Advertisement

ಊರ ತುಂಬಾ ಅವಳಿಗಳು

12:30 AM Feb 14, 2019 | |

ಒಂದು ಕುಟುಂಬದಲ್ಲಿ ಅವಳಿ ಮಕ್ಕಳು ಜನಿಸಿದರೆ ಎಲ್ಲರಿಗೂ ಸಂತೋಷವಾಗುತ್ತೆ. ಅದೇ ರೀತಿ ಇಡೀ ಊರಿನ ತುಂಬಾ ಅವಳಿ ಮಕ್ಕಳೇ ಜನಿಸಿದರೆ ಹೇಗನ್ನಿಸುತ್ತೆ? ಹೌದಲ್ಲವಾ ಖಂಡಿತ ವಿಜ್ಞಾನಕ್ಕೂ ಸವಾಲೆಸೆಯುವ ಇಂಥ ಒಂದು ಊರು ಭಾರತದಲ್ಲಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಕೊಡಿನಿ ಎನ್ನುವ ಹಳ್ಳಿಯೇ ಇಂಥ ವಿಸ್ಮಯ ಹಾಗೂ ಕೌತುಕ ಮೂಡಿಸುವ ಊರು. ಇದನ್ನು ಆಂಗ್ಲ ಭಾಷೆಯಲ್ಲಿ ಟ್ವಿನ್‌ ಟೌನ್‌ (ಅವಳಿಗಳ ಪಟ್ಟಣ) ಅಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಹುಟ್ಟುವ ಮಕ್ಕಳಲ್ಲಿ 1000ದಲ್ಲಿ 6 ಜನ ಮಾತ್ರ ಅವಳಿಗಳಾಗಿ ಹುಟ್ಟುವ ಸಾಧ್ಯತೆಗಳಿರುತ್ತವೆ. ಆದರೆ ಈ ಗ್ರಾಮದಲ್ಲಿ ಮಾತ್ರ ಪ್ರತಿ 1000 ಮಕ್ಕಳಲ್ಲಿ 650 ರಿಂದ 700 ಮಕ್ಕಳು ಅವಳಿಗಳಾಗಿ ಹುಟ್ಟುವುದು ಗ್ಯಾರೆಂಟಿಯಂತೆ. 

Advertisement

ವಿಜ್ಞಾನಿಗಳು ಬಂದಿದ್ದರು
ಈ ಗ್ರಾಮದಲ್ಲಿ ಈ ರೀತಿಯಾಗಿ ಮಕ್ಕಳು ಹುಟ್ಟೋದಕ್ಕೆ ಕಾರಣವೇನು ಎಂಬುದನ್ನು ಅರಿಯಲು ಜರ್ಮನಿ ಮೂಲದ ವಿಜ್ಞಾನಿಗಳು ಇಲ್ಲಿಗೆ ಆಗಮಿಸಿ ಅವರ ಡಿಎನ್‌ಎ ಪರೀಕ್ಷೆ ಮಾಡೋದಕ್ಕೆ ಶುರು ಮಾಡಿದರು. ಆದರೆ, ಇದರ ಹಿಂದಿನ ಕಾರಣ ಅರಿಯಲು ಅವರಿಗೆ ಸಾಧ್ಯವಾಗದೇ ಅವರು ಹಿಂದಿರುಗಬೇಕಾಯಿತು. ನಂತರ ಬಂದ ಅಮೇರಿಕಾ ಮೂಲದ ವಿಜ್ಞಾನಿಗಳು ಇಲ್ಲಿನ ಮಕ್ಕಳ ಡಿಎನ್‌ಎ ಮತ್ತು ಈ ಪ್ರಾಂತ್ಯದ ನೀರನ್ನು ಪರೀಕ್ಷಿಸಿದಾಗ ಆ ನೀರಿನಲ್ಲಿ ಒಂದು ರೀತಿಯ ವಿಶೇಷವಾದ ರಾಸಾಯನಿಕ ಇರುವುದು ಕಂಡುಬಂದಿತು. ಆದರೆ ಅದು ಯಾವ ರೀತಿಯ ಕೆಮಿಕಲ್‌ ಮತ್ತು ಅದರ ಹೆಸರನ್ನು ಬಹಿರಂಗಪಡಿಸದೆ ಗೌಪ್ಯವಾಗಿಡಲಾಗಿದೆಯಂತೆ. ಇನ್ನು ಈ ಊರಿನ ಹೆಣ್ಣು ಮಕ್ಕಳು ಬೇರೆ ಊರಿನ ಗಂಡಿನ ಜೊತೆ ಮದುವೆಯಾದರೂ ಅಥವಾ ಈ ಊರಿನ ಗಂಡು ಮಕ್ಕಳಿಗೆ ಬೇರೆ ಊರಿನ ಹೆಣ್ಣು ಮಕ್ಕಳನ್ನು ತಂದುಕೊಂಡರೂ ಅವರಿಗೂ ಅವಳಿ ಮಕ್ಕಳೇ ಹುಟ್ಟುತ್ತವೆಯಂತೆ. 

ವರ್ಷದಿಂದ ವರ್ಷಕ್ಕೆ ಅವಳಿ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. ಊರಿನ ಹಿರಿಯರು ನೆನಪಿಸಿಕೊಳ್ಳುವ ಹಾಗೆ ಮೊದಲ ಅವಳಿಗಳು ಹುಟ್ಟಿದ್ದು 1949ರಲ್ಲಿ. ಅದಕ್ಕೂ ಹಿಂದೆ ಅವಳಿಗಳು ಇದ್ದಿರಬಹುದಾದ ಸಾಧ್ಯತೆ ಇದ್ದರೂ ಅದನ್ನು ಖಚಿತಪಡಿಸಿಕೊಳ್ಳಲು ಯಾವುದೇ ಆಧಾರವಿಲ್ಲ.

ನೈಜೀರಿಯಾದಲ್ಲಿ ಅವಳಿಗಳ ರಾಜಧಾನಿ
ಪ್ರಪಂಚದಲ್ಲಿ ಅವಳಿಗಳ ಪಟ್ಟಣವೆಂದೇ ಹೆಸರಾದ ಹಲವು ಪ್ರದೇಶಗಳಿವೆ. ಅವುಗಳಲ್ಲೆಲ್ಲಾ ಪ್ರಸಿದ್ಧವಾದುದು ನೈಜೀರಿಯಾದ ಇಗ್‌ಬೋ ಒರಾ. ಈ ಪಟ್ಟಣ ಜಗತ್ತಿನ ಅವಳಿಗಳ ರಾಜಧಾನಿ ಎಂದೇ ಹೆಸರು ಮಾಡಿದೆ. ಈ ವಿಚಿತ್ರ ವಿದ್ಯಮಾನ ಸ್ಥಳೀಯರ ಆಹಾರಪದ್ಧತಿಯನ್ನು ಅವಲಂಬಿಸಿರಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯ. 

ಪುರುಷೋತ್ತಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next