Advertisement
ಹೀಗಿದೆ ನಿಯಮಯಾವುದೇ ಭೂಮಿಯನ್ನು ಕೃಷಿಯೇತರ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸುವುದಾದರೆ ಅಂತಹ ಭೂಮಿಯನ್ನು ಸರಕಾರದ ನಿಯಮಾ ವಳಿ ಪ್ರಕಾರ ಶುಲ್ಕ ಕಟ್ಟಿ ಅಳತೆ, ನಕ್ಷೆ ಮಾಡಿಸಿ ಭೂ ಪರಿವರ್ತನೆ (ಕನ್ವರ್ಷನ್) ಮಾಡಿಸಬೇಕು. ಹಾಗೆ ಕನ್ವರ್ಷನ್ ಮಾಡಿದ ಭೂಮಿಯಲ್ಲಿ ಕಟ್ಟಡ, ಮನೆ ಇತ್ಯಾದಿ ರಚನೆಗೆ ಅನುಮತಿ ನೀಡಲಾಗುತ್ತದೆ. ಅಂತಹ ಕಟ್ಟಡಕ್ಕೆ ಕಟ್ಟಡ/ಮನೆ ನಂಬರ್ ನೀಡಿ ತೆರಿಗೆ ಹಾಕಲಾಗುತ್ತದೆ. ಆ ಕಟ್ಟಡಕ್ಕಷ್ಟೇ ವಿದ್ಯುತ್, ನೀರಿನ ಸಂಪರ್ಕ ದೊರೆಯುತ್ತದೆ. ಅದು ಅಧಿಕೃತ ಕಟ್ಟಡ/ಮನೆ ಎನಿಸಲ್ಪಡುತ್ತದೆ.
ಸ್ವಂತ ಉಪಯೋಗಕ್ಕಾದರೆ ಆತನ ಸ್ವಂತ ಜಾಗದಲ್ಲಿ ನಿರ್ದಿಷ್ಟ ಅಳತೆಯ ಸ್ಥಳವನ್ನು ಕನ್ವರ್ಷನ್ ಮಾಡಿ, ಅನುಮತಿ ಪಡೆದು ಕಟ್ಟೋಣ ಪ್ರಕ್ರಿಯೆಗೆ ಮುಂದುವರಿಯಬಹುದು. ಆದರೆ ಒಂದೇ ಜಾಗವನ್ನು ತುಂಡರಿಸಿ ಅನೇಕರಿಗೆ ಮಾರಾಟ ಮಾಡುವುದಾದರೆ ಅಂತಹ ಜಾಗದ ಖರೀದಿದಾರರು ಜಾಗರೂಕರಾಗಿರಲೇಬೇಕು. ಏಕೆಂದರೆ ಈಗಿನ ನಿಯಮ ಪ್ರಕಾರ, ಒಬ್ಬ ವ್ಯಕ್ತಿ 1 ಎಕರೆ ಜಾಗವನ್ನು ಕನ್ವರ್ಷನ್ ಮಾಡುವು ದಾದರೆ ಆತ ಅದರಲ್ಲಿ 38 ಸೆಂಟ್ಸ್ ಜಾಗವನ್ನು ಸ್ಥಳೀಯಾಡಳಿತ ಸಂಸ್ಥೆಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡುವ ಮೂಲಕ ನೀಡಬೇಕು. ಹಾಗೆ ನೀಡಿದ ಜಾಗದಲ್ಲಿ ಲೇಔಟ್ ಮಾಲಕರು ರಸ್ತೆ, ನೀರು, ಆಟದ ಮೈದಾನ, ಉದ್ಯಾನವನ ನಿರ್ಮಿಸುತ್ತಾರೆ ಅಥವಾ ಅನು ದಾನ ಲಭ್ಯತೆ ಮೇರೆಗೆ ಸರಕಾರ ನಿರ್ಮಿಸುತ್ತದೆ. ಉಳಿಕೆ 62 ಸೆಂಟ್ಸ್ ಜಾಗವನ್ನು ನಿರ್ದಿಷ್ಟ ಅಳತೆಯ ಸೈಟ್‌ಗಳಾಗಿ ವಿಂಗಡಿಸಬೇಕು. ಒಟ್ಟು ಜಾಗ ದಲ್ಲಿ ಪ್ರತೀ ಸೈಟ್‌ಗೂ ರಸ್ತೆ ತೋರಿಸಿ ಇತರ ಮೂಲಭೂತ ಆವಶ್ಯಕತೆಗೆ ಅನುವು ಮಾಡಿ ಕೊಟ್ಟ ವಿನ್ಯಾಸ ನಕ್ಷೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ದೊರೆತ ಬಳಿಕ ಜಾಗ ವನ್ನು ಮಾರಾಟ ಮಾಡಬಹುದಾಗಿದೆ. ಹೀಗೆ ಕಾನೂನುಬದ್ಧ ಪ್ರಕ್ರಿಯೆಯಲ್ಲಿ ಮಾಡಿದ ಲೇಔಟ್‌ನಲ್ಲಿ ಜಾಗ ಖರೀದಿಸಿದವರಿಗೆ ಮನೆ ರಚನೆಗೆ ಅನುಮತಿ ದೊರೆಯುತ್ತದೆ. ಖಾತೆ ಬದಲಾವಣೆ ಇಲ್ಲ
ವಿನ್ಯಾಸ ನಕ್ಷೆಗೆ ಅನುಮತಿ ಪಡೆಯದ ಸೈಟು ಗಳನ್ನು ಖರೀದಿಸಿ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿದ್ದರೂ ಅಂತಹ ಭೂಮಿಯ ಖಾತೆ ಬದಲಾವಣೆ (ಆರ್‌ಟಿಸಿಯಲ್ಲಿ ಖರೀದಿ ದಾರನ ಹೆಸರು ನಮೂದಿಸುವ ಪ್ರಕ್ರಿಯೆ) ಮಾಡದಂತೆ ಸರಕಾರ ಸ್ಪಷ್ಟ ಸುತ್ತೋಲೆ ನೀಡಿದೆ. ಒಂದೊಮ್ಮೆ ಖಾತೆ ಬದಲಾಯಿಸಿದರೆ ಅಂತಹ ಸ್ಥಳೀಯ ಸಂಸ್ಥೆಯ ಆಯುಕ್ತರು, ಪೌರಾ ಯುಕ್ತರು, ಮುಖ್ಯಾಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Related Articles
ವಿನ್ಯಾಸ ನಕ್ಷೆಗೆ ಅನುಮತಿ ದೊರೆಯದೆ, ಸೈಟ್ ಖರೀದಿಸಿದವರ ಖಾತೆ ಬದಲಾವಣೆ ಯಾಗದೆ ಅವರಿಗೆ ಬ್ಯಾಂಕ್ ಸೌಲಭ್ಯ, ಸರಕಾರಿ ಸೌಲಭ್ಯ ದೊರೆಯುವುದಿಲ್ಲ. ಕಟ್ಟಡ ರಚನೆಗೆ ಅನುಮತಿಯೂ ಇಲ್ಲ. ಒಂದೊಮ್ಮೆ ಅಕ್ರಮವಾಗಿ ಮನೆ ಕಟ್ಟಿದರೂ ಮನೆ ನಂಬರ್, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ದೊರೆಯುವುದಿಲ್ಲ. ಅಕ್ರಮ ಸಕ್ರಮ ಕಾಯ್ದೆಯೇ ಬರಬೇಕು ಅಥವಾ ಭಾರೀ ದಂಡ ಪಾವತಿಸಬೇಕು. ಆದ್ದರಿಂದ ನಗರ ಪ್ರದೇಶ ದಲ್ಲಿ ಅಂತಹ ಸೈಟುಗಳನ್ನು ಕೊಂಡ ಪ್ರತೀ ತಾಲೂಕಿನ ನೂರಾರು ಮಂದಿ ಈಗ ಅತಂತ್ರ ರಾಗಿದ್ದು, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಂಡಲೆಯುತ್ತಿದ್ದಾರೆ. ಇವರಿಗೆ ಅಕ್ರಮಸಕ್ರಮ ಭಾಗ್ಯವೇ ಬರಬೇಕಿದೆ.
Advertisement
- ಸೈಟು ಕೊಳ್ಳುವ ಮುನ್ನ ಯೋಚಿಸಿ- ನ.ಅ.ಪ್ರಾ. ಅನುಮತಿ ರಹಿತ ಸೈಟಿಗಿಲ್ಲ ವಸತಿ ಅನುಮತಿ
- ವಿನ್ಯಾಸ ನಕ್ಷೆ ಇದೆಯೇ ಎಂದು ಪರೀಕ್ಷಿಸಿ ಸೈಟು ಪಡೆಯಿರಿ
- ರಿಯಲ್ ಎಸ್ಟೇಟ್ ಲಾಬಿಯಿಂದ ಭಾರೀ ಮೋಸ
- ಅಂಥ ಜಾಗದ ಆರ್‌ಟಿಸಿ ಕೂಡ ಆಗುವುದಿಲ್ಲ ಸಮಸ್ಯೆ ಉಂಟಾಗಿರುವುದು ಹೀಗೆ
ಸಾಮಾನ್ಯವಾಗಿ ಎಕರೆಗಟ್ಟಲೆ ಜಾಗ ಖರೀದಿಸಿ ಅದನ್ನು ಏಕಗಂಟಿನಲ್ಲಿ ಕನ್ವರ್ಷನ್ ಮಾಡಿಸಲಾಗುತ್ತದೆ. ಬಳಿಕ ಅದನ್ನು ಸೈಟುಗಳಾಗಿ ವಿಂಗಡಿಸಿ ಮಾರಾಟ ಮಾಡಲಾಗುತ್ತದೆ. ಸರಕಾರದ ನಿಯಮ ಪ್ರಕಾರ ಲೇಔಟ್‌ನ ಸೈಟ್‌ಗಳಿಗೆ 30 ಅಡಿ ಅಗಲದ ದಾರಿ ಇರಬೇಕು. ಆದರೆ ಈ ರೀತಿ ಏಕಗಂಟಿನ ಕನ್ವರ್ಷನ್ ಮಾಡಿದ ವ್ಯಕ್ತಿ ತನ್ನಲ್ಲಿನ ಸೈಟ್‌ಗಳಿಗೆ ಮನಸೋ ಇಚ್ಛೆಯಷ್ಟು ಅಗಲದ ದಾರಿ ಬಿಟ್ಟಿರುತ್ತಾನೆ. ಸೈಟ್‌ಗಳ ನೋಂದಣಿಯೇನೋ ಆಗುತ್ತದೆ. ಆದರೆ ಎಷ್ಟು ದಿನ ಕಳೆದರೂ ಪಹಣಿ ಪತ್ರಿಕೆಯಲ್ಲಿ (ಆರ್‌ಟಿಸಿ) ಖರೀದಿಸಿದವನ ಹೆಸರು ದಾಖಲಾಗುವುದೇ ಇಲ್ಲ. ಮಾತ್ರವಲ್ಲ, ಮನೆ ರಚನೆಗೆ ಸ್ಥಳೀಯಾಡಳಿತದ ಅನುಮತಿಗೆ ಹೋದಾಗ ಅನುಮತಿಯೂ ದೊರೆಯುವುದಿಲ್ಲ. ಏಕೆಂದರೆ ಆ ಸೈಟ್‌ನ ವಿನ್ಯಾಸನಕ್ಷೆ ನ.ಅ.ಪ್ರಾ.ದಿಂದ ಅನುಮೋದನೆ ಆಗಿರುವುದಿಲ್ಲ! ಚಳ್ಳೆಹಣ್ಣು ತಿನ್ನಿಸುವ ಸೈಟ್ ಮಾಲಕ ಸರಕಾರಕ್ಕೆ ಜಾಗ ಬಿಟ್ಟುಕೊಡದೆಯೇ ಅಷ್ಟೂ ಸೈಟ್‌ಗಳನ್ನು ಮಾರಿಯಾಗಿರುತ್ತದೆ.