Advertisement

ಭೀಕರ ಅಪಘಾತ: ನಿಂತಿದ್ದ ಬಸ್ಸಿಗೆ ಟ್ರಕ್ ಢಿಕ್ಕಿ ಹೊಡೆದು 4ಕಾರ್ಮಿಕರು ಸಾವು, 24 ಮಂದಿಗೆ ಗಾಯ

10:02 AM Sep 03, 2022 | Team Udayavani |

ಲಕ್ನೋ : ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸಿಗೆ ಟ್ರಕ್ ವೊಂದು ಹಿಂದಿನಿಂದ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಇಪ್ಪತ್ತನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಬಾರಾಬಂಕಿ ಪ್ರದೇಶದಲ್ಲಿ ಸಂಭವಿಸಿದೆ.

Advertisement

ಅರವತ್ತು ಜನ ನೇಪಾಳದ ವಲಸೆ ಕಾರ್ಮಿಕರನ್ನು ಗೋವಾ ಕಡೆಗೆ ಬಸ್ಸಿನಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಬಸ್ಸಿನ ಟಯರ್ ಪಂಚರ್ ಅದ ಪರಿಣಾಮ ಚಾಲಕ ಚಕ್ರ ಬದಲಿಸಲು ರಸ್ತೆ ಬದಿ ಬಸ್ಸನ್ನು ನಿಲ್ಲಿಸಿದ್ದ ಈ ವೇಳೆ ಅತಿವೇಗದಿಂದ ಬಂದ ಟ್ರಕ್ ವೊಂದು ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ ಪರಿಣಾಮ ಬಸ್ಸಿನಲ್ಲಿದ್ದ ೬೦ ಮಂದಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ, ಅಲ್ಲದೆ ಸುಮಾರು ಇಪ್ಪತ್ತನಾಲ್ಕು ಮಂದಿ ಗಾಯಗೊಂಡಿದ್ದು ಅವರನ್ನು ಬಾರಾಬಂಕಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಅಲ್ಲದೆ ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಲಕ್ನೋ ದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಏಳು ವಾರಗಳ ಬಳಿಕ ಲಂಕಾಗೆ ಮರಳಿದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸ

ಸಾವನ್ನಪ್ಪಿದ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಕಾರ್ಮಿಕರನ್ನು ತಮ್ಮ ಊರಿಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next