Advertisement
ಬುಧವಾರ ಸಂಜೆ 5.45ರ ಸುಮಾರಿಗೆ ಮಣಿಪಾಲ ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಟ್ರಕ್ ಕರಾವಳಿ ಬೈಪಾಸ್ ಅಂಡರ್‌ಪಾಸ್‌ನಡಿ ತಿರುವು ಪಡೆಯುತ್ತಿರುವ ಸಂದರ್ಭ ಟ್ರಕ್ ಕೆಟ್ಟು ನಿಂತಿತು. ಇದು ಸಂಚಾರ ದಟ್ಟಣೆಯ ಸಮಯವಾದ್ದರಿಂದ ಮಲ್ಪೆ ಮತ್ತು ಕುಂದಾಪುರ ಕಡೆಗೆ ತೆರಳುವವರು ಮಲ್ಪೆ ಕಡೆಯಿಂದ ಬರುವವರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರು.
ಸ್ಥಳಕ್ಕೆ ಬಂದ ಪೊಲೀಸರು ಟ್ರಕ್ ನಡುವೆ ಇದ್ದ ಅಲ್ಪ ಸ್ಥಳದಲ್ಲೇ ಮೊದಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆದರೆ ಕುಂದಾಪುರ ಕಡೆಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ಸೊಂದು ಅಲ್ಲಿ ಸಿಲುಕಿಕೊಂಡಿತು. ಬಳಿಕ ಪೊಲೀಸರು ಸಂಚಾರ ಬದಲಾವಣೆ ಮಾಡಿ ಬಸ್‌ಗೆ ತೆರಳಲು ಅನುಕೂಲ ಮಾಡಿಕೊಟ್ಟರು. ಬದಲಿ ವ್ಯವಸ್ಥೆ
ಬಳಿಕ ಉಡುಪಿ ಕಡೆಯಿಂದ ಮಲ್ಪೆ ಮತ್ತು ಕುಂದಾಪುರಕ್ಕೆ ತೆರಳುವವರು ಕರಾವಳಿ ಬೈಪಾಸ್ ಬಳಿ ಎಡಕ್ಕೆ ತಿರುಗಿ ಅಂಬಲಪಾಡಿ ಜಂಕ್ಷನ್ ಮೂಲಕ ಕುಂದಾಪುರ ಮತ್ತು ಮಲ್ಪೆಗೆ ತೆರಳಲು ಅವಕಾಶ ಮಾಡಿಕೊಡಲಾಯಿತು. ಮಲ್ಪೆ ಕಡೆಯಿಂದ ಉಡುಪಿಯತ್ತ ತೆರಳುವವರು ಅಂಡರ್ ಪಾಸ್‌ನ ಮತ್ತೂಂದು ಭಾಗದಿಂದ ತೆರಳಲು ಅನುಕೂಲ ಮಾಡಿಕೊಡಲಾಯಿತು.
Related Articles
ಹಾಳಾದ ಟ್ರಕ್ಕನ್ನು ಪೊಲೀಸರು ಕ್ರೇನ್ ತರಿಸಿ ಸುಮಾರು ಅರ್ಧ ಗಂಟೆ ಕಾರ್ಯಾಚರಣೆ ಮಾಡಿ ತೆರವುಗೊಳಿಸಿದರು.
Advertisement