Advertisement

Udupi ಗೀತಾರ್ಥ ಚಿಂತನೆ-5; ಜಯ ಗ್ರಂಥ, ವಿಜಯ ಗ್ರಂಥ

10:49 PM Aug 12, 2024 | Team Udayavani |

ಮಹಾಭಾರತ “ಜಯ’ ಗ್ರಂಥವಾದರೆ, ಅದರ ಮಧ್ಯದಲ್ಲಿ ಬರುವ ಭಗವದ್ಗೀತೆ “ವಿಜಯ’ ಗ್ರಂಥ ಎನಿಸಿದೆ. ಯುದ್ಧದ ಆರಂಭದಲ್ಲಿ ರಚನೆಯಾದ ಕೃತಿ ಇದು. ಯುದ್ಧದ ಸಮಯದಲ್ಲಿ “ವಿಜಯ’ ಹಾರೈಕೆಯೂ ಸಮಯೋಚಿತವಾಗಿದೆ.

Advertisement

ಅರ್ಜುನ ಉವಾಚ ಎಂದಿದ್ದರೆ, ಕೃಷ್ಣ ಹೇಳಿದಲ್ಲಿ ಭಗವಾನುವಾಚ ಎಂದು ಹೇಳಲಾಗಿದೆ. ಅವತಾರರೂಪಿಯಾಗಿ ಕೃಷ್ಣನ ಮಾತನ್ನು ಹೇಳಲಾಗಿದೆ. ಈ ಸಂದೇಶ ನೀಡುವುದಕ್ಕೋಸ್ಕರವೇ ಶ್ರೀಕೃಷ್ಣ ಅವತರಿಸಿದ್ದು ಎಂಬರ್ಥವನ್ನಿರಿಸಿಕೊಂಡೇ ಭಗವಾನುವಾಚ ಎಂದು ಹೇಳಿರುವುದು. ಗೀತೆಯಲ್ಲಾಗಲೀ, ಮಹಾಭಾರತದಲ್ಲಿಯಾಗಲೀ ಇರುವುದೆಲ್ಲವೂ ವೇದವ್ಯಾಸರ ಮಾತು. ಸಂಜಯ ಉವಾಚ, ಧೃತರಾಷ್ಟ್ರ ಉವಾಚ, ಭಗವಾನುವಾಚ ಎಂದು ಹೇಳಿದವರು ವೇದವ್ಯಾಸರು. ಜಯ (ಯ =1, ಜ=8) ಶಬ್ದ 18ನ್ನು (ಸಂಖ್ಯಾನಾಂ ವಾಮತೋಗತಿಃ) ಸೂಚಿಸುತ್ತದೆ. ಮಹಾಭಾರತವೂ 18ನ್ನು ಸೂಚಿಸುತ್ತದೆ. ಹೀಗಾಗಿ ಜಗತ್ತಿನ ಕ್ರೋಡೀಕರಣದ ಸಂಖ್ಯೆ 18.

ವ್ಯಾಖ್ಯಾನ ಮಾಡುವಾಗ ಗ್ರಂಥದ ಪ್ರಾಮಾಣ್ಯವನ್ನು ಸಿದ್ಧಮಾಡುವುದು ಮುಖ್ಯ. ಆದ್ದರಿಂದ ವೇದವ್ಯಾಸ ದೇವರ ಸ್ವರೂಪವನ್ನು ಬಣ್ಣಿಸಲಾಗಿದೆ. ದೇವತೆಗಳ ಪ್ರಾರ್ಥನೆಯಂತೆ ವೇದವ್ಯಾಸರು ಅವತಾರವೆತ್ತಿದರು. ಈ ಗ್ರಂಥಗಳ ರಚನೆಯ ಉದ್ದೇಶವೇ ಅವತಾರದ ಉದ್ದೇಶ. ಜನರಿಗೆ ಪರಿಪೂರ್ಣ ಮಾರ್ಗದರ್ಶನ, ಜ್ಞಾನಪ್ರಾಪ್ತಿಗಾಗಿ ದೇವತೆಗಳು ಭಗವಂತನನ್ನು ಪ್ರಾರ್ಥಿಸಿದರು, ವೇದವ್ಯಾಸರೂ ಲೋಕೋಪಕಾರಕ್ಕಾಗಿ ಅವತರಿಸಿದರು.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next