Advertisement

ಚುನಾವಣೆ ರಣತಂತ್ರ: ಆರ್‌ಎಸ್‌ಎಸ್‌ ನೆರವು ಕೋರಿದ ಬಿಜೆಪಿ ನಾಯಕರು

07:20 PM Mar 06, 2018 | Team Udayavani |

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್‌ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ರಣತಂತ್ರಕ್ಕೆ ಸಂಬಂಧಿಸಿ ರಾಜ್ಯದ ಆರ್‌ಎಸ್‌ಎಸ್‌ ನಾಯಕರೊಂದಿಗೆ ಸಭೆ ನಡೆಸಿ ಮುಂಬರುವ ಚುನಾವಣೆಗೆ ಸಂಘ ಪರಿವಾರದ ಯೋಜನೆಯನ್ನು ರೂಪಿಸುವ ಬಗ್ಗೆ ಚರ್ಚಿಸಿರುವುದಾಗಿ ತಿಳಿದು ಬಂದಿದೆ. 

Advertisement

“ಮಾರ್ಚ್‌ 3ರಂದು ಸಂಘ ಪರಿವಾರ ರಾಜ್ಯದಲ್ಲಿನ ತನ್ನ ಪ್ರಧಾನ ಕಾರ್ಯಾಲಯದಲ್ಲಿ  ವಾರ್ಷಿಕ ಸಂಚಾಲನಾ ಸಭೆ ನಡೆಸಿತು. ಬಿ ಎಸ್‌ ಯಡಿಯೂರಪ್ಪ, ಅನಂತ ಕುಮಾರ್‌, ಸದಾನಂದ ಗೌಡ ಮತ್ತು ಇತರರು ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಘ ಪರಿವಾರದ ನೆರವನ್ನು ಅವರು ಕೋರಿದರು’ ಎಂದು ಹಿರಿಯ ಆರ್‌ಎಸ್‌ಎಸ್‌ ನಾಯಕರೋರ್ವರು ಮಾಧ್ಯಮಕ್ಕೆ ತಿಳಿಸಿದರು. 

ಇದಕ್ಕೆ ಉತ್ತರವಾಗಿ ಸಂಘವು ತಾನು ಬಿಜೆಪಿಗೆ ಚುನಾವಣಾ ನೆರವು ನೀಡಲು ನೇರ ಪ್ರವೇಶ ಮಾಡುವುದಿಲ್ಲ; ಆದರೆ ಸಂಘದ ಸ್ವಯಂಸೇವಕರಿಗೆ ಆ ರೀತಿಯಲ್ಲಿ ನೆರವಾಗುವುದಕ್ಕೆ ಪೂರ್ಣ ಸ್ವಾತಂತ್ರ್ಯವಿದೆ ಎಂದು ಆರ್‌ಎಸ್‌ಎಸ್‌ ನಾಯಕರು ತಿಳಿಸಿದರು. 

ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ ಅವರ ಬಗ್ಗೆ ಒಲವು ಹೊಂದಿರುವ ಓಬಿಸಿ ಮತ್ತು ದಲಿತರ ಓಟುಗಳನ್ನು ಒಡೆಯಲು ಬಿಜೆಪಿ ಆರ್‌ಎಸ್‌ಎಸ್‌ ಅನ್ನು ಕೇಳಿಕೊಂಡಿದೆಯೇ ? ಎಂಬ ಪ್ರಶ್ನೆಗೆ ಉತ್ತರವಾಗಿ “ಅಂತಹ ಯಾವುದೇ ಸಲಹೆಯನ್ನು ನಾವು ನೀಡಿಲ್ಲ ಅಥವಾ ಬಿಜೆಪಿ ಆ ರೀತಿಯಲ್ಲಿ ಏನನ್ನೂ ಕೇಳಿಲ್ಲ’ ಎಂದವರು ಹೇಳಿದರು. 

ಆರ್‌ಎಸ್‌ಎಸ್‌ ಕಾರ್ಯಕರ್ತರು ಬಿಜೆಪಿಗೆ ಚುನಾವಣೆ ಸಂಬಂಧವಾಗಿ ಯಾವ ರೀತಿಯಲ್ಲಿ ನೆರವಾಗುವರು ಎಂಬ ಪ್ರಶ್ನೆಗೆ ಉತ್ತರವಾಗಿ ಅವರು, “ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ಮಾಡಲು ಅತ್ಯಧಿಕ ಸಂಖ್ಯೆಯಲ್ಲಿ ಮತ ಹಾಕುವಂತೆ ಮತದಾರರ ಮನ ಒಲಿಸುವ ಕೆಲಸವನ್ನು ಆರ್‌ಎಸ್‌ಎಸ್‌ ಕಾರ್ಯಕರ್ತರು ಮಾಡಬಲ್ಲರು’ ಎಂದು ಹೇಳಿದರು. 

Advertisement

“ಪ್ರಜಾಸತ್ತೆಯ ಯಶಸ್ಸಿಗೆ ದೊಡ್ಡ ಸಂಖ್ಯೆಯಲ್ಲಿ ಮತದಾರರು ಮತ ಹಾಕುವುದು ಮತ್ತು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುವುದರಿಂದ ಆರ್‌ಎಸ್‌ಎಸ್‌ ಕಾರ್ಯಕರ್ತರು ಆ ಸಂದೇಶವನ್ನು ಮತದಾರರಿಗೆ ತಲುಪಿಸಲು ಕ್ಷೇತ್ರ ಕಾರ್ಯ ಮಾಡಬಲ್ಲರು’ ಎಂದು ಆ ಆರ್‌ಎಸ್‌ಎಸ್‌ ನಾಯಕ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next