ಮುಂಬೈ: ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಹೇಳಿಕೆ ಕುರಿತಂತೆ ಇದೀಗ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ಅನುರಾಗ್ ಕಶ್ಯಪ್ ನಡುವೆ ಟ್ವೀಟ್ ಸಮರ ಆರಂಭವಾಗಿದೆ.
ಅನುರಾಗ್ ಕಶ್ಯಪ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದ “ಕಾಂತಾರಾ ಮತ್ತು ಪುಷ್ಪಗಳಂತಹ ಚಿತ್ರಗಳು ಚಿತ್ರರಂಗವನ್ನು ನಾಶ ಮಾಡುತ್ತಿದೆ” ಹೇಳಿಕೆ ಕುರಿತ ಸುದ್ದಿಯನ್ನು ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ, “ಬಾಲಿವುಡ್‌ನ ಏಕೈಕ ಮಿಲಾರ್ಡ್‌ನ ಅಭಿಪ್ರಾಯಗಳನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ನೀವು ಒಪ್ಪುತ್ತೀರಾ?” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ:ನನಗೆ ನನ್ನದೇ ಶಕ್ತಿಯಿದೆ; ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ: ಯಡಿಯೂರಪ್ಪ
ಇದಕ್ಕೆ ಕಟುವಾಗಿ ಪ್ರತಿಕ್ರಿಯೆ ನೀಡಿದ ಅನುರಾಗ್ ಕಶ್ಯಪ್, “ಸರ್ ಇದು ನಿಮ್ಮ ತಪ್ಪಲ್ಲ. ನಿಮ್ಮ ಚಲನಚಿತ್ರಗಳ ಸಂಶೋಧನೆಯು ನನ್ನ ಸಂಭಾಷಣೆಗಳ ಮೇಲಿನ ನಿಮ್ಮ ಟ್ವೀಟ್‌ಗಳಂತೆಯೇ ಇರುತ್ತದೆ. ನಿಮ್ಮ ಮತ್ತು ನಿಮ್ಮ ಮಾಧ್ಯಮದ ಸ್ಥಿತಿ ಒಂದೇ ಆಗಿದೆ. ಮುಂದಿನ ಬಾರಿ ಗಂಭೀರವಾದ ಸಂಶೋಧನೆ ಮಾಡಿ” ಎಂದು ಟ್ವೀಟ್ ಮಾಡಿದ್ದಾರೆ.
Related Articles
ಇದಕ್ಕೆ ತಿರುಗೇಟು ನೀಡಿರುವ ವಿವೇಕ್ ಅಗ್ನಿಹೋತ್ರಿ, “ಭೋಲೆನಾತ್, ‘ದಿ ಕಾಶ್ಮೀರ್ ಫೈಲ್ಸ್’ ಗಾಗಿ ನಾನು ಮಾಡಿದ ನಾಲ್ಕು ವರ್ಷಗಳ ಸಂಶೋಧನೆಯು ಸುಳ್ಳು ಎಂದು ಸಾಬೀತುಪಡಿಸಿ. ಗಿರಿಜಾ ಟಿಕೂ, ಬಿ.ಕೆ.ಗಂಜು, ವಾಯುಪಡೆಯ ಹತ್ಯೆ, ನಾಡಿಮಾರ್ಗ್ – ಎಲ್ಲವೂ ಸುಳ್ಳು. 700 ಪಂಡಿತರ ವಿಡಿಯೋಗಳು ಸುಳ್ಳು. ಯಾವ ಹಿಂದೂಗಳೂ ಸಾಯಲಿಲ್ಲ. ಇದನ್ನು ಸಾಬೀತುಪಡಿಸಿ. ಇದರಿಂದ ನಾನು ‘ದೋಬಾರಾ’ (ಮತ್ತೆ) ತಪ್ಪು ಮಾಡುವುದಿಲ್ಲ” ಎಂದು ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಮುಂದಿನ ಚಿತ್ರ ‘ದಿ ವ್ಯಾಕ್ಸಿನ್ ವಾರ್’ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ, ಇದು ಮುಂದಿನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಥಿಯೇಟರ್‌ಗಳಿಗೆ ಬರಲಿದೆ. ಅನುರಾಗ್ ಕಶ್ಯಪ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ದೋಬಾರಾ’ ಇತ್ತೀಚೆಗೆ ತೆರೆ ಕಂಡಿತ್ತು. ಇದರಲ್ಲಿ ತಾಪ್ಸಿ ಪನ್ನು ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.