Advertisement
ಮಲಬಾರ್ ರಿವರ್ ಕ್ರೂಸ್ ಟೂರಿಸಂ ಯೋಜನೆಯು ಜಾರಿಯಾಗುವುದ ರೊಂದಿಗೆ ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ವಲಯದಲ್ಲಿ ಮತ್ತೂಂದು ಸಾಧನೆಯಾಗಲಿದೆ. ಜಿಲ್ಲೆಯ ಚಂದ್ರಗಿರಿ ನದಿಯಿಂದ ಆರಂಭಿಸಿ ಕವಾಯಿ ನದಿ ತನಕ ಕಾರ್ಯಗತಗೊಳಿಸುವ ನೂತನ ಯೋಜನೆಗಳು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಾಗಿವೆ.
ಜಿಲ್ಲೆಯಲ್ಲಿ ಹರಿಯುವ ಚಂದ್ರಗಿರಿ ನದಿಯಲ್ಲಿ ಯಕ್ಷಗಾನ ಕ್ರೂಸ್‌ನಿಂದ ಆರಂಭಿಸಿ ಪೆರುಂಬಾ ನದಿಯಲ್ಲಿ ಮ್ಯೂಸಿಕ್ ಕ್ರೂಸ್, ಕವಾಯಿ ಹಾಗೂ ವಲಿಯಪರಂಬ ಹಿನ್ನೀರುಗಳಲ್ಲಿ ಹ್ಯಾಂಡೂÉಮ್ ಆ್ಯಂಡ್ ಹ್ಯಾಂಡಿಕ್ರಾಫ್ಟ್ ಕ್ರೂಸ್, ತೇಜಸ್ವಿನಿ ನದಿ ಯಲ್ಲಿ ವಾಟರ್ ನ್ಪೋರ್ಟ್ಸ್ ಆ್ಯಂಡ್ ರಿವರ್ ಬಾತಿಂಗ್ ಕ್ರೂಸ್, ವಲಯಪರಂಬ ಹಿನ್ನೀರಿನಲ್ಲಿ ಮಾದರಿ ರೆಸ್ಪಾನ್ಸಿಬಲ್ ಗ್ರಾಮ ಎಂಬ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಉತ್ತರ ಕೇರಳ ಅಭಿವೃದ್ಧಿ ಗುರಿ
ಮಲಬಾರ್ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯ ಉದ್ದೇಶ ದೊಂದಿಗೆ ಕೇರಳ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯು ಅನುಷ್ಠಾನಕ್ಕೆ ತರುವ ಮಲಬಾರ್ ರಿವರ್ ಕ್ರೂಸ್ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಯೋಜನೆಯು ಜಾರಿಯಾಗುವುದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉತ್ತರ ಕೇರಳ ಅಭಿವೃದ್ಧಿ ಹೊಂದಲಿದೆ.
Related Articles
Advertisement
ಕಣ್ಣೂರಿನಲ್ಲಿ ಅಂ.ರಾ. ವಿಮಾನ ನಿಲ್ದಾಣಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರ ಕಾರ್ಯಾರಂಭ ಗೊಳ್ಳುವುದರೊಂದಿಗೆ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ. ಮಾತ್ರವಲ್ಲದೆ ಈ ಯೋಜನೆಗಳ ಅನುಷ್ಠಾನದ ಮೂಲಕ ಮಲಬಾರಿನ ಅಸಂಖ್ಯಾತ ಮಂದಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವೂ ದೊರಕಲಿದೆ. ಮಲಬಾರಿನ ಸಾಂಸ್ಕೃತಿಕ ಕಲಾರೂಪಕ
ಪ್ರವಾಸೋದ್ಯಮದೊಂದಿಗೆ ಪರಂಪರಾಗತ ನೌಕರಿ ವಲಯಗಳಾದ ಮೀನುಗಾರಿಕೆ, ಭತ್ತ ಕೃಷಿ, ಕೈಮಗ್ಗ, ಕಂಚು – ಮಣ್ಣಿನ ಪಾತ್ರೆಗಳು ಮುಂತಾದವುಗಳನ್ನು ಪ್ರವಾಸೋದ್ಯಮ ಯೋಜನೆಯ ಅಂಗವಾಗಿಸಿ ಅವುಗಳ ನಿರ್ಮಾಣ ಹಾಗೂ ಮಾರಾಟವನ್ನು ಇದರ ಅಂಗವಾಗಿ ಅನುಷ್ಠಾನಕ್ಕೆ ತರಲಾಗುವುದು. ಅಡುಗೆ ವಿಧಾನಗಳು, ಮಲಬಾರಿನ ವಿಶೇಷ ಖಾದ್ಯಗಳು, ಸ್ಥಳೀಯ ಖಾದ್ಯಗಳನ್ನು ಪ್ರವಾಸಿಗರಿಗೆ ಒದಗಿಸಲು ಮತ್ತು ಪರಿಚಯಿಸಲು ತೀರ್ಮಾನಿಸಲಾಗಿದೆ. ಜಲ ಸಾರಿಗೆಯನ್ನು ಇದರ ಮೂಲಕ ಪ್ರಚಾರಕ್ಕೆ ತರಲು ಉದ್ದೇಶಿಸಲಾಗಿದೆ. ಮಲಬಾರಿನ ಸಾಂಸ್ಕೃತಿಕ ಕಲಾರೂಪಕಗಳಾದ ತೈಯ್ಯಂ, ಒಪ್ಪನ, ಕೋಲ್ಕಳಿ, ಪೂರಕಳಿ, ಯಕ್ಷಗಾನ ಮೊದಲಾದವುಗಳನ್ನು ಯೋಜನೆಯಲ್ಲಿ ಸೇರಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರಕಾರವು 50 ಕೋಟಿ ರೂ. ಒದಗಿಸಿದೆ. 100 ಕೋಟಿ ರೂ.ಕೇಂದ್ರ ಸರಕಾರದಿಂದ ಧನಸಹಾಯವಾಗಿ ನಿರೀಕ್ಷಿಸಲಾಗಿದೆ.ಯೋಜನೆಯು ಪೂರ್ಣಗೊಳ್ಳಲು 325 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.