Advertisement

M.N. Anuchet: ವ್ಹೀಲಿಂಗ್‌ ಪುಂಡರಿಗೆ ರೌಡಿಗಳ ಮಾದರಿ ಕ್ರಮ

11:21 AM Sep 24, 2023 | Team Udayavani |

ಬೆಂಗಳೂರು: ವ್ಹೀಲಿಂಗ್‌ ಮಾಡುವ ಪುಂಡರನ್ನು ರೌಡಿಗಳ ರೀತಿಯಲ್ಲೇ ಪರಿಗಣಿಸಿ ಕಠಿಣ ಕ್ರಮ ಜರುಗಿಸಲು ಚಿಂತಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌. ಅನುಚೇತ್‌ ಹೇಳಿದ್ದಾರೆ.

Advertisement

“ಉದಯವಾಣಿ’ ಕಚೇರಿಯಲ್ಲಿ ಶನಿವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ವ್ಹೀಲಿಂಗ್‌ ಮಾಡುವ ಬಹುತೇಕರು ಅಪ್ರಾಪ್ತರಾಗಿ ದ್ದಾರೆ. ಅವರ ಬಳಿ ಪರವಾನಗಿಯೇ ಇರುವುದಿಲ್ಲ. ಇನ್ನು ಮುಂದೆ ರೌಡಿಗಳನ್ನು ಪಳಗಿಸುವ ಮಾದರಿಯಲ್ಲೇ ವ್ಹೀಲಿಂಗ್‌ ಪುಂಡರ ವಿರುದ್ಧವೂ ಕ್ರಮ ಕೈಗೊಳ್ಳಲಾ ಗು ವುದು ಎಂದರು.

ಅಪ್ರಾಪ್ತರು ವ್ಹೀಲಿಂಗ್‌ ಮಾಡಿ ಸಿಕ್ಕಿಬಿದ್ದರೆ ಅವರ ಪಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನು ಸೈಲೆನ್ಸರ್‌ಗಳಲ್ಲಿ ಹೆಚ್ಚಿನ ಶಬ್ದ ಬರುವಂತೆ, ಕರ್ಕಶ ಧ್ವನಿಗಳನ್ನು ವಾಹನಗಳ ಅಳವಡಿಸಿ ನವೀಕರಣ ಗೊಳಿಸುವ ಗ್ಯಾರೇಜ್‌ಗಳ ವಿರುದ್ಧವೂ ಕಣ್ಣಿಡಲಾ ಗಿದೆ. ಇಂತಹ ಪ್ರಕರಣಗಳಲ್ಲಿ ಸವಾರರು ಸಿಕ್ಕಿಬಿದ್ದರೆ ಇವರ ನವೀಕರಣ ಮಾಡಿದ ಗ್ಯಾರೇಜ್‌ ಮಾಲೀಕರಿಗೂ ಬಿಸಿ ಮುಟ್ಟಿಸಲಾ ಗುವುದು. ಇದರ ಜೊತೆಗೆ  ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿರುವವರ ವಿರುದ್ಧ  ಕೇಸ್‌ ದಾಖಲಿಸಲಾಗುವುದು ಎಂದ‌ರು.

ಬಹುತೇಕ ಸಂಚಾರ ನಿಯಮ ಉಲ್ಲಂಘನೆಗೆ ಕಡಿಮೆ ದಂಡ ವಿಧಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಾಗಲು ಇದೂ ಒಂದು ಕಾರಣ ವಾಗಿದೆ. ಡ್ರಂಕ್‌ ಆ್ಯಂಡ್‌ ಡ್ರೈವ್‌ ಪ್ರಕರಣದಲ್ಲಿ ಸಿಕ್ಕಿ ಬಿದ್ದರೆ 10 ಸಾವಿರ ರೂ. ದಂಡ ವಿಧಿಸ ಲಾಗುತ್ತದೆ. ಪರವಾನಗಿ ಇಲ್ಲದಿದ್ದರೆ ಇದಕ್ಕೆ ಹೆಚ್ಚುವರಿ  2 ಸಾವಿರ ರೂ. ಪಾವತಿ ಸಬೇಕಾಗುತ್ತದೆ ಅಷ್ಟೆ. ಸಿಂಗಾ ಪುರ ದಂತಹ ದೇಶ ಗಳಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದರೆ ಮತ್ತೆ ವಾಹನ ಚಲಾಯಿಸುವುದು ಕಷ್ಟ . ಪರವಾನಗಿ ಇಲ್ಲದಿದ್ದರೆ ಜೈಲಿಗೆ ಹಾಕುತ್ತಾರೆ. ನಮ್ಮಲ್ಲೂ ಇಂತಹ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

300 ಎಎನ್‌ಪಿಆರ್‌ ಕ್ಯಾಮೆರಾ : ಎಎನ್‌ಪಿಆರ್‌ ಕ್ಯಾಮೆರಾಗಳನ್ನು ಹಂತ-ಹಂತವಾಗಿ ವಿಸ್ತರಿಸಲಾ ಗುವುದು. ಈಗಾಗಲೇ ನಗರದ ವಿವಿಧೆಡೆ 50 ಕ್ಯಾಮೆರಾ ಗಳಿವೆ. ಇನ್ನೂ 25 ಕ್ಯಾಮೆರಾ ಅಳ ವಡಿಸಲು ಸರ್ಕಾರಕ್ಕೆ ಕೋರಲಾಗಿದೆೆ. ಒಟ್ಟಾರೆ ಬೆಂಗಳೂರಿನ 300 ಪ್ರಮುಖ ಜಂಕ್ಷನ್‌ಗ ಳಲ್ಲಿ ಈ ಕ್ಯಾಮೆರಾ ಅಳವಡಿಸಲು ಚಿಂತಿಸಲಾಗಿದೆ. ಡ್ರೋನ್‌ ಗಳು ಕೇವಲ 20 ರಿಂದ 30 ನಿಮಿಷ ನಿರಂತರ ವಾಗಿ ಹಾರಾಟ ಮಾಡಿ ಮಾಹಿತಿ ನೀಡ ಬಲ್ಲವು. ಇದರ ಬದಲಿಗೆ ಪ್ರಮುಖ ಜಂಕ್ಷನ್‌ಗಳ ಬಳಿ ಯಿರುವ ಬೃಹತ್‌ ಗಾತ್ರದ ಕಟ್ಟಡಗಳ ಮೇಲೆ ಪಕ್ಷಿ ನೋಟ 360 ಡಿಗ್ರಿ ಕ್ಯಾಮೆರಾ ಅಳವಡಿಸ ಲಾ ಗು ವುದು. ರಸ್ತೆ ಅಪಘಾತ ಸಂಭವಿಸಿದರೆ ಆ ಸ್ಥಳಕ್ಕೆ ತುರ್ತಾಗಿ ಡ್ರೋನ್‌ ಕಳುಹಿಸಿ ಅಲ್ಲಿನ ಮಾಹಿತಿ ಕಲೆ ಹಾಕು ವ ವ್ಯವಸ್ಥೆಗಳನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲು ಸಿದ್ಧತೆಗಳು ನಡೆಯುತ್ತಿದೆ ಎಂದು ತಿಳಿಸಿದರು.

Advertisement

ಸಿಬ್ಬಂದಿ ಕೊರತೆ ಇಲ್ಲ: ದೆಹಲಿ ಹೊರತು ಪಡಿಸಿದರೆ 2ನೇ ಹೆಚ್ಚು ಸಿಬ್ಬಂದಿ  ಒಗೊಂಡಿರುವುದು ಬೆಂಗಳೂರು ಸಂಚಾರ ವಿಭಾಗದಲ್ಲಿ. ದೆಹಲಿಯಲ್ಲಿ 6,200 ಸಿಬ್ಬಂದಿ ಯಿದ್ದರೆ, ಇಲ್ಲಿ 5,400 ಸಿಬ್ಬಂದಿ ಇದ್ದಾರೆ. ಅಲ್ಲದೆ, ಹೆಚ್ಚುವರಿ ಯಾಗಿ ಹೋಮ್‌ ಗಾರ್ಡ್‌ ಗಳಿದ್ದಾರೆ. 8 ಗಂಟೆ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 800 ಮಂದಿ ಟ್ರಾಫಿಕ್‌ ವಾರ್ಡನ್‌ಗಳಿದ್ದಾರೆ. 25 ವರ್ಷ ಮೇಲ್ಪಟ್ಟ 10ನೇ ತರಗತಿ ಮೇಲ್ಪಟ್ಟ 200 ಜನರನ್ನು ಈ ವರ್ಷ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬ್ಯಾಚ್‌ ವೈಸ್‌ ಸಿಬ್ಬಂದಿ ಕಳಿಸಲು ಐಟಿ ಕಂಪನಿಗಳಿಗೆ ಸೂಚನೆ: ದೊಡ್ಡ ಐಟಿ ಪಾರ್ಕ್‌ಗಳಲ್ಲಿ ಬ್ಯಾಚ್‌ ವೈಸ್‌ ಸಿಬ್ಬಂದಿಯನ್ನು ಕಚೇರಿಗೆ ಕರೆಸಿ ಎಂದು ಹೇಳಿದ್ದೇವೆ. 5 ಗಂಟೆಗೆ ಕಚೇರಿ ಮುಚ್ಚುವ ಬದಲು 3 ಗಂಟೆಯಿಂದ ಹಂತ-ಹಂತವಾಗಿ 7 ಗಂಟೆಯವರೆಗೆ ಸಿಬ್ಬಂದಿಯನ್ನು ಕಳುಹಿಸಿದರೆ ಉತ್ತಮ. ಶಾಲೆಗಳಲ್ಲೂ ಮಧ್ಯಾಹ್ನ ಮಕ್ಕಳನ್ನು ಕಳುಹಿಸಲು ಸೂಚಿಸಿದ್ದೇವೆ. ಇದರಿಂದ ಪೀಕ್‌ ಅವರ್‌ನಲ್ಲಿ ದಟ್ಟಣೆ ಕಡಿಮೆಯಾಗಲಿದೆ ಎಂದು ಅನುಚೇತ್‌ ಹೇಳಿದರು.

ಅಲ್ಲಲ್ಲಿ ವಾಹನ ತಡೆಯುವುದಿಲ್ಲ :

ಸದ್ಯ ನಗರದಲ್ಲಿ ಅಲ್ಲಲ್ಲಿ ವಾಹನ ಸವಾರರನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ದಂಡ ವಿಧಿಸುತ್ತಿಲ್ಲ. ಶೇ.97ರಷ್ಟು ಸಂಪರ್ಕ ರಹಿತ ವಾಗಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುತ್ತಿದೆ. ಆದರೆ, ಫ‌ುಟ್‌ಪಾತ್‌ ರೈಡಿಂಗ್‌, ನಿರ್ಬಂಧಿಸಿರುವ ರಸ್ತೆಗಳಲ್ಲಿ ಪ್ರಯಾಣಿ ಸುವಂತಹ ಉಲ್ಲಂಘನೆಗಳ ಪ್ರಕರಣ ಬಗ್ಗೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಹೆಲ್ಮೆಟ್‌ ಧರಿಸುವುದು ನಮ್ಮ ಸುರಕ್ಷತೆಗೆ ಎಂಬ ಭಾವನ ಸವಾರರಲ್ಲಿ ಮೂಡಬೇಕು. ಈ ನಿಟ್ಟಿನಲ್ಲಿ ಸ್ಕೂಲ್‌ ಅಸೋಸಿಯೇಷ‌ನ್‌ ಫಾರ್‌ ರೋಡ್‌ ಸೇಫ್ಟಿ ಮೂಲಕ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಅಲ್ಲಲ್ಲಿ ವಾಹನ ತಡೆಯುವುದಿಲ್ಲ :

ಸದ್ಯ ನಗರದಲ್ಲಿ ಅಲ್ಲಲ್ಲಿ ವಾಹನ ಸವಾರರನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ದಂಡ ವಿಧಿಸುತ್ತಿಲ್ಲ. ಶೇ.97ರಷ್ಟು ಸಂಪರ್ಕ ರಹಿತ ವಾಗಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುತ್ತಿದೆ. ಆದರೆ, ಫ‌ುಟ್‌ಪಾತ್‌ ರೈಡಿಂಗ್‌, ನಿರ್ಬಂಧಿಸಿರುವ ರಸ್ತೆಗಳಲ್ಲಿ ಪ್ರಯಾಣಿ ಸುವಂತಹ ಉಲ್ಲಂಘನೆಗಳ ಪ್ರಕರಣ ಬಗ್ಗೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಹೆಲ್ಮೆಟ್‌ ಧರಿಸುವುದು ನಮ್ಮ ಸುರಕ್ಷತೆಗೆ ಎಂಬ ಭಾವನ ಸವಾರರಲ್ಲಿ ಮೂಡಬೇಕು. ಈ ನಿಟ್ಟಿನಲ್ಲಿ ಸ್ಕೂಲ್‌ ಅಸೋಸಿಯೇಷ‌ನ್‌ ಫಾರ್‌ ರೋಡ್‌ ಸೇಫ್ಟಿ ಮೂಲಕ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next