್ಗೆ ಬರಬೇಕೆಂಬ ರೀತಿ ಇದು. ಇದು ಅಭ್ಯಾಸದಿಂದಲೇ ಸಾಧ್ಯ. ವಾಸ್ತವದಲ್ಲಿ ನಮ್ಮ ಕೈಯಲ್ಲಿ ಏನೂ ಇಲ್ಲ. ನಾವು ಎಣಿಸಿದ್ದು ಆಗುತ್ತದೆಯೆ? ನಾವು ಭಗವಧೀನ ಎಂಬ ಪ್ರಜ್ಞೆ ಅತ್ಯಗತ್ಯ. ಭಗವಂತ ಅಂದರೆ ಮಳೆ ಇದ್ದಂತೆ. ಮಳೆ ಬಂದ ಬಳಿಕ ಮಾವು ಮಾವಿನ ಫಲವನ್ನು, ಹಲಸು ಹಲಸಿನ ಫಲವನ್ನು ಹೀಗೆ ವಿವಿಧ ವೃಕ್ಷಸಂಕುಲಗಳು ಅವುಗಳ ಫಲವನ್ನು ಕೊಡುತ್ತವೆ. ಮಳೆ ಎಲ್ಲ ಮರಗಳಿಗೂ ಒಂದೇ. ಅವರವರ ಯೋಗ್ಯತೆಯಂತೆ ಫಲ ಸಿಗುತ್ತದೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811