ಬೆಂಗಳೂರು: ಒಂಟಿಯಾಗಿ ವಾಸವಾಗಿದ್ದ ಮಹಿಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆ ಮೇಲೆ ಹಲ್ಲೆಗೈದು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಂಗಸಂದ್ರ ನಿವಾಸಿ ಜಯಮ್ಮ(44) ಕೊಲೆಯಾದ ಮಹಿಳೆ. ಶುಕ್ರವಾರ ತಡರಾತ್ರಿ ಘಟನೆ ನಡೆದಿದ್ದು, ಜಯಮ್ಮನ ಪುತ್ರ ಮನೆಗೆ ಬಂದಾಗ ದುರ್ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ?: ಹತ್ಯೆಗೀಡಾದ ಜಯಮ್ಮಗೆ ಇಬ್ಬರು ಮಕ್ಕಳಿದ್ದು, ಹೊಂಗಸಂದ್ರದ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದಾರೆ. ಇಬ್ಬರು ಪುತ್ರರ ಪೈಕಿ ಒಬ್ಬ ಕೆಎಸ್ಆರ್ಟಿಸಿ ಬಸ್ ಚಾಲಕನಾಗಿ ಕೆಲಸ ಮಾಡು ತ್ತಿದ್ದು, ಮತ್ತೂಬ್ಬ ಮಗ ಯಾವುದೇ ಕೆಲಸಕ್ಕೆ ಹೋಗು ವುದಿಲ್ಲ. ಸ್ನೇಹಿತರ ಜತೆ ಸುತ್ತಾಡಿಕೊಂಡಿದ್ದಾನೆ. ಇನ್ನು ಜಯಮ್ಮ ಕೂಡ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂಬುದು ಗೊತ್ತಾಗಿದೆ.
ಶುಕ್ರವಾರ ರಾತ್ರಿ ಜಯಮ್ಮ ಮನೆಯಲ್ಲಿ ಒಬ್ಬರೇ ಇದ್ದು ತಡರಾತ್ರಿ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಜಯಮ್ಮ ಮುಖಕ್ಕೆ ಹಲ್ಲೆ ಮಾಡಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕರ್ತವ್ಯ ಮುಗಿಸಿಕೊಂಡು ಮುಂಜಾನೆ ಮಗ ಮನೆಗೆ ಬಂದಾಗ ತಾಯಿಯ ಕೊಲೆ ಘಟನೆ ಬೆಳಕಿಗೆ ಬಂದಿದೆ. ಬಳಿಕ ಮೃತದೇಹವನ್ನು ಮರ ಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿ ಸಲಾಗಿದೆ. ಜಯಮ್ಮ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜಯಮ್ಮ ಯಾವುದೇ ಕೆಲಸಕ್ಕೆ ಹೋಗದಿದ್ದರೂ ಸಣ್ಣ ಪುಟ್ಟ ಹಣಕಾಸು ವ್ಯವಹಾರ ಮಾಡು ತ್ತಿದ್ದರು ಎಂದು ಹೇಳಲಾಗಿದೆ.
ದುಷ್ಕರ್ಮಿಗಳ ಪತ್ತೆಗೆ ಶೋಧ: ಜಯಮ್ಮ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಸಣ್ಣ-ಪುಟ್ಟ ಹಣಕಾಸಿನ ವ್ಯವಹಾರ ಮಾಡಿಕೊಂಡಿದ್ದರಿಂದ ಈ ಕಾರಣಕ್ಕೂ ಕೃತ್ಯ ನಡೆದಿರುವ ಸಾಧ್ಯತೆ ಇದೆ. ಜತೆಗೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲೂ ಕೊಲೆ ನಡೆದಿರುವ ಶಂಕೆಯೂ ಇದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.