Advertisement

PM MODI: ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನಕ್ಕೆ ಕಾಂಗ್ರೆಸ್‌ ಸಂಚು

12:07 AM Nov 15, 2024 | Team Udayavani |

ಮುಂಬೈ: ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ಹೊಂದುವಂತೆ ಮಾಡಲು ಸಂಚು ರೂಪಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Advertisement

ನ.20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಛತ್ರಪತಿ ಸಾಂಭಾಜಿನಗರ, ರಾಯ್‌ಗಢ ಜಿಲ್ಲೆಯ ಪನ್‌ವೆಲ್‌, ಮುಂಬೈನಲ್ಲಿ ಬಿರುಸಿನ ಪ್ರಚಾರ ಸಭೆ ನಡೆಸಿದ್ದಾರೆ.

ಛತ್ರಪತಿ ಸಾಂಭಾಜಿನಗರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ “ಜಮ್ಮುಕಾಶ್ಮೀರ ವಿಧಾನಸಭೆಯಲ್ಲಿ ರದ್ದಾಗಿರುವ ಸಂವಿಧಾನದ 370ನೇ ವಿಧಿ ಜಾರಿಗೊಳಿಸುವ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. ಈ ಮೂಲಕ ಅಲ್ಲಿಗೆ ಪ್ರತ್ಯೇಕ ಸಂವಿಧಾನ ಜಾರಿಗೆ ತರಲು ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಸಂಚು ರೂಪಿಸುತ್ತಿವೆ ಎಂಬ ಅಂಶ ಸಾಬೀತಾಗಿದೆ’ ಎಂದು ಟೀಕಿಸಿದ್ದಾರೆ.

2019ರಲ್ಲಿ ವಿಶೇಷ ಸ್ಥಾನಮಾನ ರದ್ದು ಮಾಡುವ ಸಂದರ್ಭದಲ್ಲಿಯೇ ಕಾಂಗ್ರೆಸ್‌ ಸರ್ಕಾರದ ತೀರ್ಮಾನವನ್ನು ಖಂಡ ತುಂಡವಾಗಿ ವಿರೋಧಿಸಿತ್ತು. ಅದರ ವಿರುದ್ಧ ನ್ಯಾಯಾಂಗ ಹೋರಾಟವನ್ನೂ ನಡೆಸಿತ್ತು ಎಂದು ಪ್ರಧಾನಿ ನೆನಪಿಸಿದ್ದಾರೆ. ಕಾಂಗ್ರೆಸ್‌ ಮೀಸಲು ನೀಡುವುದನ್ನು ವಿರೋಧಿಸಿತ್ತು. ಜತೆಗೆ ಅದು ದೇಶದ ಪ್ರಗತಿಗೆ ಮಾರಕ ಎಂದು ವಾದಿಸಿತ್ತು ಎಂದು ಟೀಕಿಸಿದ್ದಾರೆ.

ಬಡತನ ನಿವಾರಣೆ ಹೆಸರಲ್ಲಿ ಲೂಟಿ: ಪ್ರಧಾನಿ
ಪನ್‌ವೆಲ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ದೇಶದಲ್ಲಿ ಬಡತನ ನಿವಾರಿಸಿ (ಗರೀಬಿ ಹಟಾವೋ) ಘೋಷಣೆ ಹೆಸರಲ್ಲಿ ಕಾಂಗ್ರೆಸ್‌ ದೇಶವನ್ನು ಲೂಟಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ದಶಕಗಳಿಂದ ಬಡತನ ನಿವಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸುಳ್ಳು ಭರವಸೆ, ಘೋಷಣೆಗಳನ್ನು ನೀಡುತ್ತಾ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷ ಕಳೆದರೂ ಆಹಾರ, ವಸತಿಯಿಂದ ವಂಚಿತರಾಗಿದ್ದಾರೆ ಎಂದರು.

Advertisement

ತುಷ್ಟೀಕರಣವೇ ಎಂವಿಎ ಆದ್ಯತೆ: ಮೋದಿ ಟೀಕೆ
ಮುಂಬೈನ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮಹಾ ವಿಕಾಸ ಅಘಾಡಿಯ ನಾಯಕರಿಗೆ ತುಷ್ಟೀಕರಣವೇ ಆದ್ಯತೆ ಎಂದು ಟೀಕಿಸಿದರು. ಉದ್ಧವ್‌ ಠಾಕ್ರೆ ಬಣ ಶಿವಸೇನೆಯ ಹೆಸರೆತ್ತದೆ ಕೆಲವರು ಬಾಳಾ ಠಾಕ್ರೆಗೆ ಅವಮಾನ ಮಾಡಿ ಪಕ್ಷದ ನಿಯಂತ್ರಣವನ್ನು ಮತ್ತೂಬ್ಬರಿಗೆ ಹಸ್ತಾಂತರಿಸಿದರು ಎಂದರು. ನೀರಿನಿಂದ ಹೊರತೆಗೆದ ನೀರಿನಂತೆ ಕಾಂಗ್ರೆಸ್‌ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ ಎಂದರು.

ಪನ್‌ವೆಲ್‌ನಲ್ಲಿ ಪ್ರಧಾನಿ ಇಸ್ಕಾನ್‌
ಸದಸ್ಯರ ಸ್ವಾಗತ
ರಾಯ್‌ಗಢದ ಪನ್‌ವೆಲ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡಲು ಆಗಮಿಸಿದ ಪ್ರಧಾನಿ ಮೋದಿಯವರಿಗೆ ಇಸ್ಕಾನ್‌ ದೇಗುಲದ ಪ್ರತಿನಿಧಿಗಳು ಸ್ವಾಗತ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next