Advertisement

Udupi ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: 29 ಸಾಧಕರು, 5 ಸಂಸ್ಥೆಗಳ ಆಯ್ಕೆ

01:08 AM Nov 01, 2023 | Team Udayavani |

ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ 29 ಮಂದಿ ಹಾಗೂ 5 ಸಂಘ ಸಂಸ್ಥೆಗಳನ್ನು ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advertisement

ಯಕ್ಷಗಾನ: ಹೆಬ್ರಿಯ ಮಹಾಬಲ ನಾಯಕ್‌, ಬೈಂದೂರಿನ ಉಪ್ಪುಂದ ನಾಗೇಂದ್ರ ರಾವ್‌, ಕುಂದಾಪುರದ ಆಜ್ರಿ ಗೋಪಾಲ ಗಾಣಿಗ, ಬ್ರಹ್ಮಾವರದ ಹಾವಂಜೆ ಮಂಜುನಾಥ ರಾವ್‌, ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ, ದೈವಾರಾಧನೆ: ಕಾರ್ಕಳ ತಾಲೂಕಿನ ಬೀರು ಪಾಣರ, ಕೆ. ಗೋವಿಂದ ಬಂಗೇರ, ಮಾಳದ ಅಶೋಕ್‌ ಶೆಟ್ಟಿ, ರಂಗಭೂಮಿ: ಉಡುಪಿಯ ಗಂಗಾಧರ ಕಿದಿಯೂರು, ಚಿತ್ರಕಲೆ: ಕುಂದಾಪುರದ ಬಿ. ಕೃಷ್ಣ ದೇವಾಡಿಗ, ಸಂಗೀತ: ಬಜಗೋಳಿಯ ಸುರೇಶ್‌ ಸಾಲ್ಯಾನ್‌, ಭರತನಾಟ್ಯ: ಬಡಗಬೆಟ್ಟಿನ ಭಾಗೀರಥಿ ಎಂ. ರಾವ್‌, ಸಾಹಿತ್ಯ: ಕಾರ್ಕಳದ ಜ್ಯೋತಿ ಗುರುಪ್ರಸಾದ್‌, ನಾಟಿ ವೈದ್ಯ: ಶೇಡಿ ಮನೆಯ ಭೋಜು ನಾಯ್ಕ, ಉಳಿಯಾರಗೋಳಿಯ ಕೆ. ವಸಂತಿ ತಂತ್ರಿ, ಪಾಕತಜ್ಞ: ಮುಚ್ಲುಕೋಡುವಿನ ಪಿ. ಯಜ್ಞನಾರಾಯಣ ಭಟ್‌, ವೈದಕೀಯ: ಪರ್ಕಳದ ಡಾ| ಎ. ಸುಬ್ಬಣ್ಣ ಶೆಟ್ಟಿ, ಕ್ರೀಡೆ: ಕಾರ್ಕಳದ ಆಯುಷ್‌ ಶೆಟ್ಟಿ, ಕುಕ್ಕುಂದೂರಿನ ವಿದ್ಯಾ ಯು. ಶೆಟ್ಟಿ, ಪೃಥ್ವಿರಾಜ್‌ ಶೆಟ್ಟಿ, ಸಂಕೀರ್ಣ: ಬ್ರಹ್ಮಗಿರಿಯ ಡಾ| ಗಣನಾಥ ಎಕ್ಕಾರು, ಕೃಷಿ: ನಡೂರು ಗ್ರಾಮದ ಎ. ಭಾಸ್ಕರ ಪೂಜಾರಿ, ಮಣೂರು ಜಯರಾಮ ಶೆಟ್ಟಿ, ಹೇರೂರು ಬಾಬು ಆಚಾರ್ಯ, ಸಮಾಜ ಸೇವೆ: ಸಂತೆಕಟ್ಟೆ ಪ್ರವೀಣ್‌ ಶೆಟ್ಟಿ (ಹೊರನಾಡು ಕನ್ನಡಿಗ), ಕೋಟೆಯ ಅಸ್ಟಿನ್‌ ಕುಮಾರ್‌ ಕಟಪಾಡಿ, ಹೆಬ್ರಿ ಎಚ್‌. ಭಾಸ್ಕರ್‌ ಜೋಯಿಸ್‌, ಕಾರ್ಕಳದ ಆಯಿಷಾ, ಪತ್ರಿಕೋದ್ಯಮ: ಹರೀಶ್‌ ಕುಂದರ್‌, ಸಂಘ ಸಂಸ್ಥೆ: ಕುತ್ಯಾರು ಯುವಕ ಮಂಡಲ, ಬ್ರಹ್ಮಾವರ ಅಜಪುರ ಕರ್ನಾಟಕ ಸಂಘ, ಕಾರ್ಕಳ ಛತ್ರಪತಿ ಫೌಂಡೇಶನ್‌, ಉಡುಪಿಯ ಅಭಯಹಸ್ತ ಚಾರಿಟೆಬಲ್‌ ಟ್ರಸ್ಟ್‌, ಕುಂದಾಪುರದ ಯುವ ಬಂಟರ ಸಂಘ.

Advertisement

Udayavani is now on Telegram. Click here to join our channel and stay updated with the latest news.

Next