Advertisement

“ಕ್ಷಯರೋಗ ನಿರ್ಮೂಲನೆ ಹೋರಾಟ ನಿರಂತರವಾಗಿರಲಿ’

07:10 AM Mar 25, 2018 | Team Udayavani |

ಉಡುಪಿ: ದೇಶದಲ್ಲಿ ಕ್ಷಯ ರೋಗ ಸಂಪೂರ್ಣ ನಿರ್ಮೂಲನೆ ವಾಗುವವರೆಗೆ ಹೋರಾಟ ನಿರಂತರ ವಾಗಿರಲಿ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಹೇಳಿದರು.

Advertisement

ರಜತಾದ್ರಿಯಲ್ಲಿ  ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕು.ಕ. ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ, ವಿದ್ಯಾರತ್ನ ಕಾಲೇಜ್‌ ಆಫ್ ನರ್ಸಿಂಗ್‌, ಧನ್ವಂತರಿ ಕಾಲೇಜ್‌ ಆಫ್ ನರ್ಸಿಂಗ್‌, ಸರಕಾರಿ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತರ ತರಬೇತಿ ಕೇಂದ್ರ, ಸಿ.ಎಸ್‌.ಐ ಲೊಂಬಾರ್ಡ್‌ ಸ್ಮಾರಕ ಆಸ್ಪತ್ರೆ ಮತ್ತು ಸ್ಕೂಲ್‌ ಆಫ್ ನರ್ಸಿಂಗ್‌, ಮಿತ್ರ ಸ್ಕೂಲ್‌ ಆಫ್ ನರ್ಸಿಂಗ್‌ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ದೇಶವು  ಪೋಲಿಯೋ ಮುಕ್ತ ಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯು 2035ರ ವೇಳೆಗೆ ಇಡೀ ವಿಶ್ವವನ್ನು ಕ್ಷಯರೋಗ ಮುಕ್ತ ಮಾಡಲು ಯೋಜನೆ ರೂಪಿಸಿದೆ. ಭಾರತ ಸರಕಾರವು 2025ರ ಒಳಗೆ ಕ್ಷಯ ಮುಕ್ತ ಗೊಳಿಸಲು ಪ್ರಯತ್ನಿಸುತ್ತಿದೆ ಎಂದರು.

ಜಿಲ್ಲೆಯಲ್ಲಿ   ಕ್ಷಯರೋಗ ಪತ್ತೆ ಹಚ್ಚುವಲ್ಲಿ ಸಹಕರಿಸಿದ ಕೆಎಂಸಿಯ ಡಾ| ಪೃಥ್ವಿರಾಜ ಹೆಗ್ಡೆ, ಗಾಂಧಿ ಆಸ್ಪತ್ರೆಯ ಡಾ| ವ್ಯಾಸರಾಜ ತಂತ್ರಿ, ಕೋಟೇಶ್ವರದ ಡಾ| ವಿಶ್ವೇಶ್ವರ ಭಟ್‌, ಆದರ್ಶ ಆಸ್ಪತ್ರೆಯ ಡಾ| ಜಿ.ಎಸ್‌. ಚಂದ್ರಶೇಖರ್‌ ಅವರ ಪರ ಡಾ| ಡಿಯಾಗೊ, ಡಾ| ಟಿ.ಎಂ.ಎ. ಪೈ ಆಸ್ಪತ್ರೆಯ ಡಾ| ದಿನೇಶ್‌ ನಾಯಕ್‌, ಸಹಾಯಕ ಔಷಧ ನಿಯಂತ್ರಣಾಧಿಕಾರಿ ನಾಗರಾಜ್‌ ಕೆ.ವಿ ಅವರನ್ನು ಸಚಿವರು ಸಮ್ಮಾನಿಸಿದರು.
 
ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ವಿದ್ಯಾ ರತ್ನ ಕಾಲೇಜ್‌ ಆಫ್ ನರ್ಸಿಂಗ್‌ನ  ಪ್ರಾಂಶುಪಾಲೆ ಡಾ| ಅನಿತಾ ಸಿ.ರಾವ್‌, ಸರಕಾರಿ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತರ ತರಬೇತಿ ಕೇಂದ್ರದ ಪ್ರಾಂಶುಪಾಲೆ ಪ್ರಪುಲ್ಲಾ, ಮಿತ್ರ ಸ್ಕೂಲ್‌ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ನಿಶಾ, ಸಿ.ಎಸ್‌.ಐ ಲೊಂಬಾರ್ಡ್‌ ಸ್ಮಾರಕ ಆಸ್ಪತ್ರೆ ಮತ್ತು ಸ್ಕೂಲ್‌ ಆಫ್ ನರ್ಸಿಂಗ್‌ಪ್ರಾಂಶುಪಾಲೆ ವೀಣಾ ಮೆನೆಸ್ಸಾ, ಧನ್ವಂತರಿ ಕಾಲೇಜ್‌ ಆಫ್ ನರ್ಸಿಂಗ್‌ನ  ಪ್ರಾಂಶುಪಾಲೆ ಪ್ರತಿಭಾ ಎಲ್‌. ಬ್ರಗ್ಸ್‌, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು ಎಸ್‌.ವಿ. ಉಪಸ್ಥಿತರಿದ್ದರು.ಡಿಎಚ್‌ಒ ಡಾ| ರೋಹಿಣಿ ಸ್ವಾಗತಿಸಿ ದರು. ಆಲಂದೂರು ಮಂಜುನಾಥ್‌ ನಿರೂಪಿಸಿದರು. ಕ್ಷಯದಿಂದ ಮುಕ್ತರಾದ‌ ಕರ್ಕುಂಜೆ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ್‌ ಅನುಭವ ಹಂಚಿಕೊಂಡರು. 

ಉಡುಪಿ ಪ್ರಥಮ
ವಿಶ್ವದಲ್ಲೇ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕ್ಷಯರೋಗಿಗಳಿದ್ದಾರೆ.ಈ ಪ್ರಮಾಣ ಶೇ. 27ರಷ್ಟಿದ್ದು, ಮರಣ ಪ್ರಮಾಣ ಶೇ.34 ಇದೆ. ಪ್ರತಿ 5 ನಿಮಿಷಕ್ಕೆ 2 ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಕಳವಳಕಾರಿಯಾದುದು ಎಂದ ಸಚಿವರು, ಜಿಲ್ಲೆಯಲ್ಲಿ  ಕಳೆದ ವರ್ಷ ಸರಕಾರಿ ಆಸ್ಪತ್ರೆಗಳಲ್ಲಿ  914 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 892 ಪ್ರಕರಣಗಳು ಪತ್ತೆಯಾಗಿದ್ದವು.ಕ್ಷಯರೋಗ ಪತ್ತೆ ಹಚ್ಚುವಲ್ಲಿ ಜಿಲ್ಲೆಯು ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ  ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next