Advertisement

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

02:58 PM Nov 17, 2024 | Team Udayavani |

ಬೆಂಗಳೂರು: ವಿದೇಶದಿಂದ ವನ್ಯಜೀವಿಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದು, ಆರೋಪಿಗಳಿಂದ 40 ಜೀವಂತ ವನ್ಯಜೀವಿಗಳನ್ನು ಸಂರಕ್ಷಿಸಿದ್ದಾರೆ.

Advertisement

ಆರೋಪಿಗಳಿಂದ ಜಪ್ತಿ ಮಾಡಲಾದ ಎರಡು ಟ್ರಾಲಿ ಬ್ಯಾಗ್‌ಗಳ ಪೈಕಿ ಒಂದರಲ್ಲಿ 24 ವನ್ಯಜೀವಿಗಳು ಮತ್ತೂಂದರಲ್ಲಿ 16 ಸೇರಿ ಒಟ್ಟು 40 ವನ್ಯ ಜೀವಿಗಳು ಪತ್ತೆಯಾಗಿವೆ. ಈ ಪೈಕಿ ಕೆಂಪು ಕಾಲಿನ ಆಮೆಗಳು, ದೈತ್ಯ ಆಮೆಗಳು, ಮಣಿ ಹಲ್ಲಿಗಳು, ಆಲ್ಬಿನೋ ಬಾವಲಿಗಳು, ಅಮೇರಿಕನ್‌ ಮೊಸಳೆ ಮರಿಗಳು, ಶಿಂಗಲ್‌ ಬ್ಯಾಕ್‌ ಸೇರಿ ವಿವಿಧ 40ಕ್ಕೂ ಹೆಚ್ಚು ಮಾದರಿಯ ವನ್ಯ ಜೀವಿ ಗಳನ್ನು ಸಂರಕ್ಷಿಸಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

ನ.11ರಂದು ರಾತ್ರಿ 11 ಗಂಟೆಗೆ ಮಲೇಷ್ಯಾದ ಕೌಲಲಾಂಪುರದಿಂದ ವಿಮಾನ (ಸಂಖ್ಯೆ ಎಂಎಚ್‌0192)ದಲ್ಲಿ ಕೆಐಎ ವಿಮಾನ ನಿಲ್ದಾಣದ ಟರ್ಮಿನಲ್ -2ಕ್ಕೆ ಬಂದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಇಬ್ಬರು ಪ್ರಯಾಣಿಕರ ಟ್ರಾಲಿ ಬ್ಯಾಗ್‌ ನಲ್ಲಿ ಶಬ್ದವಾಗಿದೆ. ಕೂಡಲೇ ಆ ಬ್ಯಾಗ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಜೀವಂತ ವಿವಿಧ ವನ್ಯಜೀವಿಗಳು ಇರುವುದು ಕಂಡು ಬಂದಿದೆ. ತಕ್ಷಣ ಆ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳ ವಿರುದ್ಧ ಕಸ್ಟಮ್ಸ್ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರಿಗು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತನಿಖೆ ಮುಂದುವರಿದಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದರು. ‌

Advertisement

Udayavani is now on Telegram. Click here to join our channel and stay updated with the latest news.

Next