Advertisement
ಕಟ್ಟೆ ವೀರಪ್ಪ ಮೂಲ್ಯ ಅವರು ಗದ್ದೆಗೆ ಹಾಲು ಎರೆಯುವ ಮೂಲಕ ಉದ್ಘಾಟಿಸಿದರು. ವಿಟ್ಲ ಪ.ಪಂ. ಅಧ್ಯಕ್ಷ ಅರುಣ ಎಂ. ವಿಟ್ಲ, ಉಪಾಧ್ಯಕ್ಷ ಜಯಂತ ನಾಯ್ಕ, ಸದಸ್ಯೆ ಚಂದ್ರಕಾಂತಿ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪೈ, ಎಸ್‌ಡಿಎಂಸಿ ಅಧ್ಯಕ್ಷ ಜಗನ್ನಾಥ್ ಕಾಸರಗೋಡು, ನಿಕಟಪೂರ್ವ ಅಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ, ಆರ್.ಕೆ. ಆರ್ಟ್ಸ್ ನಿರ್ದೇಶಕ ರಾಜೇಶ್ ವಿಟ್ಲ, ಬಿಆರ್‌ಪಿ ನಾರಾಯಣ ಗೌಡ, ಸಿಆರ್‌ಪಿ ರವಿ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಭಾಗೀರಥಿ, ಚಂದಳಿಕೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಕುಳಾಲು ಮತ್ತಿತರರು ಶುಭ ಹಾರೈಸಿದರು.
ಸುಮಾರು 700 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎರಡು ಗದ್ದೆಯಲ್ಲಿ ಮಕ್ಕಳಿಗೆ ಹಗ್ಗಜಗ್ಗಾಟ, ಹಾಳೆ ಎಳೆಯುವುದು. ಉಪ್ಪುಗೋಣಿ ಓಟ, ಮೂರು ಕಾಲಿನ ಓಟ, ನಿಧಿ ಶೋಧನೆ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಗದ್ದೆಗೆ ಇಳಿಯುತ್ತಿದ್ದಂತೆ ಸ್ಥಳೀಯ ಮಹಿಳೆಯರು ಆರತಿ ಎತ್ತುವ ಮೂಲಕ ಅವರನ್ನು ಸ್ವಾಗತಿಸಿದರು. ನೇಜಿ ನೆಡುವ, ಕೀಳುವ ಪ್ರಾತ್ಯಕ್ಷಿಕೆ
ಬೇಸಾಯದ ವಿವಿಧ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಬಹುತೇಕ ವಿದ್ಯಾರ್ಥಿಗಳ ತಲೆಯಲ್ಲಿ ಮುಟ್ಟಾಳೆ ರಂಜಿಸಿದರೆ, ಹಲವು ವಿದ್ಯಾರ್ಥಿಗಳಿಗೆ ಹಳ್ಳಿಭಾಗದ ಉಡುಗೆಗಳನ್ನು ತೊಡಿಸಲಾಗಿತ್ತು. ನೇಜಿ ನೆಡುವ ಹಾಗೂ ಕೀಳುವ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಗದ್ದೆ ಬೇಸಾಯದ ಬಗ್ಗೆ ಅರಿವು ಮೂಡಿಸಲು ಮೂರುಕಜೆ ಮೈತ್ರೇಯಿ ಗುರುಕುಲದಿಂದ ಒಂದು ಜೋಡಿ ಎತ್ತನ್ನು ತರಲಾಗಿತ್ತು. ಆರ್.ಕೆ. ಆರ್ಟ್ಸ್ನ ರಾಜೇಶ್ ವಿಟ್ಲ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಗದ್ದೆಯಲ್ಲಿಜಾನಪದ ನೃತ್ಯ ವೈಭವ ನಡೆಯಿತು.
Related Articles
Advertisement