Advertisement

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

12:20 AM Jan 03, 2025 | Team Udayavani |

ನಾಗಪುರ: “ಮಸೀದಿಗಳಡಿ ಮಂದಿರಗಳನ್ನು ಹುಡುಕ ಬೇಡಿ’ ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ರ ಹೇಳಿಕೆಯನ್ನು ಆರ್‌ಎಸ್‌ಎಸ್‌ನ ಆಂಗ್ಲ ಮುಖವಾಣಿ “ಆರ್ಗನೈಸರ್‌’ ಟೀಕಿಸಿದ ಬೆನ್ನಲ್ಲೇ ಸಂಘ ಟನೆಯ ಹಿಂದಿ ಮುಖವಾಣಿಯಾದ “ಪಾಂಚಜನ್ಯ’ ಈಗ ಭಾಗವತ್‌ ಹೇಳಿಕೆಯನ್ನು ಸಮರ್ಥಿಸಿ ಕೊಂಡಿದೆ.

Advertisement

“ದೇವಾಲಯಗಳು ಹಿಂದೂ ನಂಬಿಕೆಯ ಕೇಂದ್ರವಾಗಿವೆ. ಆದಾಗ್ಯೂ ಅವುಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಮಂದಿರ-ಮಸೀದಿಗಳ ವಿವಾದ ಕುರಿತಾಗಿ ಅನಗತ್ಯ ಚರ್ಚೆ, ಸುಳ್ಳು ವಿಚಾರಗಳನ್ನು ಬಿತ್ತುತ್ತಿರುವುದು ಕಳವಳ ಕಾರಿಯಾಗಿದೆ’ ಎಂದು ಪಾಂಚಜನ್ಯ ತನ್ನ ಸಂಪಾದಕೀಯದಲ್ಲಿ ಹೇಳಿದೆ.

ಕಳೆದ ವಾರ ಆರ್ಗ ನೈಸರ್‌, ಹುಸಿ ಜಾತ್ಯತೀತತೆಯ ಬದಲಾಗಿ ಐತಿಹಾಸಿಕ ಸತ್ಯಗಳ ಅನಾವರಣದ ಅಗತ್ಯವಿದೆ ಎಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next