ಮುಂಬೈ: ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಬಿಜೆಪಿಗೆ ದ್ರೋಹ ಬಗೆದಿದ್ದು, ಅವರಿಗೆ ಪಾಠ ಕಲಿಸಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ (ಸೆ.05) ಮುಂಬೈನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಮತಬ್ಯಾಂಕ್ ರಾಜಕಾರಣವಿಲ್ಲ; ಇಸ್ರೇಲ್ ವಿಚಾರದಲ್ಲಿ ನಮ್ಮ ನಿಲುವು ಸಾಕ್ಷಿ: ಜೈಶಂಕರ್
“ರಾಜಕೀಯದಲ್ಲಿ ನಾವು ಏನು ಬೇಕಾದರೂ ಸಹಿಸಿಕೊಳ್ಳಬಹುದು, ಆದರೆ ದ್ರೋಹವನ್ನಲ್ಲ ಎಂದು ಶಾ ಹೇಳಿದ್ದಾರೆ”. ಶಿವಸೇನಾ ಪಕ್ಷ ಇಬ್ಭಾಗವಾಗಲು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೊಣೆಗಾರರಾಗಿದ್ದಾರೆ ಎಂದು ಶಾ ಆರೋಪಿಸಿದರು.
ಠಾಕ್ರೆಯ ದುರಾಸೆಯಿಂದಾಗಿ ಅವರ ಪಕ್ಷದ ಮುಖಂಡರು ಬಂಡಾಯ ಏಳುವಂತೆ ಮಾಡಿದೆ. ಏಕನಾಥ್ ಶಿಂಧೆ ಬಂಡಾಯ ಸಾರಲು ಬಿಜೆಪಿಯ ಕೈವಾಡವಿಲ್ಲ ಎಂದ ಶಾ, ಠಾಕ್ರೆಯ ನಿರ್ಧಾರಗಳಿಂದಾಗಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿರುವುದಾಗಿ ತಿಳಿಸಿದರು.
ಉದ್ಧವ್ ಠಾಕ್ರೆ ಕೇವಲ ಭಾರತೀಯ ಜನತಾ ಪಕ್ಷಕ್ಕೆ ಮಾತ್ರ ದ್ರೋಹವೆಸಗಿಲ್ಲ, ಸಿದ್ದಾಂತಕ್ಕೂ ದ್ರೋಹ ಎಸಗಿದ್ದಾರೆ. ಅಲ್ಲದೇ ಮಹಾರಾಷ್ಟ್ರದ ಜನರು ನೀಡಿದ ಜನಾದೇಶವನ್ನು ಅವಮಾನಿಸಿದ್ದಾರೆ ಎಂದು ಶಾ ದೂರಿದರು.