ಕುಳಗೇರಿ ಕ್ರಾಸ್: ರಾಜ್ಯದಲ್ಲಿ ಎಲ್ಲಿಯಾದರೂ ನಿತ್ಯ ಕನ್ನಡ ಭಾವುಟ ಹಾರಾಡುತ್ತಿದೆ ಎಂದರೆ ಅದು ನರಗುಂದ ತಾಲೂಕಿನ ಬೈರನಹಟ್ಟಿ ಮಠದಲ್ಲಿ ಮಾತ್ರ ಎನ್ನಬೇಕು. ಹೌದು. ಮಠಗ ಳೆಂದರೆ ಬರೀ ಪುರಾಣ-ಪ್ರವಚನ, ಪೂಜೆ-ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮ, ದಾಸೋಹ ನಡೆಸುವುದು ಎಂದು ಭಾವಿಸುವುದು ಸಹಜ.
Advertisement
ಆದರೆ ಕನ್ನಡದ ಕಟ್ಟಾಳು ಪೂಜ್ಯ ಶಾಂತಲಿಂಗ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮ ಜತೆಗೆ ಕನ್ನಡ ಭಾಷೆ, ಕನ್ನಡ ನೆಲ-ಜಲ ಹೀಗೆ ಸದ್ದಿಲ್ಲದೇ ಕನ್ನಡ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ಭುವನೇಶ್ವರಿ ಮೂರ್ತಿಗೆ ನಿತ್ಯ ಪೂಜೆ ನಡೆಯುತ್ತೆ. ಏಕೀಕರಣ ಹೋರಾಟಗಾರರ ಪರಿಚಯಿಸುತ್ತ ವರ್ಷಪೂರ್ತಿ ರಾಜ್ಯೋತ್ಸವ
ಆಚರಿಸಲಾಗುತ್ತದೆ. ಅಷ್ಟೇ ಸಾಹಿತಿಗಳು, ಸಾಧಕರನ್ನು ಗುರುತಿಸಿ ಸತ್ಕರಿಸುವ ಕೆಲಸ ಶ್ರೀಮಠದಿಂದ ಮಾಡಲಾಗುತ್ತಿದೆ. ಬಡ ಮಕ್ಕಳ ಭರವಸೆ ಬೆಳಕು: ಶ್ರೀಗಳು ಉಚಿತ ಪ್ರಸಾದ ನಿಲಯ ಸ್ಥಾಪಿಸುವುದರೊಂದಿಗೆ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನ-ಅಕ್ಷರ, ಸಂಸ್ಕೃತಿ-ಸಂಸ್ಕಾರ ಕಲಿಸುತ್ತ ಬಡಮಕ್ಕಳ ಪಾಲಿಗೆ ಭರವಸೆಯ ಬೆಳಕಾಗಿದ್ದಾರೆ. ಇಲ್ಲಿ ಅಧ್ಯಯನಗೈದ ವಿದ್ಯಾರ್ಥಿಗಳು ಕೃಷಿ, ಸರ್ಕಾರಿ ಸೇವೆ ಮಾಡಿದರೆ, ಕೆಲವರು ಕಾವಿ ದೀಕ್ಷೆ ಪಡೆದು ಮಠಾಧೀಶರಾಗಿದ್ದಾರೆ. ಸದ್ಯ 65 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
Related Articles
Advertisement
ಕನ್ನಡ ರಥ: ತಾಯಿ ಭುವನೇಶ್ವರಿ ಪಂಚಲೋಹದ ಮೂರ್ತಿಯನ್ನಿರಿಸಿ ಕನ್ನಡಾಂಬೆಯ ರಥವನ್ನು ನ.1ರಂದುಎಳೆಯಲಾಗುವುದು. ರಥೋತ್ಸವದಲ್ಲಿ ಸಾವಿರಾರು ಕನ್ನಡಿಗರು ಪಾಲ್ಗೊಳ್ಳಲಿದ್ದಾರೆ. *ಮಹಾಂತಯ್ಯ ಹಿರೇಮಠ