Advertisement

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

06:56 PM Sep 21, 2024 | Team Udayavani |

ಮಣಿಪಾಲ: ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ Udayavani.com ಹಾಗೂ ಮಂಗಳೂರು ಬಿಜೈನ ಐ ಯಾಮ್‌ ಜಯಲಕ್ಷ್ಮೀ, ಸಹ ಪ್ರಾಯೋಜಕರಾದ ಜಿಎಲ್‌ ಆಚಾರ್ಯ ಜ್ಯುವೆಲ್ಲರ್ಸ್‌, ನಂದಿನಿ ಜತೆಗೂಡಿ ಆಯೋಜಿಸಿದ್ದ “ನಮ್ಮನೆ ಕೃಷ್ಣ-2024” ಪುಟಾಣಿ ಮಕ್ಕಳ ರೀಲ್ಸ್‌ ಸ್ಪರ್ಧೆ ಏರ್ಪಡಿಸಲಾಗಿದ್ದು ಅದರಂತೆ ಮೆಚ್ಚುಗೆ ಗಳಿಸಿದ ಹದಿನೈದು ರೀಲ್ಸ್ ಗಳಲ್ಲಿ ಪ್ರಥಮ ಬಹುಮಾನ ಗಳಿಸಿದ ರೀಲ್ಸ್ ಅನ್ನು ಇಂದು ಶನಿವಾರ (ಸೆ.21) ಪ್ರಸಾರ ಮಾಡುತ್ತಿದ್ದೇವೆ.

Advertisement

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಒಂದು ವರ್ಷದಿಂದ ಐದು ವರ್ಷದೊಳಗಿನ ಮಕ್ಕಳ ರೀಲ್ಸ್‌ ಅನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ನಮ್ಮನೆ ಕೃಷ್ಣ ರೀಲ್ಸ್‌ ಸ್ಪರ್ಧೆಗೆ ನಮ್ಮ ಊಹೆಗೂ ಮೀರಿ ರೀಲ್ಸ್‌ ಗಳು ಬಂದಿದ್ದವು. ಇದರಲ್ಲಿ ಆಯ್ಕೆಯಾದ ಹದಿನೈದು ರೀಲ್ಸ್ ಗಳನ್ನು ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 21ರವರೆಗೆ ದಿನಾ ಒಂದರಂತೆ Udayavani.Com, ನಮ್ಮ ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌ ಹಾಗೂ ಯೂಟ್ಯೂಬ್‌ ಚಾನಲ್‌ ನಲ್ಲಿ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ಅದರಂತೆ ಇಂದು (ಸೆ.21) ಪ್ರಥಮ ಬಹುಮಾನ ಗಳಿಸಿದ ರೀಲ್ಸ್ ಅನ್ನು ಪ್ರಸಾರ ಮಾಡಲಿದ್ದು ವೇಣೂರಿನ ಶರಣ್ ಪಿ. ಹಾಗೂ ಅರ್ಪಿತಾ ದಂಪತಿಯ 1 ವರ್ಷ 2 ತಿಂಗಳಿನ ಮಗು ಸುಗುಣ ಎಸ್. ಕೋಟ್ಯಾನ್ ಅವರದ್ದಾಗಿದೆ.

ಆಯ್ಕೆಯಾದ ಮೂರು ರೀಲ್ಸ್‌ ಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಆಯ್ದ 12 ರೀಲ್ಸ್‌ ಸೇರಿದಂತೆ ಎಲ್ಲಾ ಬಹುಮಾನ ವಿಜೇತರಿಗೆ ಆಕರ್ಷಕ ಗಿಫ್ಟ್‌ ಹ್ಯಾಂಪರ್ಸ್ ನೀಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next