Advertisement

ಸೌದಿ ರಾಯಭಾರ ಕಚೇರಿಯಲ್ಲೇ ಖ್ಯಾತ ಪತ್ರಕರ್ತ ಜಮಾಲ್‌ ಹತ್ಯೆ?

06:00 AM Oct 08, 2018 | |

ಇಸ್ತಾಂಬುಲ್‌: ಕಳೆದ 4 ದಿನಗಳಿಂದ ನಾಪತ್ತೆಯಾಗಿದ್ದ ಸೌದಿ ಅರೇಬಿಯಾದ ಖ್ಯಾತ ಪತ್ರಕರ್ತ ಜಮಾಲ್‌ ಖಶೋಗ್ಗಿ ಅವರನ್ನು ಟರ್ಕಿಯಲ್ಲಿರುವ ಸೌದಿ ರಾಯಭಾರ ಕಚೇರಿಯೊಳಗೇ ಹತ್ಯೆಗೈಯ್ಯ ಲಾಗಿದೆಯೇ ಎಂಬ ಶಂಕೆ ಮೂಡಿದೆ. ಟರ್ಕಿಯ ಅಧಿಕಾರಿಗಳು ಇಂತಹು ದೊಂದು ಶಂಕೆ ವ್ಯಕ್ತಪಡಿಸಿದ್ದರೆ, ಸೌದಿ ಅರೇಬಿಯಾದ ರಾಯಭಾರ ಕಚೇರಿಯು ಈ ಆರೋಪವನ್ನು ತಳ್ಳಿಹಾಕಿದೆ. ಅಲ್ಲದೆ, ಇದೊಂದು ಆಧಾರರಹಿತ ಆರೋಪ ಎಂದು ಹೇಳಿದೆ.

Advertisement

ಸೌದಿಯ ನೀತಿ ನಿಬಂಧನೆಗಳ ಟೀಕಾಕಾರರಾಗಿದ್ದ ಪತ್ರಕರ್ತ ಜಮಾಲ್‌, ಜೀವಭಯದಿಂದಾಗಿ ಕಳೆದ ವರ್ಷದಿಂದ ವಾಷಿಂಗ್ಟನ್‌ನಲ್ಲಿ ವಾಸವಾಗಿದ್ದರು. 4 ದಿನಗಳ ಹಿಂದೆ ತಮ್ಮ ಭಾವೀ ಪತ್ನಿಯ ಜೊತೆಗೆ ಇಸ್ತಾಂಬುಲ್‌ನಲ್ಲಿರುವ ಸೌದಿ ರಾಯಭಾರ ಕಚೇರಿಗೆ ತೆರಳಿದ್ದರು. ಮದುವೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ದಾಖಲೆಗಳನ್ನು ಪಡೆಯಲೆಂದು ಅವರು ಅಲ್ಲಿಗೆ ಹೋಗಿದ್ದರು. ಆದರೆ, ಒಳಗೆ ಹೋದ ಜಮಾಲ್‌ ವಾಪಸ್‌ ಬರಲೇ ಇಲ್ಲ ಎಂದು ಅವರ ಭಾವೀ ಪತ್ನಿ ಆರೋಪಿಸಿದ್ದಾರೆ. 

ಅವರು ನಿಗೂಢವಾಗಿ ನಾಪತ್ತೆಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಟರ್ಕಿ ಅಧಿಕಾರಿಗಳು, ಇದೊಂದು ಪೂರ್ವನಿಯೋಜಿತ ಕೊಲೆ. ರಾಯಭಾರ ಕಚೇರಿಯೊಳಗೇ ಅವರನ್ನು ಹತ್ಯೆಗೈದು, ಶವವನ್ನು ಯಾರಿಗೂ ಗೊತ್ತಾಗದಂತೆ ಹೊರಗೆ ಸಾಗಿಸಿರಬಹುದು ಎಂದು ಶಂಕಿಸಿದ್ದಾರೆ. ಕಚೇರಿಯ ಒಳಗೆ ಹೋದ ಜಮಾಲ್‌ ಹೊರಗೇ ಬಂದಿಲ್ಲ ಎಂದು ಟರ್ಕಿ ವಾದಿಸಿದರೆ, ಅವರು ಅಂದೇ ವಾಪಸಾಗಿದ್ದಾರೆ ಎಂದು ಸೌದಿ ಹೇಳಿದೆ. ಇದೇ ವೇಳೆ, ಸೌದಿಯಿಂದಲೂ ತನಿಖಾ ತಂಡವೊಂದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next