Advertisement
ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರಿಗೆ ಕುಡಿಯಲು ನೀರು, ಲಘು ಆಹಾರಗಳು ಸುಲಭವಾಗಿ ಸಿಗುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲ ಟೋಲ್ ಪ್ಲಾಜಾದಿಂದ 200-250 ಮೀಟರ್ ದೂರದೊಳಗೆ ಮಿನಿ ಕ್ಯಾಂಟೀನ್‌ಗಳು ಸೇವೆ ನೀಡಬೇಕು ಎಂದು 2022ರಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿಯಮ ರೂಪಿಸಿತ್ತು. ಅದರಂತೆ ಹೈವೇ ನೆಸ್ಟ್ ಎಂಬ ಮಿನಿ ಕ್ಯಾಂಟೀನ್‌ಗಳು ಕಾರ್ಯಾರಂಭಿಸಿದ್ದವು. ಆದರೆ ಇದೀಗ ಐದಾರು ತಿಂಗಳಿಂದ ಉಡುಪಿ, ದ.ಕ. ಉಭಯ ಜಿಲ್ಲೆಗಳಲ್ಲಿ ಈ ಕ್ಯಾಂಟೀನ್‌ಗಳ ಸ್ಥಗಿತಗೊಂಡಿದೆ. ಹೆದ್ದಾರಿಯಲ್ಲಿ ರಾತ್ರಿ 11 ಗಂಟೆ ವೇಳೆಗೆ ಎಲ್ಲ ಕ್ಯಾಂಟೀನ್, ಅಂಗಡಿಗಳು ಬಾಗಿಲು ಮುಚ್ಚುವುದರಿಂದ ಪ್ರಯಾಣಿಕರಿಗೆ ಆಹಾರ-ನೀರಿಗೆ ತೊಂದರೆ ಉಂಟಾಗುತ್ತದೆ.
ಹೈವೇ ಕ್ಯಾಂಟೀನ್‌ಗಳ ಅಕ್ಕ-ಪಕ್ಕದಲ್ಲೇ ನೀರಿನ ಎ.ಟಿ.ಎಂ. ಇರಬೇಕು. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಸಿಗಬೇಕು ಮತ್ತು ಟೋಲ್ ಪ್ಲಾಜಾದ ಎರಡೂ ಕಡೆ ಕ್ಯಾಂಟೀನ್ ಇದ್ದು ಇದರ ಪಕ್ಕದಲ್ಲೇ ಶೌಚಾಲಯವಿರಬೇಕು. ವಿಕಲಚೇತನರು ಶೌಚಾಲಯಕ್ಕೆ ಹೋಗಿ ಬರುವಂತೆ ವ್ಯವಸ್ಥೆ ಮಾಡಿರಬೇಕು ಎನ್ನುವ ನಿಯಮವಿದೆ. ಆದರೆ ಎಲ್ಲ ಕಡೆಗಳಲ್ಲಿ ರಸ್ತೆಯ ಒಂದು ಕಡೆಯಲ್ಲಿ ಮಾತ್ರ ಶೌಚಾಲಯ ಕಂಡುಬರುತ್ತದೆ. ಅಲ್ಲಿ ಕೂಡ ವಿಕಲಚೇತನರಿಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ.
Related Articles
Advertisement
ಹಲವು ಕಡೆ ಬಾಯ್ದೆರೆದ ರಸ್ತೆಗಳುವಾಹನಕ್ಕೆ ಟೋಲ್ ಪಾವತಿಸಿದ ಅನಂತರ ಅಡಚಣೆ ರಹಿತ ಸಂಚಾರಕ್ಕೆ ಪೂರಕವಾದ ರಸ್ತೆ ವ್ಯವಸ್ಥೆ ಇರಬೇಕು ಎನ್ನುವ ನಿಯಮವಿದೆ. ಆದರೆ ಹೆದ್ದಾರಿಯಲ್ಲಿ ಸಾಸ್ತಾನದಿಂದ ಕುಂದಾಪುರ ತನಕ ರಸ್ತೆಗಳು ಹಲವು ಕಡೆ ಬಾಯ್ದೆರೆದಿದ್ದು ನಿಧಾನವಾಗಿ ಮುಂದೆ ಸಾಗಬೇಕಾದ ಪರಿಸ್ಥಿತಿ ಇದೆ. ಬೀದಿ ದೀಪ ಹಾಳಾದರೆ 24 ಗಂಟೆಯೊಳಗೆ ಅದರ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎನ್ನುವ ನಿಯಮವಿದೆ. ಅದೂ ಕೂಡ ಪಾಲನೆಯಾಗುತ್ತಿಲ್ಲ. ಹೆದ್ದಾರಿಯಲ್ಲಿ ವಾಹನಗಳು ಕೆಟ್ಟು ನಿಂತರೆ ಅದನ್ನು ಬದಿಗೆ ಸರಿಸಲು ಟೋಯಿಂಗ್ ವಾಹನದ ಸೌಲಭ್ಯವಿರಬೇಕು. ಆದರೆ ದೊಡ್ಡ ವಾಹನಗಳು ಕೆಟ್ಟು ನಿಂತರೆ ಟೋಯಿಂಗ್ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ ಎನ್ನುವ ದೂರುಗಳಿದೆ. ರಾತ್ರಿ 11 ಗಂಟೆ ಬಳಿಕ ಪ್ರಯಾ ಣಿಕರಿಗೆ ಆಹಾರ- ನೀರಿಗೆ ತೊಂದರೆ
ಈಗಾಗಲೇ ಸೂಚನೆ ನೀಡಿದ್ದೇನೆ
ಹೆದ್ದಾರಿಯಲ್ಲಿನ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಹೆದ್ದಾರಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ.
– ಕೋಟ ಶ್ರೀನಿವಾಸ ಪೂಜಾರಿ, ಸಂಸದರು ಕ್ಯಾಂಟೀನ್ ಟೆಂಡರ್ ಹಂತದಲ್ಲಿದೆ
ಹೈವೇ ಕ್ಯಾಂಟೀನ್ ಟೆಂಡರ್ ಹಂತದಲ್ಲಿದೆ. ಡಾಮರು ಮಿಶ್ರಣ ಘಟಕ ಮಳೆಗಾಲದ ಕಾರಣಕ್ಕೆ ಸ್ಥಗಿತಗೊಂಡಿದ್ದರಿಂದ ರಸ್ತೆ ದುರಸ್ತಿ ತಡವಾಯಿತು. ಶೀಘ್ರವಾಗಿ ದುರಸ್ತಿ ಆರಂಭಿಸಲಾಗುವುದು. ಅಂಗವಿಕಲರ ಶೌಚಾಲಯ, ಎರಡೂ ಕಡೆ ಶೌಚಾಲಯ ಮೊದಲಾದ ನಿಯಮ 2020ರಲ್ಲಿ ರೂಪಿಸಲಾಗಿದ್ದು, ಈ ರಸ್ತೆಯ ಒಡಂಬಡಿಕೆ 2010ರಲ್ಲೇ ನಡೆದಿರುವುದರಿಂದ ಈ ಸೌಲಭ್ಯಗಳು ಒಳಗೊಂಡಿಲ್ಲ.
-ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ -ರಾಜೇಶ್ ಗಾಣಿಗ ಅಚ್ಲಾಡಿ