Advertisement
ಜಿಲ್ಲಾಡಳಿತ ಪ್ರತೀ ವರ್ಷದಂತೆ ಮೇ 15ರಿಂದ ಸೆ.15ರ ವರಗೆ ಯಾವುದೇ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಹೇರುತ್ತದೆ. ಈ ಸಮಯದಲ್ಲಿ ಯಾವುದೇ ವಾಟರ್‌ನ್ಪೋರ್ಟ್ಸ್ ನಡೆಸಲು ಅನುಮತಿ ಇರುವುದಿಲ್ಲ.
ವಾರಾಂತ್ಯ ಹಾಗೂ ಕೃಷ್ಣಾಷ್ಟಮಿ ರಜೆಯ ಹಿನ್ನೆಲೆಯಲ್ಲಿ ಈ ವಾರವೂ ಕಡಲತೀರದಲ್ಲಿ ಹೆಚ್ಚಿನ ಜನರು ಕಂಡು ಬಂದಿದ್ದಾರೆ. ಶುಕ್ರವಾರ ಮತ್ತು ಶನಿವಾರ ದೂರದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿದ್ದರು ರವಿವಾರ ಮಧ್ಯಾಹ್ನದ ಬಳಿಕ ಸ್ಥಳೀಯರು ಕಂಡು ಬಂದಿದ್ದಾರೆ. 3 ದಿವಸ ಸತತ ರಜೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದ್ದುದರಿಂದ ಹೆಚ್ಚುವರಿ ಜೀವರಕ್ಷಕರು, ಹೋಮ್ ಗಾರ್ಡ್‌ಗಳು ಇದ್ದಾರೆ.
Related Articles
ಪಣಂಬೂರು: ಹಬ್ಬದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ರಜೆಯಿದ್ದುದರಿಂದ ರವಿವಾರ ಪಣಂಬೂರು ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ದವಾಗಿ ಮರಳು ಕೊರೆತವಾಗಿ ಬೀಚ್ ಆಳವಾಗಿದ್ದು ಪ್ರವಾಸಿಗರಿಗೆ ನೀರಿಗಿಳಿಯಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಹೆಚ್ಚಿನ ಪ್ರವಾಸಿಗರು ದೂರದಲ್ಲೇ ನೋಡಿ ಸಮಾಧಾನ ಪಟ್ಟುಕೊಳ್ಳಬೇಕಾಯಿತು.
Advertisement
ಉಳ್ಳಾಲ: ಹೆಚ್ಚಿನ ಜನಸಂದಣಿಉಳ್ಳಾಲ: ಕಳೆದ ಎರಡು ದಿನಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಹಬ್ಬದ ಸಡಗರದಲ್ಲಿದ್ದ ಜನರು ರವಿವಾರ ಸೋಮೇಶ್ವರ ಮತ್ತು ಉಳ್ಳಾಲ ಬೀಚ್‌ಗಳಗೆ ತೆರಳಿದ್ದರಿಂದ ಜನಸಂದಣಿ ಅಧಿಕವಾಗಿತ್ತು, ಸಾಮಾನ್ಯವಾಗಿ ರವಿವಾರ ಸೋಮೇಶ್ವರದ ಎರಡು ಮತ್ತು ಉಳ್ಳಾಲದ ಬೀಚ್‌ನಲ್ಲಿ ಪ್ರವಾಸಿಗರ ದಂಡು ಇದ್ದರೂ, ಕಳೆದೆರಡು ದಿನಗಳಿಂದ ಅತೀ ಹೆಚ್ಚು ಪ್ರವಾಸಿಗರು ಆಗಮಿಸಿದ್ದಾರೆ. ಉಳ್ಳಾಲ ದರ್ಗಾ ವೀಕ್ಷಣೆಗೆ ಬರುವ ಸಂಖ್ಯೆಯೂ ಹೆಚ್ಚಳವಾಗಿದ್ದು, ದರ್ಗಾ ಸಂದರ್ಶಿಸುವ ಪ್ರವಾಸಿಗರು ಉಳ್ಳಾಲ ಬೀಚ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಸೋಮೇಶ್ವರ ದೇಗುಲ ಬಳಿಯ ಸಮುದ್ರತಟ, ರುದ್ರಪಾದೆ ಸೇರಿದಂತೆ ಮೂಡಾ ಸೈಟ್ ಬಳಿಯ ಬೀಚ್‌ನಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಳ ಕಂಡು ಬಂದಿದೆ. ಸಂಜೆ ವೇಳೆಗೆ ಕೆಲಕಾಲ ಮಳೆಯಾದಾಗ ಸಮುದ್ರ ತಟ ಖಾಲಿ ಯಾದೂ ಮಳೆ ನಿಂತ ಬಳಿಕ ಸಂಖ್ಯೆ ಹೆಚ್ಚಿತ್ತು. ಉಚ್ಚಿಲ ಎಂಡ್ ಪಾಯಿಂಟ್ ಕಡಲ್ಕೊರೆತ ಸಮಸ್ಯೆಯಿಂದಾಗಿ ಪ್ರವಾಸಿಗರ ಸಂಚಾರಕ್ಕೆ ತಡೆಯಾಗಿದೆ.