Advertisement

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

11:58 AM Jan 03, 2025 | Team Udayavani |

ಕಟಪಾಡಿ: ಮಣಿಪುರ ಕುಂತಳ ನಗರದ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದ ಎರಡು ದಿನಗಳ ಸಮಾರಂಭಕ್ಕೆ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಜ.2ರಂದು ದೀಪ ಬೆಳಗಿಸಿ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ಮಗುವನ್ನೂ ಅಕ್ಷರ ಪ್ರಪಂಚಕ್ಕೆ ತೆರೆದುಕೊಳ್ಳುವಲ್ಲಿ 100 ವರ್ಷಗಳ ಹಿಂದೆ ದಿ| ಕೆ.ಸೋಮಯ್ಯ ಶೆಟ್ಟಿ, ದಿ| ರಾಧಾ ಸೋಮಯ್ಯ ಶೆಟ್ಟಿ ಅವರಿಂದ ಸ್ಥಾಪಿಸಲ್ಪಟ್ಟ ಈ ಶಾಲೆ, ಬಳಿಕ ದಿ| ಪಿ. ಜಗನ್ನಾಥ ಶೆಟ್ಟಿ ಪರಿಶ್ರಮದ ಮೂಲಕ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಾಗಿ ನೀಡಿದ ಸೇವೆ ಅನನ್ಯ. ಈಗ ಶತಮಾನೋತ್ಸವ ಆಚರಿಸು ವುದು ಸಂಭ್ರಮದ ಸಾರ್ಥಕ ಕ್ಷಣ ಎಂದರು.

ಮಾಜಿ ಸಚಿವ ಪ್ರಮೋದ್‌ ಮಧ್ವ ರಾಜ್‌ ಮಾತನಾಡಿ, ಇಂಗ್ಲಿಷ್‌ ವ್ಯಾಮೋಹವಿದ್ದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕನ್ನಡ ಶಾಲೆಯೊಂದರ 100 ವರ್ಷದ ಸಂಭ್ರಮ ನಿಜಕ್ಕೂ ಸ್ಥಾಪಕರ ನೈಜ ಸೇವೆ, ಪರಿಶ್ರಮಕ್ಕೆ ಸಂದ ಮೌಲ್ಯ ಎಂದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾ ಧ್ಯಾಯ ಶಾಬನ್‌ ಬ್ಯಾರಿ, ಸಾಧಕರಾದ ರಾಘು ಪೂಜಾರಿ ಕಲ್ಮಂಜೆ, ಅಶೋಕ್‌ ಶೆಟ್ಟಿ, ಸೆಲಿನ್‌ ಪುಷ್ಪ ಆಳ್ವ, ಪಡುಬಿದ್ರಿ ಪಲ್ಲವಿ ಸಂತೋಷ್‌ ಶೆಟ್ಟಿ, ಉಡುಪಿ ಸ್ವದೇಶ್‌ ನಾಗೇಶ್‌ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಬಿಜೆಪಿ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಮುನಿ ಯಾಲು ಉದಯ ಕುಮಾರ್‌ ಶೆಟ್ಟಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಕಾಪು ಶುಭ ಹಾರೈಸಿದರು.

ಹುಬ್ಬಳ್ಳಿ ಪಂಜುರ್ಲಿ ಗ್ರೂಪ್‌ ಆಫ್‌ ಹೊಟೇಲ್ಸ್‌ನ ರಾಜೇಂದ್ರ ವಿ. ಶೆಟ್ಟಿ, ಶಿವಿಕ ಪ್ಲಾಸ್ಟಿಕ್ಸ್‌ ಎಂ.ಡಿ. ಮಧುಕರ ಶೆಟ್ಟಿ, ಓಫುಲ ಸಾಫ್ಟ್‌ವೇರ್‌ ಎಂ.ಡಿ. ಸುಭಾಸ್‌ ಸಾಲಿಯಾನ್‌, ಮಣಿಪುರ ಗ್ರಾ.ಪಂ.ಅಧ್ಯಕ್ಷೆ ಚೈತ್ರಾ, ಸದಸ್ಯ ಸಂತೋಷ್‌ ಶೆಟ್ಟಿ, ಮಾಜಿಅಧ್ಯಕ್ಷ ವಿನ್ಸೆಂಟ್‌ ಡಿ’ಸೋ ಜಾ, ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬಿಸಿ ಟ್ರಸ್ಟ್‌ ಕಾಪು ತಾ. ಯೋಜನಾಧಿಕಾರಿ ಮಮ ತಾ ಶೆಟ್ಟಿ, ನ್ಯಾಯವಾದಿ ಎನ್‌.ಕೆ. ಆಚಾರ್ಯ, ಮುಂಬಯಿ ಹೊಟೇಲ್‌ಉದ್ಯಮಿ ಅಶೋಕ್‌ ಶೆಟ್ಟಿ, ದೆಂದೂರು ಗೋಪು ಪೂಜಾರಿ, ಉದ್ಯಮಿ ಭರತ್‌ಶೆಟ್ಟಿ ದೆಂದೂರು, ಸತೀಶ್‌ ಶೆಟ್ಟಿ, ರಾಘವ ಕೋಟ್ಯಾನ್‌, ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಕಾರ್ತಿಕ್‌ ಶೆಟ್ಟಿ, ಜತೆಕಾ ರ್ಯದರ್ಶಿ ಸಂಧ್ಯಾ ಕಿಶೋರ್‌ ಶೆಟ್ಟಿ, ವೈ. ಕರುಣಾಕರ ಶೆಟ್ಟಿ, ಸಂಚಾಲಕರಾದ ಅನುಸೂಯ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌ| ಸಲಹೆಗಾರ ಭುವರಾಯ ಆಚಾರ್ಯ, ಉಪಾಧ್ಯಕ್ಷ ಅಶೋಕ್‌ ಪೂಜಾರಿ, ಕಾರ್ಯದರ್ಶಿ ಪ್ರದೀಪ್‌ ಪೂಜಾರಿ, ಖಜಾಂಚಿ ಪ್ರವೀಣ್‌ ಪೂಜಾರಿ, ಆರ್ಥಿಕ ಸಮಿತಿ ಸಂಚಾಲಕ ಗುರುರಾಜ್‌ ಭಟ್‌, ಶಿಕ್ಷಕರಕ್ಷಕ ವೃಂದದ ಅಧ್ಯಕ್ಷೆ ರೇಶ್ಮಾ, ಉಪಾಧ್ಯಕ್ಷೆ ಆಶಾ, ವಿದ್ಯಾರ್ಥಿ ನಾಯಕ ಧನುಷ್‌ ಪೂಜಾರಿ ಉಪಸ್ಥಿತರಿದ್ದರು.

Advertisement

ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೈ. ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಶಾ ಶೇಖರ್‌ ವಂದಿಸಿದರು. ಉಪನ್ಯಾಸಕ ಸಚೇಂದ್ರ ಅಂಬಾಗಿಲು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next