ಬೆಂಗಳೂರು: ನಗರದ ವಿವಿಧೆಡೆ ಬುಧವಾರ ರಾತ್ರಿ ಧಾರಾಕಾರ ಸುರಿದು ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಂಜೆ ಆರಂಭಗೊಂಡ ಮಳೆ ರಾತ್ರಿ 10 ಗಂಟೆವರೆಗೂ ಮುಂದುವರಿದು ಕೆಲವೆಡೆ ರಸ್ತೆಗಳು ಜಲಾವೃತಗೊಂಡಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.
ಕೋರಮಂಗಲದ ಮೊದಲ ಮುಖ್ಯರಸ್ತೆಯಲ್ಲಿ ಒಂದು ಮರ ಧರೆಗುರುಳಿರುಳಿದ್ದು, ಎಚ್‌ಎಸ್‌ಆರ್ ಲೇಔಟ್‌ನ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿರುವುದು ವರದಿಯಾಗಿದೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಳೆ?: ಬೆನ್ನಿಗಾನಹಳ್ಳಿ 59 ಮಿ.ಮೀ, ಮಹದೇವಪುರ, ಬಾಣಸವಾಡಿ 36ಮಿ.ಮೀ, ದೊಮ್ಮಲೂರು 43 ಮಿ.ಮೀ, ಎಚ್‌ಎಎಲ್ 15.5 ಮಿ.ಮೀ, ಹೂಡಿ 15.5 ಮಿ.ಮೀ, ಆವಲಹಳ್ಳಿ 11 ಮಿ.ಮೀ, ಸೋಮನಹಳ್ಳಿ 11 ಮಿ.ಮೀ, ಬಿದರಹಳ್ಳಿ 18 ಮಿ.ಮೀ, ಕಾಡುಗೋಡಿ 12.5 ಮಿ.ಮೀ, ಉತ್ತರಹಳ್ಳಿ 11.5 ಮಿ.ಮೀ, ಕೆಂಗೇರಿ 6.5 ಮಿ.ಮೀ, ಕುಮಾರಸ್ವಾಮಿ ಬಡಾವಣೆ 14 ಮಿ.ಮೀ, ಕೆಂಗೇರಿ 6.5 ಮಿ.ಮೀ, ವಿದ್ಯಾಪೀಠ 18.5 ಮಿ.ಮೀ, ದೊಡ್ಡಜಾಲ 20 ಮಿ.ಮೀ, ಸಿಗೇಹಳ್ಳಿ 17.5 ಮಿ.ಮೀ,
ಎಚ್‌ಎಸ್‌ಆರ್ ಲೇಔಟ್ 30.5 ಮಿ.ಮೀ, ಪಟ್ಟಾಭಿರಾಮನಗರ 16.5 ಮಿ.ಮೀ, ಸೋಮನಹಳ್ಳಿ 16 ಮಿ.ಮೀ, ಹೊರಮಾವು 36 ಮಿ.ಮೀ, ಕೆ.ಆರ್‌ಪುರ 25 ಮಿ.ಮೀ, ರಾಮಮೂರ್ತಿ ನಗರ 43 ಮಿ.ಮೀ, ಬಸವನಪುರ 21 ಮಿ.ಮೀ, ದೊಮ್ಮಲೂರು 25 ಮಿ.ಮೀ, ದೊಮ್ಮಸಂದ್ರ 29 ಮಿ.ಮೀ, ಬ್ಯಾಟರಾಯನಪುರ 19.5 ಮಿ.ಮೀ, ದೊಡ್ಡಜಾಲ 25 ಕೆಂಗೇರಿ 5 ಮಿ.ಮೀ, ವಿದ್ಯಾಪೀಠ 21.5 ಮಿ.ಮೀ, ಸಿಗೇಹಳ್ಳಿ 13.5 ಮಿ.ಮೀ, ದೊಡ್ಡ ಬೊಮ್ಮಸಂದ್ರ 6 ಮಿ.ಮೀ ಹಾಗೂ ಟ್ರಿನಿಟಿ, ಎಂ.ಜಿ ರಸ್ತೆ, ರಿಚ್‌ಮಂಡ್, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿರುವುದು ವರದಿಯಾಗಿದೆ.