ಬೆಂಗಳೂರು: ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರಿಗೆ 2024ರ ಸೆ.4ರಿಂದ ಅನ್ವಯಿಸುವಂತೆ ಮಾಸಿಕ ಕನಿಷ್ಠ ವೇತನ ಮತ್ತು ವ್ಯತ್ಯಾಸವಾಗುವ ತುಟ್ಟಿಭತ್ಯೆಯನ್ನು ಪಾವತಿಸಲು ಸರಕಾರ ಆದೇಶ ಹೊರಡಿಸಿದೆ.
ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರಿಗೆ 15,196.72 ರೂ. ಮಾಸಿಕ ಕನಿಷ್ಠ ವೇತನದ ಜತೆಗೆ ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ ನಿಗದಿಪಡಿಸುವ ವ್ಯತ್ಯಯವಾಗುವ ತುಟ್ಟಿಭತ್ಯೆಯನ್ನು ಪಾವತಿಸಲು ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಮಾಸಿಕ ಕನಿಷ್ಠ ವೇತನದ ಜತೆಗೆ ಸೆ.4ರಿಂದ ತುಟ್ಟಿಭತ್ಯೆಯನ್ನೂ ಸೇರಿಸಿ ಕೊಡಲಾಗುತ್ತದೆ.
ಗ್ರಾ. ಪಂ. ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಾದ ಅರಿವು ಕೇಂದ್ರಗಳ ಕೆಲಸದ ಸಮಯವನ್ನು 6ರಿಂದ 8 ಗಂಟೆಗಳಿಗೆ ಏರಿಸಿ ಮಾಸಿಕ 16,382.52 ರೂ. ಮಾಸಿಕ ಕನಿಷ್ಠ ವೇತನ ಮತ್ತು 1,542 ರೂ. ವ್ಯತ್ಯಯವಾಗುವ ತುಟ್ಟಿ ಭತ್ತೆಯನ್ನು ಸೇರಿಸಿ ಮಾಸಿಕ 17,924.52 ರೂ. ಪಾವತಿಸಲಾಗುವುದು.
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ