Advertisement
ಇನ್ಸುಲೇಟರ್ ಮೀನು ವಾಹನದಲ್ಲಿ ಅಬ್ದುಲ್ ಸತ್ತಾರ್ ಚಾಲಕನಾಗಿದ್ದು, ಮಹಮ್ಮದ್ ಅದ್ನಾನ್ ಮತ್ತು ನಿಶಾದ್ ಜತೆಗಿದ್ದರು. ಮಂಗಳವಾರ ಮುಂಜಾನೆ ಚಾಲಕ ಕಟಪಾಡಿಯಲ್ಲಿ ವಾಹನ ನಿಲ್ಲಿಸಿ ನಿದ್ದೆಗೆ ಜಾರಿದ್ದರು. ಬೆಳಗ್ಗೆ ಎಚ್ಚರವಾದಾಗ ವಾಹನದಲ್ಲಿದ್ದ ಕಂಡಕ್ಟರ್ ಮಹಮ್ಮದ್ ಅದ್ನಾನ್ ಮತ್ತು ನಿಶಾದ್ ಇಲ್ಲದೇ ಇದ್ದು, ವಾಹನದಲ್ಲಿ ಇಟ್ಟಿದ್ದ 4.25 ಲಕ್ಷ ರೂಪಾಯಿ ನಗದು ಕಳವಾಗಿರುವುದು ಗೊತ್ತಾಗಿದೆ.
ಕಾಪು: ಕಾಪು ತಾಲೂಕು ಇನ್ನಂಜೆಯ ವಿಶ್ವಾಸದಮನೆ ಆಶ್ರಮದಲ್ಲಿದ್ದ ರತ್ನಮ್ಮ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮಾನಸಿಕ ಅಸ್ವಸ್ಥರಾಗಿ ಉಡುಪಿಯಲ್ಲಿ ತಿರುಗಾಡುತ್ತಿದ್ದ ಅವರನ್ನು ಆಶ್ರಮಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗುತ್ತಿತ್ತು. ಚೇತರಿಸಿಕೊಂಡಿದ್ದ ಅವರು ಮಂಗಳವಾರ ಆಶ್ರಮದಲ್ಲಿ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಆಶ್ರಮದ ವೈದ್ಯರಿಗೆ ಮಾಹಿತಿ ನೀಡಲಾಗಿತ್ತು. ಅವರು ಬಂದು ಪರೀಕ್ಷಿಸಿದಾಗ ರತ್ನಮ್ಮರವರು ಮೃತಪಟ್ಟಿರುವುದು ಖಚಿತವಾಗಿದೆ. ಮೃತದೇಹವನ್ನು ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.