Advertisement

Mobile Library: ಮಕ್ಕಳಲ್ಲಿ ಓದಿನ ಹವ್ಯಾಸ ಬೆಳೆಸುವ ಸಂಚಾರಿ ಗ್ರಂಥಾಲಯ

05:08 PM Aug 21, 2024 | Team Udayavani |

ಜಗತ್ತು ಆಧುನಿಕತೆಯ ಹಿಂದೆ ಓಡುತ್ತಿದೆ. ಇಂದಿನ ದಿನಗಳಲ್ಲಿ ಅದಕ್ಕೆ ತಕ್ಕಂತೆ ಬದಲಾವಣೆಗಳು ಅನಿವಾರ್ಯ. ಕಾಲಕ್ಕನುಗುಣವಾಗಿ ಮಾನವನ ದಿನನಿತ್ಯದ ಚಟುವಟಿಕೆಗಳಲ್ಲಿ, ವಿಚಾರಶೀಲತೆಯಲ್ಲಿ ಹಾಗೂ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೇರಳವಾದ ಅನ್ವೇಷಣೆಗಳನ್ನು ಕಾಣುತ್ತಿದ್ದೇವೆ. ಅದೇ ರೀತಿ ಉದ್ಯೋಗಿಗಳಿಗೆ ಸಮಯದ ಅಭಾವ ಮತ್ತು ಡಿಜಿಟಲ್‌ ಯುಗಕ್ಕೆ ಮಕ್ಕಳು ಅಂಟಿಕೊಂಡಿರುವುದು ಈಗೀನ ಆಧುನಿಕತೆಯ ಒಂದಿಷ್ಟು ಭಾಗಗಳು.

Advertisement

ಮೊಬೈಲ್‌, ಲ್ಯಾಪ್‌ಟಾಪ್‌ ಹಾಗೂ ವಿಡಿಯೋ ಗೈಮ್ಸ್ ಗಳಂತಹ ಇನ್ನಿತರ ತಂತ್ರಜ್ಞಾನಗಳಿಗೆ ಅಂಟಿಕೊಂಡಿರುವ ಮಕ್ಕಳು, ಓದುವ ಹವ್ಯಾಸಗಳಿಂದ ದೂರವಾಗುತ್ತಿದ್ದಾರೆ. ಪುಸ್ತಕ ಓದುವ ಹವ್ಯಾಸವನ್ನು ವೃದ್ದಿಗೊಳಿಸುವ ವಿಶೇಷ ಪ್ರಯತ್ನ ಇಂದಿನ ದಿನಗಳಲ್ಲಿ ಅನಿವಾರ್ಯತೆ ಇದೆ. ಇದು ಕೂಡ ಅಂತಹ ಬದಲಾವಣೆಗಳ ಒಂದು ಭಾಗ, ಪುಸ್ತಕ ಓದುವ ಹವ್ಯಾಸ ನಶಿಸುತ್ತಿರುವ ಈ ದಿನಗಳಲ್ಲಿ ಇಂದಿನ ಪೀಳಿಗೆಗೆ ಓದಿನ ಹವ್ಯಾಸ ವೃದ್ದಿಗೊಳಿಸುವ ವಿಶೇಷ ಪ್ರಯತ್ನವೇ ಸಂಚಾರಿ ಗ್ರಂಥಾಲಯ.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಹದಾಸೆಯಿಂದ ಮೊಬೈಲ್‌ ಗೀಳಿನಿಂದ ವಿದ್ಯಾರ್ಥಿಗಳನ್ನು ಓದಿನ ಕಡೆಯ ಸೆಳೆಯುವ ಉದ್ದೇಶದಿಂದ ಜ್ಞಾನವಾಹಿನಿ ಎಂಬ ಈ ಸಂಚಾರಿ ಗ್ರಂಥಾಲಯವನ್ನು ಹುಟ್ಟು ಹಾಕಿದರು. ಇದು ಈಗ ದಕ್ಷಿಣ ಕನ್ನಡ, ಮೈಸೂರು ಮತ್ತು ಧಾರವಾಡ ಜಿಲ್ಲೆಯಾದ್ಯಂತ ಸಂಚರಿಸುತ್ತಾ ಮಕ್ಕಳಿಗೆ ಓದಿನ ಅಭಿರುಚಿಯನ್ನು ಪಸರಿಸುತ್ತಿದೆ.

ಅದೇ ರೀತಿ ಮಕ್ಕಳಿಗೆ ತಂತ್ರಜ್ಞಾನ ಮಾದರಿಗಳಿಗೆ ಅನುಗುಣವಾಗಿ ಈ ಸಂಚಾರಿ ಗ್ರಂಥಾಲಯವನ್ನು ಮಾರ್ಪಾಡು ಮಾಡಲಾಗಿದೆ. ಹವಾನಿಯಂತ್ರಿತ ಹಳದಿ ಬಸ್ಸನ್ನು ಓದಿನ ರುಚಿ ತಕ್ಕಂತೆ ರೂಪಿಸಲಾಗಿದೆ. ಸ್ಟಡಿ ಟೇಬಲ್‌, ಸುಮಾರು 10 ರಿಂದ 12ಜನರು ಕುಳಿತು ಓದಬಹುದಾದ ಗ್ರಂಥಾಲಯ ಇದಾಗಿದೆ. ಫ್ಯಾನ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಇದರಲ್ಲಿ ಕಾಣಬಹುದು. ಪುಸ್ತಕ ಹಾಗೂ ಇ-ಪುಸ್ತಕ ವ್ಯವಸ್ಥೆಯನ್ನು ನಾವಿಲ್ಲಿ ನೋಡಬಹುದು.

ನ್ಯಾಷನಲ್‌ ಡಿಜಿಟಲ್‌ ಲೈಬ್ರರಿ ಸೌಲಭ್ಯದ ಮೂಲಕ ಕುಳಿತಲ್ಲೆ ಹಲವಾರು ತರಹದ ಪುಸ್ತಕಗಳನ್ನು ಓದಬಹುದಾಗಿ. ಕಾಟೂìನ್‌ ಪುಸ್ತಕಗಳು, ಪಂಚತಂತ್ರ ಕಥೆಗಳು, ಕನ್ನಡ ಸಾಹಿತ್ಯ ಪುಸ್ತಕಗಳು ಸೇರಿದಂತೆ ಸುಮಾರು 221 ಕನ್ನಡ ಪುಸ್ತಕ ಸಹಿತ ಒಂದು ಸಾವಿರ ಪುಸ್ತಕಗಳು, ಮಕ್ಕಳಲ್ಲಿ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು ಇಂಗ್ಲಿಷ್‌ ಹಾಗೂ ಕನ್ನಡ ದಿನಪತ್ರಿಕೆಗಳು ಸಹ ಸಂಚಾರಿ ಗ್ರಂಥಾಲಯದಲ್ಲಿದ್ದು ಈಗ ಓದಿಗೆ ಲಭ್ಯವಿವೆ. ಪ್ರಾಥಮಿಕ ಶಾಲೆಗಳ ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಗ್ರಂಥಾಲಯವನ್ನು ರೂಪಿಸಿದ್ದು, ಅತೀ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಕಳೆದವರಿಗೆ ವಿಶೇಷ ಗೌರವವಾಗಿ ಪ್ರಮಾಣಪತ್ರವನ್ನು ಸಹ ಇಲ್ಲಿ ನೀಡಲಾಗುತ್ತದೆ.

Advertisement

ಅದೇ ರೀತಿ ಭೇಟಿ ನೀಡಿ ಪ್ರತಿಯೊಬ್ಬ ಓದುಗನಿಗೂ ರಶೀದಿಯನ್ನು ಕೊಡಲಾಗುತ್ತದೆ. ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿನ ಮಕ್ಕಳನ್ನು ಉದ್ದೇಶವಾಗಿಟ್ಟುಕೊಂಡು ಜಿಲ್ಲಾದ್ಯಂತ ಸಂಚಾರಿ ಗ್ರಂಥಾಲಯ ಬಸ್ಸು ಸಂಚರಿಸುತ್ತಿದೆ. ಉದ್ಯಾನದಂತಹ ಸಾರ್ವಜನಿಕ ಸ್ಥಳಗಳ ಬಳಿ ಈ ವ್ಯವಸ್ಥೆ ಒದಗಿಸುವುದರಿಂದ ಆಡಿ ದಣಿದ ಮಕ್ಕಳು ವಿಶ್ರಾಂತಿಗಾಗಿ ಬಂದು ಪುಸ್ತಕಗಳತ್ತ ಕಣ್ಣಾಡಿಸಿ ಓದಲು ಮನಸ್ಸು ಮಾಡುತ್ತಾರೆ. ಮಕ್ಕಳೊಂದಿಗೆ ಬರುವ ಪೋಷಕರು, ಹಿರಿಯರು ಕೂಡ ಪುಸ್ತಕಗಳನ್ನು ತೆಗೆದು ಓದುತ್ತಾರೆ. ಈ ಮೂಲಕ ಈ ಯೋಜನೆ ಸಫಲವಾಗುತ್ತಿರುವುದು ಸಂತೋಷದ ಸಂಗತಿ.

 ವಿಜಯಕುಮಾರ್‌ ಹೀರೇಮಠ ಗದಗ

Advertisement

Udayavani is now on Telegram. Click here to join our channel and stay updated with the latest news.

Next