Advertisement
ಭಾನುವಾರ 116ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮುಂದಿನ ವರ್ಷ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದೇವೆ. ರಾಜಕೀಯ ಹಿನ್ನೆಲೆ ಇಲ್ಲದ ಯುವಜನರನ್ನು ರಾಜಕೀಯದೊಂದಿಗೆ ಸಂಪರ್ಕ ಬೆಳೆಸುವಂತೆ ಮಾಡುವ ಯೋಜನೆಯ ಭಾಗವಾಗಿ ಈ ಸಮಾವೇಶ ನಡೆಸಲಿದ್ದೇವೆ. ಇದರಲ್ಲಿ ವಿವಿಧ ರಾಜ್ಯಗಳು, ಜಿಲ್ಲೆಗಳು ಹಾಗೂ ಗ್ರಾಮಗಳ ಸುಮಾರು 2 ಸಾವಿರ ಯುವಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ನಮ್ಮ ಸುತ್ತಲಿನ ಜೀವವೈವಿಧ್ಯವನ್ನು ನಿರ್ವಹಿಸುವಲ್ಲಿ ಗುಬ್ಬಚ್ಚಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದ ಮೋದಿ, ಅವುಗಳ ಸಂರಕ್ಷಣೆಗೆ ಕರೆ ನೀಡಿದರು. ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಗುಬ್ಬಿಗಳು ಕಾಣಸಿಗುವುದಿಲ್ಲ. ಇಂದಿನ ಮಕ್ಕಳು ಅವುಗಳನ್ನು ಚಿತ್ರಗಳು, ವಿಡಿಯೋಗಳಲ್ಲಿ ನೋಡಬೇಕಾಗಿದೆ ಎಂದರು. ಎನ್‌ಸಿಸಿಯ ಮಹತ್ವದ ಬಗ್ಗೆಯೂ ಅವರು ವಿವರಿಸಿದ್ದಾರೆ.