ಅದೊಂದು ಕಾಲವಿತ್ತು, ಭಾರತೀಯ ಚಿತ್ರರಂಗವೆಂದರೆ ಕೇವಲ ಬಾಲಿವುಡ್… ಹಿಂದಿ ಸಿನಿಮಾಗಳೇ ಶ್ರೇಷ್ಠ ಉಳಿದವು ಕನಿಷ್ಟ. ವಾಸ್ತವದಲ್ಲಿ ಹೀಗಿಲ್ಲದಿದ್ದರೂ, ಆ ಕಥಾನಕವೇ ಎಲ್ಲರ ತಲೆಯಲ್ಲಿ ಕೂತಿತ್ತು. ವಿದೇಶಗಳಿಗೂ ಬಾಲಿವುಡ್ ಮಾತ್ರ ಗೊತ್ತಿದ್ದ ಸಮಯವದು. ಆದರೆ, ಈಗ ಎಲ್ಲವೂ ಬದಲಾಗಿದೆ. “ಕೋಟೆ ಕಟ್ಟಿ ಮೆರೆದೊರೆಲ್ಲ ಮಣ್ಣಾದರು’ ಎಂಬ ಮಾತಿನಂತೆ ಬಾಲಿವುಡ್‌ನ ಪ್ರಭಾವಳಿ ಕಡಿಮೆಯಾಗಿ ಭಾರತೀಯ ಸಿನಿ ಪ್ರೇಕ್ಷಕನ ಮನಸ್ಸು ಈಗ ದಕ್ಷಿಣ ಭಾರತದ ಚಿತ್ರರಂಗದತ್ತ ವಾಲಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ, ತಮಿಳು, ಮಲಯಾಳಂ, ತೆಲುಗು ಚಿತ್ರಗಳು ಮೇಲುಗೈ ಸಾಧಿಸುತ್ತಿರುವುದಂತೂ ನಿಜ.
ಅಲ್ಲಿ ಸೋಲು ಇಲ್ಲಿ ಗೆಲುವು!
ಈ ವರ್ಷ ಬಾಲಿವುಡ್‌ನಲ್ಲಿ ಹೇಳಿಕೊಳ್ಳುವಂಥ ಸಿನಿಮಾಗಳು ಬಂದಿದ್ದು ಕಡಿಮೆ, ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗಳೆಲ್ಲ ಮೊದಲ ಪ್ರದರ್ಶನಗಳಲ್ಲೇ ಹುಸಿ ಮಾಡಿದವು. ಅಕ್ಷಯ್ ಕುಮಾರ್ ಅವರ”ಖೇಲ್ ಖೇಲ್ ಮೇ’, “ಸμìರಾ’, ಹೃತಿಕ್ ರೋಶನ್ ಅವರ “ಫೈಟರ್’ ಮತ್ತಿತರ ಸಿನಿಮಾಗಳು ಫ್ಲಾಪ್ ಪಟ್ಟಿಯಲ್ಲಿ ಸೇರಿಕೊಂಡವು. ಕೆಲ ಸಿನಿಮಾ ಗಳು ತಕ್ಕ ಮಟ್ಟಿಗೆ ಗಳಿಕೆ ಕಂಡರೂ, ಜನಪ್ರಿಯ ವಾಗುವಲ್ಲಿ ಎಡವು ಬಿದ್ದಿವೆ. ಹಾಗಾಗಿ ಬಾಲಿವುಡ್ ಈ ವರ್ಷ ಬಹಳ ಮಂಕಾಗಿದೆ.
ಆದರೆ, ಇದಕ್ಕೆ ದಕ್ಷಿಣ ಚಿತ್ರರಂಗ ಪೂರ್ಣ ತದ್ವಿರುದ್ಧ. ಸದ್ಯದ ಮಟ್ಟಿಗೆ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರವೆಂದರೆ ಅದು ಪುಷ್ಪ-2 ಹಿಂದಿ ಅವತರಣಿಕೆ. ರಿಲೀಸ್ ಆದ 6 ದಿನಗ ಳಲ್ಲಿ 1000 ಕೋಟಿ ರೂ. ಮೈಲಿಗಲ್ಲು ತಲುಪಿದ ಸಿನಿಮಾ, ಇನ್ನು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿ¨
ಬ್ರಾಂಡ್, ಬಿಸಿನೆಸ್‌ನಲ್ಲಿ ಕ್ಲಿಕ್
ಸಿನಿಮಾ ಒಂದು ಬಿಸಿನೆಸ್, ಸ್ಟಾರ್ ನಟ, ನಟಿಯರೇ ಅದಕ್ಕೆ ಬ್ರ್ಯಾಂಡ್‌ಗಳು. ಈ ಸೂತ್ರವನ್ನು ಚಾಚೂತಪ್ಪದೇ ಪಾಲಿಸಿ ಯಶಸ್ವಿಯಾಗಿದೆ ಪುಷ್ಪ 2. ಚಿತ್ರದ ಆರಂಭದಿಂದಲೇ ಪ್ರಚಾರಕ್ಕಿಳಿದಿದ್ದ ಚಿತ್ರತಂಡ ನಿರಂತರವಾಗಿ ಪ್ರೇಕ್ಷಕರೊಂದಿಗೆ ಒಡನಾಟವಿಟ್ಟುಕೊಂಡಿತ್ತು. ಚಿತ್ರ ರಿಲೀಸ್‌ಗೂ ಮುನ್ನವೇ ಒಟಿಟಿ, ಸ್ಯಾಟಲೈಟ್, ಆಡಿಯೋ ಹಕ್ಕುಗಳ ಮಾರಾಟ ಮೂಲಕವೇ 1000 ಕೋಟಿ ಗಳಿಸಿಕೊಂಡಿತ್ತು. ಈಗ ಚಿತ್ರ ಬಿಡುಗಡೆಯಾಗಿ 1000 ಕೋಟಿ ಗಳಿಸಿಕೊಂಡಿದೆ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಪುಷ್ಪ 2 ಚಿತ್ರ ಸದ್ಯ 500 ಕೋಟಿಗೂ ಅಧಿಕ ಲಾಭ ಗಳಿಸಿಕೊಂಡಿದೆ. ಸಿನಿ ಪ್ರೇಕ್ಷಕರ ಬಾಯಿ ಮಾತಿನಿಂದ ಸೊಶಿಯಲ್ ಮೀಡಿಯಾ ಪ್ರಚಾರದವರೆಗೆ ಇದರ ಹವಾ ಸೃಷ್ಟಿಯಾಗಿತ್ತು. ಒಟ್ಟಾರೆ ಸಿನಿಮಾ ದೃಷ್ಟಿಯಿಂದ ನೋಡಿದಾಗ, ಸಿನಿಮಾವನ್ನು ಹೇಗೆ ಬ್ರ್ಯಾಂಡ್ ಮಾಡಬೇಕು ಮತ್ತದರಿಂದ ಬಿಸಿನೆಸ್ ಹೇಗೆ ಗಳಿಸಿಕೊಳ್ಳಬೇಕು ಎಂಬುದಕ್ಕೆ ಪುಷ್ಪ 2 ಹೊಸ ಸಾಕ್ಷಿಯಾಗಿದೆ.