Advertisement

2022ರ ವಿಶ್ವದ ಟಾಪ್‌ 5 ಅತಿ ದುಬಾರಿ ನಗರಗಳಿವು!

01:27 AM Jun 09, 2022 | Team Udayavani |

ಹೊಸದಿಲ್ಲಿ: ವಲಸಿಗರಿಗೆ ವಿಶ್ವದ ಯಾವ ನಗರ ಎಷ್ಟು ದುಬಾರಿ ಎನ್ನುವುದರ ಬಗ್ಗೆ ಇಸಿಎ ಇಂಟರ್‌ನ್ಯಾಶ‌ನಲ್‌ ಹೆಸರಿನ ಸಂಸ್ಥೆ ಸಮೀಕ್ಷೆ ನಡೆಸಿದೆ. ಈ ವರ್ಷದ ಮಾರ್ಚ್‌ ನಲ್ಲಿ ನಡೆದ ಸಮೀಕ್ಷೆಯನ್ನು ತೈಲ ಬೆಲೆಯೇರಿಕೆ, ಆಹಾರ ಹಣದುಬ್ಬರ ಏರಿಕೆ, ಮನೆ ಬಾಡಿಗೆ ಮುಂತಾದ ಮಾನ ದಂಡಗಳನ್ನಿಟ್ಟುಕೊಂಡು ಈ ವರದಿಯನ್ನು ಸಿದ್ಧಪಡಿಸಲಾಗಿದೆ.

Advertisement

ವಿಶ್ವದ ಅತೀ ದುಬಾರಿ ನಗರಗಳಲ್ಲಿ ಭಾರತದ ಯಾವುದೇ ನಗರವಿಲ್ಲ. ಇನ್ನು ಹಾಂಕಾಂಗ್‌ ಅತ್ಯಂತ ದುಬಾರಿ ನಗರ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

ಹಾಂಕಾಂಗ್‌ ಅನಂತರದ 4 ಸ್ಥಾನಗಳನ್ನು ಕ್ರಮವಾಗಿ ನ್ಯೂಯಾರ್ಕ್‌, ಜಿನಿವಾ, ಲಂಡನ್‌ ಮತ್ತು ಟೋಕಿಯೊ ತುಂಬಿವೆ. ನ್ಯೂಯಾರ್ಕ್‌ ಮತ್ತು ಜಿನಿವಾದಲ್ಲಿ ಕಳೆದ ಒಂದು ವರ್ಷದಲ್ಲಿ ಮನೆ ಬಾಡಿಗೆ ದರವು ಕ್ರಮವಾಗಿ ಶೇ.20 ಮತ್ತು ಶೇ.12 ಹೆಚ್ಚಿದ್ದರಿಂದಾಗಿ ಈ ಎರಡೂ ನಗರಗಳು ಟಾಪ್‌ 5ರ ಸ್ಥಾನಕ್ಕೇರಿವೆ.

2022ರ ಟಾಪ್‌ 5 ನಗರಗಳು
1. ಹಾಂಕಾಂಗ್‌ 2. ನ್ಯೂಯಾರ್ಕ್‌
3. ಜಿನಿವಾ 4. ಲಂಡನ್‌ 5. ಟೋಕಿಯೊ

ವರದಿಯ ವಿಶೇಷತೆ
-ವಿಶ್ವಾದ್ಯಂತ ಕಳೆದ 1 ವರ್ಷದಲ್ಲಿ ಪೆಟ್ರೋಲ್‌ ದರ ಸರಾಸರಿ ಶೇ.37 ಏರಿಕೆ ಕಂಡಿದೆ. ಬೀರತ್‌ ನಗರದಲ್ಲಂತೂ ಶೇ.1128 ಏರಿಕೆ ಯಾಗಿದೆ.
-ದುಬಾರಿ ನಗರ ಹಾಂಕಾಂಗ್‌ನಲ್ಲಿ ಒಂದು ಕಪ್‌ 405 ರೂ., ಲೀಟರ್‌ ಪೆಟ್ರೋಲ್‌ ಬೆಲೆ 236 ರೂ., 1 ಕೆಜಿ ಟೊಮೆಟೊ ಬೆಲೆ 894 ರೂ.!
-ಇಂಧನಕ್ಕೆ ಅತ್ಯಂತ ಕಡಿಮೆ ಬೆಲೆ ಇರುವುದು ಟೆಹ್ರಾನ್‌ನಲ್ಲಿ. ಅಲ್ಲಿ 1 ಲೀ. ಇಂಧನ ಬೆಲೆ 7 ರೂ.
-ಕೊನೆಯ ಸ್ಥಾನದಲ್ಲಿ ಟರ್ಕಿಯ ಅಂಕಾರಾವಿದ್ದು ಇದು ಅತ್ಯಂತ ಅಗ್ಗದ ನಗರವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next