ಕಾಪು : ಕಾಪು ಕಡಲ ತೀರದಲ್ಲಿ ಕಳೆದೆರಡು ದಿನಗಳಿಂದ ಕೈರಂಪಣಿ ಮೀನುಗಾರರ ಬಲೆಗೆ 1500 ಕೆಜಿ. ತೂಕದ ಬೃಹದಾಕಾರದ ತೊರಕೆ ಮೀನುಗಳು ಬಿದ್ದಿದ್ದು ಮೀನುಗಾರರು ಫುಲ್ ಖುಷ್ ಆಗಿ ಬಿಟ್ಟಿದ್ದಾರೆ.
ಮೂಳೂರು ಕಡಲ ಕಿನಾರೆಯಲ್ಲಿ ಮೀನುಗಾರಿಕೆ ನಡೆಸಿದ ತೆಂಕ ಎರ್ಮಾಳ್ ಪಂಡರೀನಾಥ ಕೈರಂಪಣಿಯವರು ಬೀಸಿದ ಬಲೆಗೆ ಶುಕ್ರವಾರ 30, ಶನಿವಾರ 11 ತೊರಕೆ ಮೀನುಗಳು ಸಿಕ್ಕಿದ್ದು ಸುಮಾರು 1600 ಕೆಜಿ.ಯಷ್ಟು ತೂಕದ್ದಾಗಿವೆ ಎಂದು ತಿಳಿದು ಬಂದಿದೆ.
ಪಿಲಿ ತೊರಕೆ ಮತ್ತು ಪೊಯ್ಯ ತೊರಕೆ ಎಂಬ ಎರಡು ಜಾತಿಯ ತೊರಕೆ ಮೀನುಗಳಿದ್ದು ಪ್ರತೀ ಕೆ.ಜಿ.ಗೆ ಕ್ರಮವಾಗಿ 70 ಮತ್ತು 130 ರೂ. ದರ ಸಿಗುತ್ತದೆ. ಎರಡು ದಿನದಲ್ಲಿ ಸುಮಾರು 1200 ಕೆಜಿ ತೂಕದಷ್ಟು ಪಿಲಿ ತೊರಕೆ ಮತ್ತು 400 ಕೆಜಿ ತೂಕದಷ್ಟು ತೊರಕೆ ಬಿದ್ದಿದ್ದು 1.25 ಲಕ್ಷ ರೂ. ವರೆಗೆ ಮಾರಾಟಗೊಂಡಿವೆ.
ಬೃಹತ್ ಗಾತ್ರದ ತೊರಕೆಗಳನ್ನು ದೊಡ್ಡ ದೊಡ್ಡ ಬಡಿಗೆಯಲ್ಲಿ ಕಟ್ಟಿ ಸಾಗಿಸುವ ದೃಷ್ಯವನ್ನು ನೋಡಲು ಕರಾವಳಿಯಲ್ಲಿ ಜನಸಾಗರವೇ ಕಂಡು ಬಂದಿತ್ತು.
ಕಾಪು – ಉಡುಪಿಯ ಮೀನುಗಾರರಿಗೆ ಕಳೆದ ವಾರ ಟನ್‌ಗಟ್ಟಲೆ ಬೂತಾಯಿ ಮೀನುಗಳು ದೊರಕಿದ್ದರೆ ಈ ವಾರ ಬೃಹತ್ ಗಾತ್ರದ ತೊರಕೆ ಮೀನುಗಳು ಮೀನುಗಾರರ ಬಲೆಯೊಳಗೆ ಬಿದ್ದು ಉತ್ತಮ ಕಸುಬಿನ ಲಕ್ಷಣಗಳು ತೋರಿ ಬಂದಿವೆ.