Advertisement
ಫುಟ್ಪಾತ್ಗೆ ತಾಗಿಕೊಂಡು ಶೆಡ್ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ. ಗ್ರಂಥಾಲಯದ ಮುಂಭಾಗದಲ್ಲೇ ರಿಕ್ಷಾಗಳು ನಿಲ್ಲುವ ಕಾರಣ ಹಿರಿಯ ನಾಗರಿಕರು, ಗ್ರಂಥಾಲಯ, ಪಾರ್ಕ್ಗೆ ತೆರಳುವ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ ಎನ್ನಲಾಗಿದೆ. ಈಗಾಗಲೇ ಶಾಶ್ವತ ಶೆಡ್ ಅಳವಡಿಕೆ ಕಾರ್ಯ ಆರಂಭಗೊಂಡಿದೆ. ಆದರೆ ಇದು ಪಾಲಿಕೆಯಿಂದ ಪೂರ್ವಾ ನುಮತಿ ಪಡೆಯದೆ ಕಾಮಗಾರಿ ನಡೆಸಲಾ ಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
ಗ್ರಂಥಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದು ಅವರ ವಾಹನಗಳ ಪಾರ್ಕಿಂಗ್ಗೆ ಜಾಗವಿಲ್ಲ. ಈ ಹಿಂದೆ ಗ್ರಂಥಾಲಯದ ಮುಂಭಾಗದ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದರು. ಆದರೆ ರಿಕ್ಷಾ ನಿಲ್ದಾಣ ವಿಸ್ತರಣೆಯಾಗಿರುವ ಕಾರಣ ಸಾರ್ವಜನಿಕರಿಗೆ ಪಾರ್ಕಿಂಗ್ಗೆ ಜಾಗ ಇಲ್ಲದಂತಾಗಿದೆ. ಮತ್ತೂಂದೆಡೆ ಪಾದಚಾರಿಗಳಿಗೂ ಸಮಸ್ಯೆಯಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
Related Articles
ದ್ವಿಚಕ್ರ ವಾಹನದಲ್ಲಿ ಹಾಗೂ ನಡೆದುಕೊಂಡು ಬರುವ ಸಾರ್ವಜನಿಕರಿಗೆ ಗ್ರಂಥಾಲಯಕ್ಕೆ ತೆರಳಲು ಅನುಕೂಲವಾಗುವಂತೆ ಪ್ರವೇಶ ದ್ವಾರದ ಮುಂಭಾಗದಲ್ಲಿ ಆಟೋಗಳನ್ನು ನಿಲ್ಲಿಸಬಾರದು. ಇದಕ್ಕೆ ಆಟೋ ಚಾಲಕರ ಸಂಘ ಸಹಕರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗುವಂತೆ ಶೆಲ್ಟರ್ ನಿರ್ಮಿಸುವುದು ಸರಿಯಲ್ಲ. ಪಾರ್ಕ್, ಗ್ರಂಥಾಲಯಕ್ಕೆ ತೆರಳುವವರಿಗೆ ಅನು ಕೂಲವಾಗುವಂತೆ ಅವಕಾಶ ನೀಡಬೇಕು.
-ವಿಶ್ವನಾಥ್, ಸ್ಥಳೀಯರು
Advertisement
ಅನುಮತಿ ನೀಡಿಲ್ಲವೆಲೆನ್ಶಿಯಾ ಬಳಿ ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಪಾಲಿಕೆಯಿಂದ ಯಾವುದೇ ಅನುಮತಿ ನೀಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಾರ್ವಜನಿಕರಿಗೆ ತೊಂದರೆಯಾಗುವ ಅಕ್ರಮ ಕಾಮಗಾರಿಯಾದರೆ ಕ್ರಮ ಕೈಗೊಳ್ಳಲಾಗುವುದು.
-ಆನಂದ್ ಸಿ.ಎಲ್.,ಮನಪಾ ಆಯುಕ್ತರು