ಬೆಂಗಳೂರು: ರಾಜ್ಯದ ಸಾರಿಗೆ ನೌಕರರ ಬಹುದಿನದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಗಣೇಶ ಚತುರ್ಥಿ ಒಳಗೆ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗೆ ಅಂತರ್ ನಿಗಮ ವರ್ಗಾವಣೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿದರು.
ನಾಲ್ಕು ನಿಗಮಗಳಲ್ಲಿನ ಸಿಬ್ಬಂದಿಗಳ ವರ್ಗಾವಣೆ ಬೇಡಿಕೆಯ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಸಿಇಟಿ ಮಾದರಿಯಲ್ಲಿ ಆನ್‌ಲೈನ್ ಮೂಲಕ ವರ್ಗಾವಣೆ ಅರ್ಜಿ ಪಡೆದು ಗೌರಿ ಗಣೇಶ ಹಬ್ಬದ ಒಳಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು. ಸಾರಿಗೆ ಇಲಾಖೆಯಲ್ಲಿ 1.15 ಲಕ್ಷ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಉತ್ತರ ಕರ್ನಾಟಕ ಭಾಗದ ನೌಕರರು ಬೆಂಗಳೂರಿನಲ್ಲಿದ್ದಾರೆ.
ದಕ್ಷಿಣ ಕರ್ನಾಟಕ ಭಾಗದ ನೌಕರರು ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿತನದ ಆಧಾರದಲ್ಲಿ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ವರ್ಗಾವಣೆ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನದ ಮೀಸಲಾತಿಯನ್ನೂ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. 3000 ಹೊಸ ಬಸ್: ರಾಜ್ಯ ಸರ್ಕಾರ 3 ಸಾವಿರ ಹೊಸ ಬಸ್ ಖರೀದಿಲು ತೀರ್ಮಾನಿಸಿದೆ. ಶೀಘ್ರವೇ ಹೊಸ ಬಸ್‌ಗಳು ರಸ್ತೆಗಿಳಿಯಲಿವೆ.
ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ನರ್ಮ್ ಯೋಜನೆಯಡಿಯಲ್ಲಿ ಬಸ್ ಖರೀದಿಸಲು ಶೇ.80 ರಷ್ಟು ಧನ ಸಹಾಯ ಮಾಡುತ್ತಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಅಮೃತ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಬಸ್ ಖರೀದಿಗೆ ಹಣ ದೊರೆಯುವುದಿಲ್ಲ ಎಂದರು. ಎಲೆಕ್ಟಿಕಲ್ ಬಸ್ ಆರಂಭಕ್ಕೆ ಸಿದ್ದ: ರಾಜ್ಯ ಸರ್ಕಾರ ಎಲೆಕ್ಟ್ರಿಕಲ್ ಬಸ್ ಸಂಚಾರ ಆರಂಭಿಸಲು ಸಿದ್ದವಾಗಿದೆ. ಆದರೆ, ಕುರಿತು ಕೇಂದ್ರ ಸರ್ಕಾರ ಸ್ಪಷ್ಟ ನೀತಿ ಜಾರಿಗೆ ತರಬೇಕು.
ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದರೆ, ಅದರಿಂದ ತೆರಿಗೆ ಉಳಿತಾಯವಾಗುತ್ತದೆ ಎಂದು ಅವರು ಹೇಳಿದರು. ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಊಟ ಸಿಗದೇ ಹೋಗುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಈಗ ಇರುವ ಊಟದ ಮಿತಿಯನ್ನು ಹೆಚ್ಚಿಸಿ ಬಂದವರಿಗೆಲ್ಲ ಕೊಡಲು ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
3000 ಹೊಸ ಬಸ್
ರಾಜ್ಯ ಸರ್ಕಾರ 3 ಸಾವಿರ ಹೊಸ ಬಸ್ ಖರೀದಿಲು ತೀರ್ಮಾನಿಸಿದೆ. ಶೀಘ್ರವೇ ಹೊಸ ಬಸ್‌ಗಳು ರಸ್ತೆಗಿಳಿಯಲಿವೆ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ನರ್ಮ್ ಯೋಜನೆಯಡಿಯಲ್ಲಿ ಬಸ್ ಖರೀದಿಸಲು ಶೇ.80 ರಷ್ಟು ಧನ ಸಹಾಯ ಮಾಡುತ್ತಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಅಮೃತ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಬಸ್ ಖರೀದಿಗೆ ಹಣ ದೊರೆಯುವುದಿಲ್ಲ ಎಂದರು.