Advertisement

Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್‌ ಆಸ್ತಿ ಈಗ ವರ್ಗಾವಣೆ

12:38 AM Jan 03, 2025 | Team Udayavani |

ಮುಂಬಯಿ: 23 ವರ್ಷಗಳ ಹಿಂದೆ ದಾವೂದ್‌ ಇಬ್ರಾಹಿಂಗೆ ಸೇರಿದ ಅಂಗಡಿಯನ್ನು ಖರೀದಿಸಿದ್ದ ವ್ಯಕ್ತಿ ಹೆಸರಿಗೆ ಆ ಆಸ್ತಿ ಈಗ ನೋಂದಣಿಯಾಗಿದೆ.

Advertisement

2001ರಲ್ಲಿ ಹೇಮಂತ್‌ ಜೈನ್‌ ಹರಾಜಿನಲ್ಲಿ 2 ಲಕ್ಷ ರೂ. ನೀಡಿ ಖರೀದಿಸಿದ್ದ ಅಂಗಡಿ ದಾಖಲೆ ಕಾಣೆಯಾಗಿದೆಯೆಂದು ಅಧಿಕಾರಿಗಳು ಹೇಳಿದ್ದರಿಂದ ಆಸ್ತಿ ವರ್ಗಾವಣೆ ಮುಂದೂಡಲ್ಪಟ್ಟಿತ್ತು.

2017ರಲ್ಲಿ 23 ಲಕ್ಷ ರೂ. ಮುದ್ರಾಂಕ ಶುಲ್ಕ ನೀಡಬೇಕೆಂದು ಅಧಿಕಾರಿಗಳು ಹೇಳಿದ್ದರು. ಕೊನೆಗೆ ಕೋರ್ಟ್‌ ಮೆಟ್ಟಿಲೇರಿದ ಜೈನ್‌, ಈಗ ಆಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದಾಗ್ಯೂ, ಆ ಅಂಗಡಿ ದಾವೂದ್‌ ಸಹಚರರ ಹಿಡಿತದಲ್ಲಿದ್ದು ಮತ್ತೆ ಜೈನ್‌ ಸಂಕಷ್ಟಕ್ಕೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next