Advertisement

KSRTC… ಪ್ರಕೃತಿ ಪ್ರಿಯರಿಗೆ ಪ್ರವಾಸದ ಹಬ್ಬ: ಕೆಎಸ್ಸಾರ್ಟಿಸಿಯಿಂದ ಪ್ಯಾಕೇಜ್‌ ಟೂರ್‌

11:52 AM Aug 08, 2023 | Team Udayavani |

ಬೆಂಗಳೂರು: ಮುಂಗಾರು ಮಳೆಯಿಂದ ಪ್ರಕೃತಿ ಕಳೆಗಟ್ಟಿದ್ದು, ಅದರ ಸೌಂದರ್ಯ ವೀಕ್ಷಿಸಲು ಜನ ಮುಗಿಬೀಳುತ್ತಿದ್ದಾರೆ. ಈ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಎರಡು ಪ್ರತ್ಯೇಕ ಪ್ಯಾಕೇಜ್‌ ಟೂರ್‌ಗಳನ್ನು ಘೋಷಿಸಿದ್ದು, ಕ್ರಮವಾಗಿ ಆ. 11 ಮತ್ತು 12ರಂದು ಕಾರ್ಯಾರಂಭ ಮಾಡಲಿವೆ. ಪ್ರತಿ ವಾರಾಂತ್ಯದ ದಿನಗಳಲ್ಲಿ ಸೇವೆ ಲಭ್ಯವಾಗ ಲಿದೆ. “ಬೆಂಗಳೂರು- ಜೋಗ ಜಲಪಾತ’ ಪ್ಯಾಕೇಜ್‌ ಟೂರ್‌ ಆ. 11ರಿಂದ ಶಿವಮೊಗ್ಗ, ಸಾಗರ ಮಾರ್ಗವಾಗಿ ಕಾರ್ಯಾರಂಭ ಮಾಡಲಿದೆ. ನಾನ್‌ ಎಸಿ ಸ್ಲೀಪರ್ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಈ ಸೇವೆ ಲಭ್ಯವಾಗಲಿದೆ.

Advertisement

ಬೆಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು, ಸಾಗರ, ವರದಹಳ್ಳಿ, ಇಕ್ಕೇರಿ, ಕೆಳದಿ, ಸಾಗರ ಮಾರ್ಗವಾಗಿ ಬೆಳಗಿನಜಾವ 5ಕ್ಕೆ ಜೋಗ ತಲುಪಲಿದೆ. ಪ್ರಯಾಣ ದರ ವಯಸ್ಕರಿಗೆ 2,500 ರೂ. ಹಾಗೂ 6ರಿಂದ 12 ವರ್ಷದ ಒಳಗಿನವರಿಗೆ 2,300 ರೂ. ನಿಗದಿಪಡಿಸಲಾಗಿದೆ. ಅದೇ ರೀತಿ, ಬೆಂಗಳೂರು- ಸೋಮನಾಥಪುರ- ತಲಕಾಡು- ಮಧ್ಯರಂಗ- ಭರಚುಕ್ಕಿ- ಗಗನಚುಕ್ಕಿಗೆ ಪ್ಯಾಕೇಜ್‌ ಟೂರ್‌ ಆ. 12ರಿಂದ ಆರಂಭಗೊಳ್ಳಲಿದ್ದು, ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ಈ ಸೇವೆ ಲಭ್ಯ ಇರಲಿದೆ. ಬೆಂಗಳೂರಿನಿಂದ ಬೆಳಗಿನಜಾವ 6.30ಕ್ಕೆ ಹೊರಡುವ ಬಸ್‌, ಮದ್ದೂರು, ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ವೀಕ್ಷಣೆಯೊಂದಗೆ ರಾತ್ರಿ 9ಕ್ಕೆ ಬೆಂಗಳೂರಿಗೆ ವಾಪಸ್‌ ಆಗಲಿದೆ. ಪ್ರಯಾಣ ದರ ವಯಸ್ಕರಿಗೆ 450 ರೂ. ಹಾಗೂ 6ರಿಂದ 12 ವರ್ಷದ ಒಳಗಿನವರಿಗೆ 300 ರೂ. ನಿಗದಿಪಡಿಸಲಾಗಿದೆ (ಪ್ರವೇಶ ಶುಲ್ಕವು ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಹೊರತುಪಡಿಸಿ) ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಮಾಹಿತಿಗೆ ಮೊ: 77609 90287 ಅಥವಾ 77609 90988 ಸಂಪರ್ಕಿಸಬಹುದು.

ಇದನ್ನೂ ಓದಿ: Doddaballapura: 5 ಲಕ್ಷದ ಚೆಕ್‌ ಅನ್ನು 65 ಲಕ್ಷ ಎಂದು ತಿದ್ದಿ ಸಿಕ್ಕಿಬಿದ್ದ ಮಧ್ಯವರ್ತಿ

Advertisement

Udayavani is now on Telegram. Click here to join our channel and stay updated with the latest news.

Next