Advertisement

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

07:42 PM Dec 28, 2024 | Team Udayavani |

ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ
ಕಾಸರಗೋಡು: ಕರಿವೇಡಗಂ ಪಡ್ಪು ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಅಬ್ದುಲ್‌ ಹಕೀಂ ಅವರ ಪತ್ನಿ ಜನತ್ತುಲ್‌ ನಿಶಾ (29) ಮತ್ತು 11, 9 ಮತ್ತು 8 ವರ್ಷ ಪ್ರಾಯದ ಮಕ್ಕಳು ನಾಪತ್ತೆಯಾಗಿದ್ದಾರೆಂದು ಬೇಡಗಂ ಪೊಲೀಸರಿಗೆ ದೂರು ನೀಡಲಾಗಿದೆ. ಡಿ.24 ರಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Advertisement

ನೇಣು ಬಿಗಿದು ಆತ್ಮಹತ್ಯೆ
ಕಾಸರಗೋಡು: ಚಿಟ್ಟಾರಿಕಲ್‌ ಆಯನ್ನೂರಿನಲ್ಲಿ ಟ್ಯಾಪಿಂಗ್‌ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಪತ್ತನಂತಿಟ್ಟ ಪುಲಿಕ್ಕುಳಿ ತೆಕ್ಕೇಕರದ ಚಂದ್ರಬಾಬು (5) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಎಂಡಿಎಂಎ ಸಹಿತ ಬಂಧನ
ಕಾಸರಗೋಡು: ನಗರದ ಬ್ಯಾಂಕ್‌ ರಸ್ತೆ ಪರಿಸರದಿಂದ 3.87 ಗ್ರಾಂ ಎಂಡಿಎಂಎ ಸಹಿತ ನೀರ್ಚಾಲು ಮೂಕಂಪಾರೆ ನಿವಾಸಿ ಎಂ.ಎಸ್‌.ಅಬ್ದುಲ್‌ ಮುಜೀಬ್‌(23) ನನ್ನು ಪೊಲೀಸರು ಬಂಧಿಸಿದ್ದಾರೆ. ರಹಸ್ಯ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಮೋಟಾರ್‌ ಕಳವು
ಬದಿಯಡ್ಕ: ಪಳ್ಳತ್ತಡ್ಕದ ಮೊಹಮ್ಮದ್‌ ಕುಂಞಿ ಅವರ ತೆಂಗಿನ ತೋಟದ ಶೆಡ್‌ನಿಂದ 7.5 ಎಚ್‌.ಪಿ. ಮೋಟಾರ್‌ ಕಳವಿಗೀಡಾಗಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next