Advertisement
300 ಕ್ಕೂ ಅಧಿಕ ಮಂದಿ ಸ್ಥಳದಲ್ಲಿ ಸೇರಿದ್ದರಲ್ಲದೇ, “ಕೃಷಿ ಭೂಮಿಯಲ್ಲಿ ಟವರ್ ನಿರ್ಮಾ ಣಕ್ಕೆ ಅವಕಾಶ ನೀಡಿದ್ದುಯಾರು’ ಎಂದು ಪ್ರಶ್ನಿಸಿದರಲ್ಲದೆ ಯಾವುದೇ ಕಾರಣಕ್ಕೂ ಟವರ್ ನಿರ್ಮಾಣಕ್ಕೆ ಬಿಡೆವು ಎಂದರು. ಜಿಲ್ಲಾಧಿಕಾರಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆದೇಶ ಹೊರಡಿಸುವುದಲ್ಲ. ಖುದ್ದಾಗಿ ಸ್ಥಳಕ್ಕೆ ಬಂದು ನೋಡಲಿ. ಜನರ ವಿರೋ ಧದ ಮಧ್ಯೆ ಕಾಮ ಗಾರಿಯನ್ನು ಮುಂದು ವರಿಸಿದರೆ ಜಿಲ್ಲಾಧಿಕಾರಿಗಳ ವಿರುದ್ಧವೇ ಹೋರಾಟ ಅನಿವಾರ್ಯ ಎಂದರು.
ಇನ್ನಾ ಗ್ರಾಮದ 8 ಕಡೆ ಟವರ್ ನಿರ್ಮಾಣಕ್ಕೆ ಸರಕಾರಿ ಮತ್ತು ಖಾಸಗಿ ಜಾಗದಲ್ಲಿ ಸ್ಥಳ ಗುರುತಿಸಲಾಗಿದೆ. ಖಾಸಗಿ ಜಾಗದ ಮಾಲಕರಿಗೆ ನೋಟಿಸ್ ನೀಡದೆ ಕಾಮಗಾರಿ ನಡೆಸಲಾಗುತ್ತಿದೆ. ವಿದ್ಯುತ್ ಲೈನ್ ಹಾದು ಹೋಗುವ ಪ್ರದೇಶದ 250 ಕ್ಕೂ ಅಧಿಕ ಕೃಷಿಕ ಕುಟುಂಬಗಳಿಗೆ ತೊಂದರೆಯಾಗಲಿದೆ ಎಂದು ಜಿ.ಪಂ. ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಆರೋಪಿಸಿದರು.ಇನ್ನಾ ಗ್ರಾ.ಪಂ. ಸದಸ್ಯ ದೀಪಕ್ ಕೋಟ್ಯಾನ್, ಜಿಲ್ಲಾ ಧಿಕಾರಿಗಳಿಗೆ ಮನವಿ ಮಾಡಿದರೂ ಪದೇ ಪದೇ ಟವರ್ ನಿರ್ಮಾಣಕ್ಕೆ ಆದೇಶಿ ಸುತ್ತಿದ್ದಾರೆ. ಉಗ್ರ ಹೋರಾಟ ಅನಿವಾರ್ಯ ಎಂದರು. ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಪ್ರಸನ್ನ, ಗ್ರಾಮಕರಣಿಕ ಹನುಮಂತಪ್ಪ, ಗ್ರಾಮಸ್ಥರಾದ ಅಮರನಾಥ್ ಶೆಟ್ಟಿ, ಗ್ರಾ.ಪಂ. ಸದಸ್ಯ ಚಂದ್ರಹಾಸ ಶೆಟ್ಟಿ ಮತ್ತಿತರರು ಸ್ಥಳದಲ್ಲಿದ್ದರು.
Related Articles
– ನರಸಪ್ಪ, ಕಾರ್ಕಳ ತಹಶೀಲ್ದಾರ್
Advertisement