Advertisement

ಟ್ರಂಪ್‌, ಮೋದಿ ನೀತಿಯಲ್ಲಿ ವೈರುಧ್ಯವಿಲ್ಲ: ಇವಾಂಕಾ

06:00 AM Nov 23, 2017 | Harsha Rao |

ವಾಷಿಂಗ್ಟನ್‌:  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ “ಅಮೆರಿಕ ಫ‌ಸ್ಟ್‌’ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ “ಮೇಕ್‌ ಇನ್‌ ಇಂಡಿಯಾ’ ನೀತಿ ಪರಸ್ಪರ ವೈರುಧ್ಯದ್ದಲ್ಲ ಎಂದು ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌ ಹೇಳಿದ್ದಾರೆ.

Advertisement

ಹೈದರಾಬಾದ್‌ನಲ್ಲಿ ಜಾಗತಿಕ ಆರ್ಥಿಕ ಸಮ್ಮೇಳನಕ್ಕೆ ಮುಂದಿನ ವಾರ ಆಗಮಿಸಲಿರುವ ಇವಾಂಕಾ, ಅಮೆರಿಕ ಫ‌ಸ್ಟ್‌ ಎಂದರೆ ಇತರ ದೇಶಗಳನ್ನು ದೂರವಿಡುವುದು ಎಂದಲ್ಲ. ಎಲ್ಲ ದೇಶಗಳೂ ತಮ್ಮ ದೇಶದ ಪ್ರಜೆಗೆ ಪ್ರಥಮ ಆದ್ಯತೆ ನೀಡುತ್ತವೆ. ಹಾಗಂತ ಇತರ ದೇಶಗಳನ್ನು ದೂರವಿಡಲಾಗದು ಎಂದು ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಇವಾಂಕಾ ಭೇಟಿ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಈ ಸಮ್ಮೇಳನಕ್ಕೆ ಅಮೆರಿಕ ಕೂಡ ಆತಿಥ್ಯ ವಹಿಸಿದೆ. ಇದು ಭಾರತ ಮತ್ತು ಅಮೆರಿಕದ ಸುಸ್ಥಿರ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next