Advertisement

ಈ ವರ್ಷ ವರ್ಗಾವಣೆ ಅನುಮಾನ

12:24 AM Jan 16, 2021 | Team Udayavani |

ಬೆಂಗಳೂರು: ಪ್ರಾಥಮಿಕ – ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಗೆ ಕೆಎಟಿ ತಡೆ, ಪ.ಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆ ತಾಂತ್ರಿಕ ವಿಘ್ನ , ಪದವಿ ಪ್ರಾಧ್ಯಾಪಕರ ವರ್ಗಾವಣೆಗೆ ನಿಯಮವೇ ಅಂತಿಮಗೊಂಡಿಲ್ಲ!

Advertisement

ಹೀಗಾಗಿ ಬೋಧಕರ ವರ್ಗಾವಣೆ ಪ್ರಕ್ರಿಯೆಯೇ ನಡೆಯುತ್ತಿಲ್ಲ. ಅನೇಕ ವರ್ಷ ಗಳಿಂದ ವರ್ಗಾವಣೆಗಾಗಿ ಕಾಯುತ್ತಿರುವ ಬೋಧಕರಿಗೆ ಮತ್ತೆ ನಿರಾಸೆಯಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗ ಆರಂಭವಾಗಿದ್ದರೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ತಡೆ ನೀಡಿದೆ. ಕಾನೂನು ತಜ್ಞರ ಮತ್ತು ಸರಕಾರದ ಸಲಹೆ ಪಡೆದು, ಬಳಿಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

ತಾಂತ್ರಿಕ ಸಮಸ್ಯೆ :

ಪ.ಪೂ. ಕಾಲೇಜು ಉಪನ್ಯಾಸಕರಿಗೆ ವರ್ಗಾವಣೆ ಭಾಗ್ಯ ಈ ವರ್ಷದ ಮಟ್ಟಿಗೆ ಸಿಗುವುದು ಕಷ್ಟ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಪ್ರತ್ಯೇಕ ಕಾಯ್ದೆ ಅನುಷ್ಠಾನ ಮಾಡಲಾಗಿದ್ದರೂ ಪಿಯು ಉಪನ್ಯಾಸಕರಿಗೆ ಹಳೇ ಕಾಯ್ದೆ ಉಳಿದುಕೊಂಡಿದೆ. ಪಿಯು ಉಪನ್ಯಾಸಕರು ನಮಗೂ ಪ್ರತ್ಯೇಕ ಕಾಯ್ದೆ ರೂಪಿಸಿ ಎಂದು ಆಗ್ರಹಿಸಿದ್ದಾರೆ. ಈ ತಾಂತ್ರಿಕ ಕಾರಣದಿಂದಾಗಿ ಇಲ್ಲೂ ವರ್ಗಾವಣೆ ನಡೆಯುತ್ತಿಲ್ಲ.

Advertisement

ನಿಯಮವೇ ಸಿದ್ಧವಾಗಿಲ್ಲ :

ಪದವಿ ಕಾಲೇಜಿನ ಪ್ರಾಧ್ಯಾಪಕರ ವರ್ಗಾವಣೆ ಸಂಬಂಧ ಹೊಸ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಅಧಿಕಾರಿಗಳು ಕರಡು ನಿಯಮ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಿದ್ದರೂ ಸರಕಾರದಿಂದ ಅಂತಿಮಗೊಂಡಿಲ್ಲ. ಹೀಗಾಗಿ ಇಲ್ಲೂ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಹೆಚ್ಚು.

ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸದ್ಯ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿಲ್ಲ.-ವಿ. ಅನ್ಬುಕುಮಾರ್‌, ಆಯುಕ್ತ, ಕಾಲೇಜು ಶಿಕ್ಷಣ ಇಲಾಖೆ

ಸರಕಾರದಿಂದ ನಿಯಮ ರಚನೆ ಆಗಬೇಕು. ಹೀಗಾಗಿ ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆ ಹೊಸ ನಿಯಮದಂತೆ ನಡೆಯಲಿದೆ.

-ಪ್ರೊ| ಎಸ್‌. ಮಲ್ಲೇಶ್ವರಪ್ಪ,ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ

 

ವೈಜ್ಞಾನಿಕ ರೀತಿಯಲ್ಲಿ ನಿಯಮ ರೂಪಿಸಿ ವರ್ಗಾವಣೆ ಆರಂಭಿಸಲು ಮನವಿ ಸಲ್ಲಿಸಿದ್ದೇವೆ. ಸ್ಪಂದನೆ ಸಿಗದಿದ್ದರೆ ಜ. 20ರಂದು ಪ್ರತಿಭಟನೆ ನಡೆಸುತ್ತೇವೆ. -ಎ.ಎಚ್‌. ನಿಂಗೇಗೌಡ, ರಾಜ್ಯ ಪ.ಪೂ. ಕಾಲೇಜು ಉಪನ್ಯಾಸಕರ ಸಂಘ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next