Advertisement

ಟ್ರಂಪ್‌ಕಾರ್ಡ್‌, ಐಟಿಗೆ ಏಟು ಬಿದ್ದರೆ ನಮಗೇನಾಗುತ್ತೆ?

03:45 AM Feb 13, 2017 | Harsha Rao |

ಟ್ರಂಪ್‌ ಗರ್ಜಿಸಿದರೆ ನಮಗೇನಾಗುತ್ತೆ ಅಂತ ಕುಳಿತುಕೊಳ್ಳುವುದು ಸರಿಯಲ್ಲ. ಅವರ ಗರ್ಜನೆ ಪ್ರಭಾವ ನಮ್ಮ ಆದಾಯ, ಉಳಿತಾಯ, ಹೂಡಿಕೆಯ ಮೇಲೂ ಹಾಗಬಹುದು. ಏಕೆಂದರೆ ನಮ್ಮದ ದೇಶದ ಎಷ್ಟೋ ಐಟಿ ಉದ್ಯೋಗಿಗಳ ಮನೆ ಬೆಳಗುತ್ತಿರುವುದು ಟ್ರಂಪ್‌ದೇಶದಿಂದ ಅಲ್ಲವೇ? ಇವರಿಗೆ ಹೆಚ್‌1ಬಿ ವಿಸಾ ಯಡವಟ್ಟಾದರೆ ನಮ್ಮ ಆರ್ಥಿಕತೆ, ಆದಾಯದ ಮೇಲೂ ಬರೆ ಬೀಳಬಹುದು. 

Advertisement

ಈಗ ಬೆಂಗಳೂರು ಎನ್ನುವುದು ಕೇವಲ ನಾಮಪದ ಮಾತ್ರವಲ್ಲ. ಕ್ರಿಯಾಪದ ಕೂಡ ಹೌದು. ಬೆಂಗಳೂರು ಎಂದರೆ ಕ್ರಿಯಾಪದದ ಅರ್ಥ: ಕೆಲಸದಿಂದ ಕಿತ್ತುಹಾಕು. ಬೆಂಗಳೂರಿಗೆ ಈ ನಕಾರಾತ್ಮಕ ಕ್ರಿಯಾಪದ ಹೇರಿಕೆಯಾಗಿದ್ದಕ್ಕೆ ನಮ್ಮ ಮಾಹಿತಿ ತಂತ್ರಜಾnನ ಕ್ಷೇತ್ರ ಕಾರಣ. ಅಮೇರಿಕಕ್ಕೆ ಭಾರತದಿಂದ ಅದರಲ್ಲೂ ಬೆಂಗಳೂರಿನವರೇ ಹೆಚ್ಚಾಗಿ ಅಲ್ಲಿಗೆ ಹೋಗಿ ಕಡಿಮೆ ಸಂಬಳಕ್ಕೆ ಸ್ಥಳೀಯರಿಂದ ಕೆಲಸ ಕಸಿದುಕೊಂಡದ್ದರಿಂದ ಮತ್ತು ಅಲ್ಲಿನ ಕೆಲಸವನ್ನು ಬೆಂಗಳೂರಿನಲ್ಲೇ ಕುಳಿತು ನಿರ್ವಹಿಸುವಂತಾಗಿ ಸ್ಥಳೀಯರು ಕೆಲಸ ಕಳೆದುಕೊಂಡಿದ್ದರಿಂದ ಬೆಂಗಳೂರೆಂದರೆ “ಕೆಲಸ ಹೋಯಿತು’ ಎನ್ನುವ ಅರ್ಥ ಪಡೆದುಕೊಂಡಿತು. ಹೀಗೆ ಅಮೇರಿಕಾಕ್ಕೆ ಹೋಗಿ ಕೆಲಸ ಮಾಡುತ್ತಿರುವವರ ಭಾರತಿಯರು ಸುಮಾರು 3ಲಕ್ಷ. 

ಅಲ್ಲಿಯವರಿಗೆ ಸುಮಾರು 4ಲಕ್ಷ ಜನರಿಗೆ ಕೆಲಸ ಸಹ ಕೊಡಲಾಗಿದೆ. ಭಾರತದೊಳಗೆ ಈ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಸುಮಾರು 30ಲಕ್ಷ. ಒಟ್ಟು ಮಾಹಿತಿ ತಂತ್ರಜಾnನದ ವ್ಯವಹಾರ ಸುಮಾರು 10 ಲಕ್ಷ ಕೋಟಿ. ಅಂದರೆ ನಮ್ಮ ದೇಶದ ಆರ್ಥಿಕತೆಯ ಒಟ್ಟು ಉತ್ಪನ್ನದ ಶೇ. ಸುಮಾರು 7ರಷ್ಟು.  ಇದರಲ್ಲಿ ಅರ್ಧಕ್ಕೆ ಅರ್ಧದಷ್ಟು ನಾವು ಅಮೇರಿಕಾ ದೇಶಕ್ಕೆ ರಫ್ತು ಮಾಡುತ್ತಿದ್ದೇವೆ. 

ನಮ್ಮ ದೇಶದ ವ್ಯವಹಾರ ಜಾಗತಿಕ ಮಟ್ಟದಲ್ಲಿ ಅತ್ಯಲ್ಪ. ಒಟ್ಟು ಅಂತರಾಷ್ಟ್ರೀಯ ವಹಿವಾಟಿನಲ್ಲಿ ನಮ್ಮದು ಕೇವಲ ಶೇ.1.2 ರಷ್ಟು. ನಮ್ಮ ಆಮದು ಸುಮಾರು 30ಲಕ್ಷ ಕೋಟಿ ಇದ್ದರೆ, ರಫ್ತು ಸುಮಾರು 20ಲಕ್ಷ ಕೋಟಿ.  ಅಂದರೆ ಸುಮಾರು 10 ಲಕ್ಷ ಕೋಟಿ ನಾವು ಆಮದಿಗೆ ಅಧಿಕ ಡಾಲರ್‌ ಇಟ್ಟುಕೊಂಡು ವ್ಯವಹರಿಸಬೇಕಾಗುತ್ತದೆ. ಇದರಿಂದ ನಾವು ಸದಾ ಡಾಲರ್‌ ಇದನ್ನು ಸರಿದೂಗಿಸಲು ಇಟ್ಟುಕೊಳ್ಳಬೇಕಾಗುತ್ತದೆ. ಮಾಹಿತಿ ತಂತ್ರಜಾnನದ ವ್ಯವಹಾರ ಇರುವುದರಿಂದ ಇಷ್ಟರ ಮಟ್ಟಿಗಾದರೂ ಸರಿದೂಗಿಸುವಲ್ಲಿ ಸಹಕಾರಿಯಾಗಿದೆ. ಇದರ ಜೊತೆಗೆ ನಮ್ಮ ದೇಶ ಸಹಕಾರಿಯಾಗುತ್ತಿರುವುದು, ಹೂಡಿಕೆ, ಉಳಿತಾಯದಲ್ಲಿ ಹೊರ ದೇಶಗಳಲ್ಲಿ ದುಡಿಯುತ್ತಿರುವ ನಮ್ಮ ಜನ ಕಳುಹಿಸುತ್ತಿರುವ ಹಣ. ಅದು ಜಗತ್ತಿನಲ್ಲೆ ಅತೀ ಹೆಚ್ಚು ಈ ರೀತಿ ಪಡೆಯುವ ಹಣವಾಗಿರುತ್ತದೆ. ಇದರ ಒಟ್ಟು ಮೊತ್ತ ಸುಮಾರು 4ಲಕ್ಷ ಕೋಟಿಯಾಗಿದೆ. ಈ ರೀತಿ ಹೊರ ದೇಶಕ್ಕೆ ಹೋಗಿ ದುಡಿದು ಊರಿಗೆ ಹಣ ಕಳಿಸುತ್ತಿರುವವರು ದುಬೈ, ಸೌದಿ ದೇಶಗಳಲ್ಲಿ ಕೂಲಿ ಕಾರ್ಮಿಕರದ್ದೇ ಹೆಚ್ಚು ಪಾಲು! 

ನಮ್ಮ ಮಾಹಿತಿ ತಂತ್ರಜಾnನ ಕ್ಷೇತ್ರಕ್ಕೆ ಡೊನಾಲ್ಡ್‌ ಟ್ರಂಪ್‌ ಅಮೇರಿಕಾದ ಅಧ್ಯಕ್ಷರಾದ ನಂತರ ಅಪಾಯ ಮತ್ತು ನಡುಕ ಉಂಟಾಗುತ್ತಿದೆ. ಕಾರಣ ಆತ ಅಮೇರಿಕ ದೇಶದ ಜನರ ಕೆಲಸ ಕಸಿದುಕೊಳ್ಳುವವರ ಮತ್ತು ಅಲ್ಲಿಂದ ಹೊರದೇಶಕ್ಕೆ ಕೆಲಸ ದಾಟಿಸುತ್ತಿರುವ ಕಂಪನಿಗಳ ವಿರುದ್ಧ ಸಮರ ಸಾರಿದ್ದಾರೆ. ಕೆಲಸ ಹೊರಹೊಗದಂತೆ ಉಳಿಸಿಕೊಳ್ಳಲು ಅನೇಕ ತಂತ್ರಗಾರಿಕೆ ಬಳಸುತ್ತಿದ್ದಾರೆ. ಇದರಲ್ಲಿ ಐಟಿ ಉದ್ಯೋಗಕ್ಕೆ ಅಲ್ಲಿಗೆ ಹೆಚ್‌1ಬಿ ವಿಸಾದ ಮೂಲಕ ಹೋದರೆ ಅವರಿಗೆ ಕನಿಷ್ಠ 13,0000 ಡಾಲರ್‌ ವರ್ಷಕ್ಕೆ ಸಂಬಳ ಕೊಡಲೇಬೇಕು ಎನ್ನುವುದು. ಇದು ಈಗಿರುವ 60,000 ಡಾಲರ್‌ ಸಂಬಳದಿಂದ ದ್ವಿಗುಣಗೊಳಿಸದಂತಾಯಿತು. ಇಷ್ಟು ಸಂಬಳ ಹೆಚ್ಚು ಮಾಡಿದ್ದ ಉದ್ದೇಶ ಸ್ಥಳಿಯರಿಗೆ ಕೆಲಸ ಸಿಗುವಂತಾಗಲು. ಕಡಿಮೆ ದುಡ್ಡಿಗೆ ನಮ್ಮದೇ ಕಂಪನಿಗಳು ನಮ್ಮ ಯುವಕರನ್ನು ಲಾಭಕ್ಕಾಗಿ ದುಡಿಸಿಕೊಳ್ಳುವುದು ಸುಳ್ಳಲ್ಲ. ರೂಪಾಯಿಂದ ಡಾಲರ್‌ಗೆ 68 ರೂಪಾಯಿಯಂತೆ ಲೆಕ್ಕ ಹಾಕಿದರೆ 40ಲಕ್ಷ ವರ್ಷಕ್ಕೆ ಸಂಬಳವೆಂದು ತೋರಿದರೂ, ವಾಸ್ತವವಾಗಿ ಪಿಪಿಪಿ (purchasing power parity)ಆಧಾರದಲ್ಲಿ ನೋಡಿದರೆ ರೂಪಾಯಿಗೆ 15ದೇ ಡಾಲರ್‌ ಲೆಕ್ಕ ಸಿಗುವುದು. ಈ ಲೆಕ್ಕದಲ್ಲಿ ವರ್ಷಕ್ಕೆ ಕೇವಲ 9ಲಕ್ಷವಾಗುತ್ತದೆ. ಇದು ಕಡಿಮೆ ಸಂಬಳವೇ. ಪಿಪಿಪಿ ಲೆಕ್ಕವನ್ನು ಮ್ಯಾಕ್‌ ಇಂಡೆಕ್ಸ್‌ ಆಧಾರದಿಂದ ಅಳೆಯುವುದುಂಟು. ಅಂದರೆ ಇಲ್ಲಿ ಒಂದು ಮ್ಯಾಕ್‌ಡೋನಾಲ್ಡ್‌ ಬರ್ಗರ್‌ ಕೊಡುವ ರುಪಾಯಿಯನ್ನು ಅದೇ ಬರ್ಗರ್‌ಗೆ ಅಲ್ಲಿ ಕೊಡುವ ಡಾಲರ್‌ ತುಲನೆ ಮಾಡಿ ನೋಡುವುದಾಗಿದೆ. ಹಾಗಾಗಿ ನುರಿತ ತಂತ್ರಜಾnನ ನೌಕರನಿಗೆ ಇದು ಹೆಚ್ಚಿನ ಸಂಬಳವಲ್ಲ. ಆಮೇರಿಕಾದ ಸ್ಥಳಿಯ ಕಂಪನಿಗಳು ತಮ್ಮ ನೌಕರರಿಗೆ ಇದಾಗಲೇ 13,0000 ಡಾಲರ್‌ನಷ್ಟು ಸಂಬಳ ಕೊಡುತ್ತಿದ್ದಾರೆ. 

Advertisement

ಹೆಚ್‌c1ಬಿ ವಿಸಾದ ಮೂಲಕ ಆಮೇರಿಕಾಗೆ ಹೋಗಿ ದುಡಿಯುವವರಲ್ಲಿ ಸಿಂಹಪಾಲು ಭಾರತಿಯರದ್ದೇ. ಅದರಲ್ಲು ಭಾರತಿಯ ಕಂಪನಿಗಳಾದ ಇನ್‌ಫೋಸಿಸ್‌, ವಿಪೊ›, ಟಿಸಿಎಸ್‌, ಹೆಚ್‌ಸಿಎಲ್‌ ಕಂಪನಿಗಳು ಈ ನೌಕರರನ್ನು ರಪು¤ ಮಾಡುವುದಾಗಿದೆ. ಈಗ ಟ್ರಂಪ್‌ ಉದ್ದೇಶ ಆತನೇ ಮೊದಲಿನಿಂದಲೂ ಹೇಳಿಕೊಂಡು ಬಂದಂತೆ ಈ ರೀತಿಯ ವಿಸಾ ಪದ್ಧತಿಯನ್ನೇ ರದ್ದು ಮಾಡಲುಬಹುದು. ಅಲ್ಲದೇ ಡಿಸ್ಟನ್ಸ್‌ ತೆರಿಗೆ ಅಂದರೆ ಅಲ್ಲಿಯ ಕೆಲಸವನ್ನು ಇಲ್ಲಿಂದ ಮಾಡಿದರೆ ಹಾಕುವ ತೆರಿಗೆಯಾಗಿದೆ. ಈ ರೀತಿ ತೆರಿಗೆ ಹಾಕಿದಲ್ಲಿ ನಮ್ಮ ಬಿಪಿಒಗಳಿಗೆ ಹೊಡೆತ ಬೀಳಲಿದೆ. ಅಲ್ಲದೇ ಡೇಸ್ಟಿನೇಶನ್‌ ತೆರಿಗೆ ಅಂದರೆ ಇಲ್ಲಿ ತಯಾರಿಸಿ ಅಲ್ಲಿಗೆ ಕಳುಹಿಸಿದರೆ ಹಾಕುವ ತೆರಿಗೆ. ಇದರಿಂದಲೂ ನಮ್ಮ ಅರ್ಥಿಕತೆಗೆ ತೊಂದರೆಯಾಗಬಹುದು. ಇದಾಗಲೇ ಅಮೇರಿಕಾದ ಫ‚ೊರ್ಡ್‌ ಕಾರು ಕಂಪನಿ ಇಲ್ಲಿ ತಯಾರಿಸಿ ಸುಮಾರು 6ಲಕ್ಷ ಕಾರು ರಫ್ತು ಮಾಡುತ್ತಿದೆ. ಅಲ್ಲದೇ ನಮ್ಮ ದೇಶದಿಂದ ಸುಮಾರು 1ಲಕ್ಷ ಕೋಟಿಯಷ್ಟು ಔಷಧ ಆಮೇರಿಕಾಗೆ ರಫ್ತಾಗುತ್ತಿದೆ. ಭಾರತದ ಜೊತೆ ಅತೀ ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡುತ್ತಿರುವ ದೇಶ ಅಮೇರಿಕವಾಗಿದೆ. ಅಲ್ಲದೇ ಸುಮಾರು 70 ದೇಶಗಳು ತಮ್ಮ ದೇಶಿ ವಿನಿಮಯ ನಿಧಿಯನ್ನು ಡಾಲರ್‌ ರೂಪದಲ್ಲಿ ಇಟ್ಟೂಕೊಂಡಿವೆ. ಇದಕ್ಕೆ ಅಮೇರಿಕ ಸೀನಿದರೆ ಜಗತ್ತಿಗೆ ನೆಗಡಿ ಬರುವುದು ಎನ್ನುವುದು.

ಇತ್ತ ಕಳೆದ ಎರಡು ದಶಕಗಳಿಂದ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರ ಉತ್ತುಂಗ ಮಟ್ಟಕ್ಕೇರಿತ್ತು. ಆದರೆ ಅದು ಈಗ ಕುಂಟಿತಗೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ದ ದೇಶಗಳಲ್ಲಿನ ನಿರುದ್ಯೊಗ, ಅಸಮಾನತೆ, ಹೊರನಾಡಿಗರ ಬಗ್ಗೆ ಹೆದರಿಕೆ (xenophobia) ಇದಕ್ಕೆ ಸರಿಯಾಗಿ ಸ್ಪಂದಿಸುತ್ತಿರುವ ರಾಜಕಾರಣವಾಗಿದೆ. 2008ರಲ್ಲಿ ಜಗತ್ತಿನ ಒಟ್ಟು ವ್ಯವಹಾರದ ಶೇ. 60ರಷ್ಟು ದೇಶ ದೇಶಗಳ ನಡುವೆ ಇತ್ತು. ಇಂದು ಅದು ಶೇ. 40ಕ್ಕೆ ಇಳಿಮುಕವಾಗಿದೆ. ಹಾಗೆಯೇ ಬಂಡವಾಳ ಹರಿಕೆ ಶೇ.16ರಿಂದ ಶೇ.2ಕ್ಕೆ ಇಳಿದಿದೆ. ಇದರ ಇನ್ನೊಂದು ಮುಖ ಬ್ರೆಕ್ಸಿಟ್‌ ಮತ್ತು ಟ್ರಂಪ್‌. ಮತ್ತೂಮ್ಮೆ ಅಂತರ್ಮುಖೀಯಾಗಿರುವುದು. ಈ ದೃಷ್ಟಿಯಿಂದ ಭಾರತದ ಆರ್ಥಿಕತೆ ದೇಶಿ ವ್ಯಾಪಾರಕ್ಕಿಂತ ತನ್ನ ಒಳಗಿನ ಸಾಮಾರ್ಥ್ಯದ ಮೇಲೆ ಅವಲಂಬಿಸಿರುವುದು ಅನೇಕರು ಮೆಚ್ಚುತ್ತಾರೆ. 

ಮಾಹಿತಿ ತಂತ್ರಜಾnನದಲ್ಲಿ ನಾವು ತಮ್ಮದೇ ಬೌದ್ದಿಕ ಬಂಡವಾಳ ಮತ್ತು ಬ್ರಾನೆxಡ್‌ ಉತ್ಪನ್ನಗಳನ್ನು ಮೈಕ್ರೊಸಾಫ‚…r ಅಥವಾ ಅÂಪಲ್‌ ರೀತಿ ಹುಟ್ಟುಹಾಕದಿರುವುದು ನಮ್ಮ ವೈಫ‌ಲ್ಯವಾಗಿದೆ. ಹೀಗಾಗಿ ಈ ವ್ಯಾವಹಾರ ನಡೆಸಲೂ ಸಹ ದೇಶಿ ವಸ್ತುಗಳನ್ನು ಕೊಂಡೇ ನಡೆಸುವುದಾಗಿದೆ. ನಮ್ಮವರನ್ನು ಕಂಪ್ಯೂಟರ್‌ ಕೂಲಿಗಳು, ಸ್ವೆಟ್‌ ಶಾಪ್ಸ್‌ ಎಂದೆಲ್ಲ ಹೀಯಾಳಿಸುವುದು ಉಂಟು. ಅದು ಅಲ್ಲದೇ ಸೇವಾ ಭಾಗಕ್ಕೆ ಹೆಚ್ಚು ಉತ್ತೇಜನ ಕೊಟ್ಟದ್ದು ನಮ್ಮ ದೌರ್ಬಲ್ಯವೇ ಸರಿ. ಚೀನಾ ದೇಶ ಸುಮಾರು 15ಲಕ್ಷ ಕೋಟಿಯಷ್ಟು ಚಡ್ಡಿ ಬನಿಯನ್‌ ರಫ್ತು ಮಾಡುತ್ತಿದೆ. ಇದು ನಮ್ಮ ಒಟ್ಟು ರಫ್ತಿನ ಅರ್ಧದಷ್ಟು. ಇದರ ಜೊತೆಗೆ ನಾವು ಚೀನಾದಿಂದ ಕರೀದಿಸುವ ಒಟ್ಟು ವಸ್ತುಗಳ ಮೊತ್ತ 4 ಲಕ್ಷ ಕೊಟಿ.

ನಾವು ಚೈನಾಗೆ ಮಾರುವುದು ಕೇವಲಾ 1ಲಕ್ಷ ಕೋಟಿ. ನಾವು ಕೈಗಾರಿಕ ಉತ್ಪಾದನೆಗೆ ಒತ್ತು ಕೊಡುವುದರಲ್ಲು ಸೋತಿದ್ದೇವೆ ಎಂದರೆ ತಪ್ಪಾಗಲಾರದು. ಈಗಲಾದರೂ ನಮ್ಮ ಮಾಹಿತಿ ತಂತ್ರಜಾnನ ಕ್ಷೇತ್ರ ತನ್ನದೇ ಬ್ರಾನೆxಡ್‌ ಉತ್ಪನದತ್ತ ಗಮನಹರಿಸುವುದು ಅವಶ್ಯಕವಾಗಿದೆ. ಅಲ್ಲದೇ ಕೌÉಡ್‌, ಅನಲಿಟಿಕ್ಸ್‌, ಮೊಬಿಲಿಟಿ, ಮತ್ತು ಸೋಶಿಯಲ್‌ ವಿಚಾರಗಳತ್ತ ಹೆಚ್ಚು ಒತ್ತು ಕೊಡಬೇಕಾಗಿದೆ.

ಇನ್ನೊಂದೆಡೆ ಅನೇಕ ಅಭಿಪ್ರಾಯದಂತೆ ನಮ್ಮ ಇಂದಿನ ಮಾಹಿತಿ ತಂತ್ರಜಾnನ ಮತ್ತು ಇತರೇ ತಾಂತ್ರಿಕ ಕೆಲಸಗಳನ್ನು ಶೇ.65ರಷ್ಟು ಯಂತ್ರಗಳೇ ನಿರ್ವಹಿಸುಬಹುದು ಎನ್ನಲಾಗುತ್ತಿದೆ. ನಮ್ಮ ಸ್ಥಳೀಯ ಕಂಪನಿಗಳೂ ಸಹ ಯಂತ್ರಗಳನ್ನು ಕೆಲಸಕ್ಕೆ ಜೋಡಿಸುವಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎನ್ನುತ್ತಿದ್ದಾರೆ. ಕಾರಣ ಅವು ನಿದ್ದೆ ಮಾಡುವುದಿಲ್ಲ. ಅಮೇರಿಕದಲ್ಲಿ ಯಂತ್ರಗಳೇ ದುಡಿಯುವ ಕಾರ್ಖಾನೆಗಳಲ್ಲಿ ಬೆಳಕು ಸಹ ಇಲ್ಲದೇ ಕಾರ್ಖಾನೆ ನಡೆಯುತ್ತಿವೆ. ಕಾರಣ ರೋಬೊಟ್‌ಗಳಿಗೆ ಬೆಳಕು ಬೇಕಾಗಿಲ್ಲ. ಇನ್ನು ಡ್ರೆ„ವರ್‌ ಇಲ್ಲದೇ ಗಾಡಿ ಓಡಿಸಬಹುದಾದರೆ ಇನ್ನು ಎಷ್ಟು ಕೆಲಸ ಯಂತ್ರಗಳು ಮಾನವನಿಂದ ಕಸಿದುಕೊಳ್ಳಬಹುದು ಎಂದು ಊಹಿಸುವುದು ಕಷ್ಟವಾಗಿದೆ.

ಈ ಎಲ್ಲಾ ಬದಲಾವಣೆಯೊಂದಿಗೆ ನಾವುಗಳು ವ್ಯವಹರಿಸುವುದಕ್ಕೆ ನಮ್ಮ ಕಲಿಕೆ, ವ್ಯಾಸಂಗಗಳಲ್ಲಿ ಗಣನಿಯವಾದ ಬದಲಾವಣೆ ಅಗತ್ಯವಾಗಿದೆ. ನಮ್ಮ ಕಲಿಕೆಯ ವಿಧಾನ ಹಳಸಲಾಗಿದೆ. ನಾವು ಪ್ರಯೋಜನಕ್ಕೆ ಬರಬೇಕಾದರೆ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಿಕೊಳ್ಳಬೇಕಾಗಿದೆ. ವಿಜಾnನ ಮತ್ತು ತಂತ್ರಜಾnನದ ಅಳವಡಿಕೆ ಮತ್ತು ಉತ್ಪನ್ನಗಳಿಂದ ಮಾತ್ರ ನಾವು ನಮ್ಮ ಕೆಲಸ ಮತ್ತು ಗೌರವಯುತವಾದ ಆರ್ಥಿಕತೆಯನ್ನು ಸಮೃದ್ಧಿಗೊಳಿಸಬಹುದು. 

– ಡಾ. ಕೆ.ಸಿ. ರಘ

Advertisement

Udayavani is now on Telegram. Click here to join our channel and stay updated with the latest news.

Next