Advertisement
ಮತಜಾಗೃತಿಗಾಗಿ ಉಪ್ಪಿನಕುದ್ರು ವಿಗೆ ಆಗಮಿಸಿದ ಜಿಲ್ಲಾಧಿಕಾರಿಯನ್ನು ಅಲ್ಲಿನ ನಿವಾಸಿಗರು ನಾವು ಅನೇಕ ವರ್ಷ ಗಳಿಂದ ರಿಂಗ್ ರೋಡ್‌ಗಾಗಿ ಬೇಡಿಕೆ ಇಡುತ್ತಿದ್ದೇವೆ. ಇನ್ನೂ ಈಡೇರಿಲ್ಲ. ರಿಂಗ್ ರೋಡ್ ಆದರೆ ಇಲ್ಲಿನ ಹತ್ತಾರು ಮನೆಗಳಿಗೆ ಅನುಕೂಲ ವಾಗ ಲಿದೆ. ಇನ್ನು ಮುಖ್ಯ ರಸ್ತೆಯ ಸಮಸ್ಯೆಯೂ ಇದ್ದು, ಅದನ್ನು ನೀವೇ ಪರಿಹರಿಸಿಕೊಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಪಿಡಿಒ ಹಾಗೂ ವಿಎ ಅವರಿಗೆ ಪರಿಶೀಲಿಸಿ ತಿಳಿಸುವಂತೆ ಹೇಳಿದರಲ್ಲದೆ, ರಸ್ತೆ ಸಾಧ್ಯತೆ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ನಮ್ಮ ಪ್ರದೇಶ ಉಪ್ಪು ನೀರಿನಿಂದ ಆವೃತವಾಗಿದ್ದು, ಬಾವಿ ನೀರು ಪೂರ್ತಿ ಉಪ್ಪಾಗಿದೆ. ಕುಡಿಯಲು ಸಹಿತ ಯಾವುದಕ್ಕೂ ಬಳಸಲು ಸಾಧ್ಯವಿಲ್ಲ. ಪಂಚಾಯತ್‌ನಿಂದ 2 ದಿನಕ್ಕೊಮ್ಮೆ ನೀರು ಕೊಡುತ್ತಿದ್ದು, ಅದು ಸಹ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಜೆಜೆಎಂ ಆಗುತ್ತಿದ್ದರೂ ಈಗ ಈ ಭಾಗಕ್ಕೆ ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಬೇಕೆಂದು ಇಲ್ಲಿನ ಮನೆಯವರು ಮನವಿ ಮಾಡಿದರು. ತಾ.ಪಂ. ಇಒಗೆ ಗಮನಹರಿಸುವಂತೆ ಡಿಸಿ ಸೂಚಿಸಿದರು. ಇನ್ನು ಪೈಪ್‌ಲೈನ್‌ಗಾಗಿ ಉತ್ತಮ ಕಾಂಕ್ರೀಟ್ ರಸ್ತೆಯನ್ನು ಅಗೆಯಲು ಗುರುತು ಮಾಡಿದ್ದು, ಅದನ್ನು ಅಗೆ ಯದೇ ಮೋರಿಯಿದ್ದಲ್ಲಿ ಅಲ್ಲಿಂದ ಪೈಪ್‌ಲೈನ್ ಮಾಡಲಿ ಎನ್ನುವ ಸಲಹೆಯನ್ನು ಸ್ಥಳೀಯರು ನೀಡಿದರು. ಇದು ಉತ್ತಮ ಸಲಹೆಯಾಗಿದ್ದು, ರಸ್ತೆಯನ್ನು ಅಗೆಯದೇ ಈ ರೀತಿಯ ಕಾಮಗಾರಿ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ. ಸಿಇಒ ಪ್ರಸನ್ನ ಎಚ್., ಕುಂದಾ ಪುರ ಎಸಿ ರಶ್ಮಿ ಎಸ್.ಆರ್., ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮೀ, ತಾ.ಪಂ. ಇಒ ಮಹೇಶ್ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
Related Articles
ಉಪ್ಪಿನಕುದ್ರುವಿನಿಂದ ಹೊರಡುವ ವೇಳೆ ಎದುರಾದ ಚಿಣ್ಣರನ್ನು ಮಾತಾಡಿಸಿದ ಜಿಲ್ಲಾಧಿಕಾರಿಗಳಿಗೆ ಶಿಕ್ಷಕರ ಸಮಸ್ಯೆ ಕುರಿತು ಮಕ್ಕಳಿಂದ ಪ್ರಸ್ತಾವ ಕೇಳಿ ಬಂತು. ನಮ್ಮ ಶಾಲೆಯಲ್ಲಿ 112 ಮಂದಿ ಮಕ್ಕಳಿದ್ದೇವೆ. ಆದರೆ ಶಿಕ್ಷಕರ ಕೊರತೆಯಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಕರನ್ನು ಕೊಡಿ ಎಂದು ಮೊರೆಯಿಟ್ಟರು. ಈಗ ರಾಜ್ಯದ ಹಂತದಲ್ಲಿ ಶಿಕ್ಷಕರ ಕೌನ್ಸೆಲಿಂಗ್ ನಡೆಯುತ್ತಿದ್ದು, ಅದರಲ್ಲಿ ಶಿಕ್ಷಕರ ನಿಯೋಜನೆ ಹಾಗೂ ಅಗತ್ಯ ಬಿದ್ದರೆ ಅತಿಥಿ ಶಿಕ್ಷಕರನ್ನು ಒದಗಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
Advertisement