Advertisement

BPL ಕಾರ್ಡ್‌ನಿಂದ ಎಪಿಎಲ್‌ಗೆ 6ನೇ ಗ್ಯಾರಂಟಿ: ಅಶೋಕ್‌ ಲೇವಡಿ

10:24 PM Nov 17, 2024 | Team Udayavani |

ಬೆಂಗಳೂರು: ಬಿಪಿಎಲ್‌ ಕಾರ್ಡ್‌ ನಿಂದ ಎಪಿಎಲ್‌ ಕಾರ್ಡ್‌ಗೆ ಪರಿವರ್ತಿಸು ವುದು ಕಾಂಗ್ರೆಸ್‌ ಸರಕಾರದ 6ನೇ ಗ್ಯಾರಂಟಿ.ಎಲ್ಲ ಗ್ಯಾರಂಟಿ ಯೋಜನೆಗಳ ಫ‌ಲಾನುಭವಿ ಗಳ ಪೈಕಿ ವಾರ್ಷಿಕ ಶೇ. 10ರಷ್ಟು ಫ‌ಲಾನುಭವಿಗಳನ್ನು ಇದೇ ಮಾದರಿಯಲ್ಲಿ ಕಡಿತ ಮಾಡಲು ಅಧಿಕಾರಿಗಳಿಗೆ ಗುರಿ ವಿಧಿಸಲಾಗಿದೆ ಎಂದು ವಿಧಾನ ಸಭೆ ವಿಪಕ್ಷದ ನಾಯಕ ಆರ್‌. ಅಶೋಕ್‌ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಗ್ಯಾರಂಟಿಗಳಿಗೆ ಹಣ ಹೊಂದಿಸಲು ಇವ ರಿಂದ ಸಾಧ್ಯವಾಗುತ್ತಿಲ್ಲ. 1.05 ಲಕ್ಷ ಕೋಟಿ ರೂ. ಸಾಲ ಮಾಡಬೇಕಿದೆ. ರಸ್ತೆಗೆ ಒಂದು ಹಿಡಿ ಮಣ್ಣು ಹಾಕಲೂ ಆಗುವುದಿಲ್ಲ, ಯೋಚನೆ ಮಾಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ ಎಂದರು.

ಈಗಾಗಲೇ ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸಿದ್ದಾರೆ. ಪ್ರತೀ ವರ್ಷವೂ ಇದೇ ರೀತಿ ಪರಿವರ್ತಿಸುತ್ತಾ ಹೋಗುತ್ತಾರೆ. ಅಂದರೆ ಬಿಪಿಎಲ್‌ ಕಾರ್ಡ್‌ ರದ್ದಾದಂತೆಯೇ. ಹಣಕಾಸಿನ ವಿಚಾರದಲ್ಲಿ ಈ ಸರಕಾರ ಐಸಿಯುವಿನಲ್ಲಿ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next