Advertisement
ಉಡುಪಿ ಲೋಕಸಭಾ ಕ್ಷೇತ್ರದಿಂದ 1977ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಟಿ.ಎ.ಪೈ ಅವರು ಕಾಂಗ್ರೆಸ್‌ನಿಂದ ಸಿಡಿದೆದ್ದ ದೇವರಾಜ ಅರಸು ಅವರ ಪಕ್ಷದಿಂದ 1980ರಲ್ಲಿ ಸ್ಪರ್ಧಿಸಿದ್ದರು. 1998ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ ಐ.ಎಂ.ಜಯರಾಮ ಶೆಟ್ಟಿ ಅವರು ಬಳಿಕ ಸಮಾಜವಾದಿ ಪಕ್ಷ, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. 2004ರಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಮನೋರಮಾ ಮಧ್ವರಾಜ್ ಅವರು ಆಗಷ್ಟೇ ಕಾಂಗ್ರೆಸ್‌ನಿಂದ ಬಂದವರಾಗಿ ದ್ದರು, ಮತ್ತೆ ಕಾಂಗ್ರೆಸ್‌ಗೆ ಹೋದರು.
ಬಳಿಕ ಜನತಾದಳ, 2008ರಲ್ಲಿ ಬಿಜೆಪಿ ಸೇರಿ ಬೆಂಗಳೂರಿನಲ್ಲಿ ಸಂಸದರಾಗಿ ಆಯ್ಕೆಯಾದರು. 1984ರಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾದ ಡಿ.ಕೆ.ತಾರಾದೇವಿ ಬಳಿಕ, ಬಿಜೆಪಿ ಸೇರಿ ಕೇಂದ್ರ ಸಚಿವೆಯಾಗಿ ಈಗ ಕಾಂಗ್ರೆಸ್‌ನಲ್ಲಿದ್ದಾರೆ. 1996ರಲ್ಲಿ ಗೆಲುವು ಸಾಧಿಸಿದ ಜನತಾದಳದ ಬಿ.ಎಲ್. ಶಂಕರ್, ಈಗ ಕಾಂಗ್ರೆಸ್ ಮುಂದಾಳುಗಳಲ್ಲಿ ಒಬ್ಬರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 1991ರಿಂದ 99ರ ವರೆಗೆ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ವಿ.ಧನಂಜಯ ಕುಮಾರ್, 2012ರ ಬಳಿಕ ಕೆಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದರು. ಟಿಕೆಟ್ ಯಾರಿಗೆ?
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾದ ಬಳಿಕ 2012ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಅದಕ್ಕೂ ಹಿಂದೆ ಜನತಾದಳ ದಲ್ಲಿದ್ದರು; ಪಕ್ಷೇತರರಾಗಿಯೂ ಇದ್ದರು. ಈಗ ಬಿಜೆಪಿ ಸೇರಿ ಪ್ರಮುಖ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ.
Related Articles
ಸಾಧಿಸಿದ ಶೋಭಾ ಕರಂದ್ಲಾಜೆ ಅವರು ಈ ಹಿಂದೆ ಯಡಿಯೂರಪ್ಪನವರು ಸ್ಥಾಪಿಸಿದ ಕೆಜೆಪಿ ಪಕ್ಷದ
ಮುಂದಾಳಾಗಿದ್ದರು.
Advertisement