Advertisement

ರಾಜ್ಯದಲ್ಲಿ ಇಂದು 442 ಕೋವಿಡ್ ಪ್ರಕರಣ ದಾಖಲು ; 519 ಜನ ಗುಣಮುಖ

08:15 PM Jun 25, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಹಾವಳಿ ನಿಲ್ಲುತ್ತಿಲ್ಲ.

Advertisement

ಇಂದು ಒಂದೇ ದಿನ 442 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಮತ್ತು 4 ಜನ ಸೋಂಕಿತರು ಇಂದು ಮೃತಪಟ್ಟಿದ್ದಾರೆ.

ಇಂದು ಒಂದೇ ದಿನ 519 ಜನ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವುದು ಆಶಾದಾಯಕ ವಿಚಾರವಾಗಿದೆ.

ಇಂದೂ ಸಹ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿದೆ. ಇಲ್ಲಿ ಒಟ್ಟಾರೆ 113 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಆ ಬಳಿಕದ ಸ್ಥಾನಗಳಲ್ಲಿ ಕಲಬುರಗಿ (35), ರಾಮನಗರ (33), ದಕ್ಷಿಣ ಕನ್ನಡ (29), ಬಳ್ಳಾರಿ (26), ಧಾರವಾಡ (26), ಮೈಸೂರು (22), ಬಾಗಲಕೋಟೆ (18), ಕೊಡಗು (18), ಉಡುಪಿ (14) ಜಿಲ್ಲೆಗಳಿವೆ.

ಒಟ್ಟು ಸೋಂಕಿತರ ಪಟ್ಟಿಯಲ್ಲೂ ಸಹ ಬೆಂಗಳೂರು ನಗರ ಜಿಲ್ಲೆಯೇ ಮೊದಲ ಸ್ಥಾನದಲ್ಲಿದೆ. ಇಲ್ಲಿ ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 1791ಕ್ಕೆ ಮುಟ್ಟಿದ್ದು 1207 ಸಕ್ರಿಯ ಪ್ರಕರಣಗಳಿವೆ. ಬಳಿಕ ಕಲಬುರಗಿ ಜಿಲ್ಲೆಯಲ್ಲಿ 1289 ಪ್ರಕರಣಗಳು ವರದಿಯಾಗಿದ್ದು ಇಲ್ಲಿ ಇನ್ನೂ 415 ಸಕ್ರಿಯ ಪ್ರಕರಣಗಳಿವೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 1116ಕ್ಕೇರಿದ್ದು 1011 ಜನ ಗುಣಮುಖರಾಗಿದ್ದಾರೆ ಮತ್ತು 103 ಸಕ್ರಿಯ ಪ್ರಕರಣಗಳಿವೆ.

Advertisement

ರಾಜ್ಯದಲ್ಲಿ ಇದುವರೆಗೆ ಕೋವಿಡ್ 19 ಸೋಂಕು ಪೀಡಿತರಾದವರ ಸಂಖ್ಯೆ 10560 ಆಗಿದ್ದು ಇವರಲ್ಲಿ 6670 ಜನ ಸೋಂಕಿನಿಂದ ಗುಣಮುಖರಾಗಿ ತೆರಳಿದ್ದಾರೆ. ರಾಜ್ಯದಲ್ಲಿ ಕೋವಿಡ್ 19 ಸೊಂಕಿನಿಂದ ಮೃತಪಟ್ಟವರ ಸಂಖ್ಯೆ 170ಕ್ಕೆ ಏರಿಕೆಯಾಗಿದ್ದು, ಸೋಂಕು ಇದ್ದು ಇತರೇ ಕಾರಣಗಳಿಂದ 4 ಜನರು ಮೃತಪಟ್ಟಿದ್ದಾರೆ. 160 ಸೋಂಕಿತರು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next