Advertisement

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

12:02 AM Nov 18, 2024 | Team Udayavani |

ತೆಕ್ಕಟ್ಟೆ: ಉಡುಪಿ ಜಿಲ್ಲೆ ಸಹಿತ ರಾಜ್ಯದಲ್ಲಿ ಬಿಪಿಎಲ್‌ ಮಾತ್ರವಲ್ಲದೇ ಎಪಿಎಲ್‌ ಕಾರ್ಡು ಕೂಡ ರದ್ದಾಗಲ್ಲ . ಪತ್ರಿಕೆಗಳಲ್ಲಿ ಬಂದಿರುವ ಸುದ್ದಿ ಸುಳ್ಳು. ಯಾವುದೇ ಕಾರಣಕ್ಕೂ ರದ್ದು ಮಾಡಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದ್ದಾರೆ.

Advertisement

ನ. 17ರಂದು ಜನ್ನಾಡಿ ಕೊರಗರ ಕಾಲನಿಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಪ್ರಾಯೋಜಿತ ಜನ್ನಾಡಿ ಮತ್ತು ಮಣಿಗೇರೆ ಕೊರಗರ ಕಾಲನಿಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 14 ಉಚಿತ ಮನೆಗಳ ಗೃಹ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದ ಸಂದರ್ಭ ಅವರು ಪತ್ರಕರ್ತರ ಜತೆ ಮಾತನಾಡಿದರು.

ಕಾರ್ಡು ಪರಿಷ್ಕರಣೆ ಸಲುವಾಗಿ ಯಾರು ಆದಾಯ ತೆರಿಗೆ ಕಟ್ಟುತ್ತಾರೆ, ಯಾರಿಗೆ ಅನುಕೂಲವಿದೆ. ಅಂತಹವರ‌ನ್ನು ಬಿಪಿಎಲ್‌ ಪಟ್ಟಿಯಿಂದ ಎಪಿಎಲ್‌ಗೆ ವರ್ಗಾಯಿಸುತ್ತೇವೆ. ಆದರೆ ಕಾರ್ಡು ರದ್ದು ಮಾಡಲ್ಲ. ನಿಜವಾದ ಬಿಪಿಎಲ್‌ ಕಾರ್ಡುದಾರರಿಗೆ ಯಾವುದೇ ತೊಂದರೆಯಾಗಲ್ಲ ಎಂದವರು ಸ್ಪಷ್ಟಪಡಿಸಿದರು.

ಸರ್ವರ್‌ ಸಮಸ್ಯೆ ಇಲ್ಲ
ಬಿಪಿಎಲ್‌ನಲ್ಲಿ ಅರ್ಹರಲ್ಲದವರಿಗೆ ಎಪಿಎಲ್‌ಗೆ ವರ್ಗಾಯಿಸಲು 5 ಮಾರ್ಗಸೂಚಿ ಅನುಸರಿಸಲಾಗುತ್ತಿದೆ. ಇಲಾಖೆಗಳಲ್ಲಿ ಸರ್ವರ್‌ ಸಮಸ್ಯೆ ಸಂಪೂರ್ಣವಾಗಿ ಸರಿಹೋಗಿದೆ ಎಲ್ಲಯೂ ಸಮಸ್ಯೆಗಳಿಲ್ಲ , ಸಕಾಲಕ್ಕೆ ಎಲ್ಲದಕ್ಕೂ ಅವಕಾಶಗಳಿವೆ. ಪರಿಷ್ಕರಣೆ ಪ್ರಕ್ರಿಯೆ ಪೂರ್ತಿಯಾದ ಬಳಿಕ ಹೊಸ ರೇಷನ್‌ ಕಾರ್ಡಿಗೆ ಅವಕಾಶ ಮಾಡಿಕೊಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next