Advertisement
ಆರ್ಥಿಕವಾಗಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಈ ದೇಶದ ಪುರುಷರು ಸಂಜೆಗತ್ತಲಲ್ಲೇ ಸಮುದ್ರದತ್ತ ತೆರಳುತ್ತಿದ್ದರು…ಅದಕ್ಕೆ ಕಾರಣ ಬಡದೇಶಗಳಿಂದ ಆಗಮಿಸಿ ಕಾಯುತ್ತಿದ್ದ ವೇಶ್ಯೆಯರಿಗಾಗಿ! ಆದರೆ ಇಂದು ಕಾಲಚಕ್ರ ಉರುಳಿದೆ…ಅದೇ ನಳನಳಿಸುವ ಟೋಕಿಯೋದತ್ತ ವಿದೇಶಿಯರು ಸೆ*ಕ್ಸ್ ಟೂರಿಸಂನಿಂದಾಗಿ ಲಗ್ಗೆ ಇಡತೊಡಗಿದ್ದಾರೆ. ಹೌದು ಜಪಾನ್ ನಲ್ಲಿ ಬಡತನ ಹೆಚ್ಚಳವಾಗುವ ಜೊತೆಗೆ ಈ ದೇಶ ವೇಶ್ಯಾವಾಟಿಕೆ ಅಡ್ಡೆಯ ನೂತನ ರಾಜಧಾನಿಯಾಗುತ್ತಿದೆ!
Related Articles
Advertisement
ಜಪಾನ್ ಸ್ಥಿತಿ ತುಂಬಾ ಶೋಚನೀಯವಾಗಿದೆ. ಇಲ್ಲಿನ ಪರಿಸ್ಥಿತಿ ತುಂಬಾ, ತುಂಬಾ ಕೆಟ್ಟುಹೋಗಿದೆ. ಮಕ್ಕಳ ಸಂಖ್ಯೆ, ಹಿಂಸಾಚಾರ ಹೆಚ್ಚಳವಾಗುತ್ತಿದ್ದು, ನಮ್ಮ ಸಂಘಟನೆ ಏನು ನೆರವು ನೀಡಲು ಸಾಧ್ಯವೋ ಅಷ್ಟನ್ನು ಮಾಡುತ್ತಿದ್ದು, ಅದಕ್ಕಿಂತ ಹೆಚ್ಚು ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟನಾಕಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನೆರೆಯ ಕನಗ್ವಾವಾ ಪ್ರಿಫೆಕ್ಚರ್ ನ ಹುಡುಗಿಯೊಬ್ಬಳು ಹೈಸ್ಕೂಲ್ ಶಿಕ್ಷಣ ಪೂರೈಸಿ, ಕೆಫೆಯಲ್ಲಿ ಏನಾದರು ಕೆಲಸ ಸಿಗಬಹುದಾ ಎಂಬ ನಿರೀಕ್ಷೆಯೊಂದಿಗೆ ಕುಬುಕಿಚೋ ನಗರಕ್ಕೆ ಆಗಮಿಸಿದ್ದಳು. ಆದರೆ ಆಕೆಗೆ ದುಬಾರಿ ಖರ್ಚು ತಲೆನೋವಾಗಿ ಪರಿಣಮಿಸಿಬಿಟ್ಟಿತ್ತು. ನಿಧಾನಕ್ಕೆ ಆಕೆ ಕಂಡುಕೊಂಡ ಜಾಗ ಪಾರ್ಕ್ ಪ್ರದೇಶ! ಹೌದು ಓಕುಬೋ ಪಾರ್ಕ್ ನ ಬೀದಿಯಲ್ಲಿ ಅತ್ತಿಂದಿತ್ತ ನಿಂತು ತಿರುಗಾಡಿದರೆ ನಮಗೆ ಬೇಕಾದ ಗಿರಾಕಿ ಸಿಗುತ್ತಾರೆ…ಜತೆಗೆ ಹಣವೂ ಸಿಗುತ್ತೆ ಎಂಬುದು ಆಕೆಯ ನುಡಿ!
ನನಗೆ ತೈವಾನ್, ಮೈನ್ ಲ್ಯಾಂಡ್ ಚೀನಾ, ಹಾಂಗ್ ಕಾಂಗ್ ನಿಂದ ಗಿರಾಕಿಗಳಿದ್ದಾರೆ. ನಾನು ತುಂಬಾ ಫೇಮಸ್ ಆಗಿರುವುದರಿಂದ ನಾನು ಯಾವಾಗಲೂ ಈ ವೃತ್ತಿ(ವೇಶ್ಯಾವಾಟಿಕೆ) ಬ್ಯುಸಿಯಾಗಿರುತ್ತೇನೆ ಎನ್ನುತ್ತಾಳೆ ರುವಾ. ಆದರೆ ಇದರಲ್ಲಿ ತುಂಬಾ ಅಪಾಯವೂ ಇದೆ. ಕೆಲವು ವಾರಗಳ ಹಿಂದೆ ನನ್ನ ಗೆಳತಿಯೊಬ್ಬಳ ಮೇಲೆ ಚೀನಾದ ಗಿರಾಕಿಯೊಬ್ಬ ಹಲ್ಲೆ ನಡೆಸಿ ಬಿಟ್ಟಿದ್ದ. ಗಂಟೆಗೆ ಎಷ್ಟು ಹಣ ಎಂಬ ವಿಚಾರದಲ್ಲಿ ಆ ಗಿರಾಕಿ ಕೋಪಗೊಂಡು ಹಲ್ಲೆ ನಡೆಸಿದ್ದ. ಆಕೆ ಆತನ ತಲೆ ಮೇಲೆ ಯಾವುದೋ ವಸ್ತುವಿನಿಂದ ಹೊಡೆದುಬಿಟ್ಟಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರುವಾ ವಿವರಣೆ ನೀಡುತ್ತಾಳೆ.
ಕೋವಿಡ್ 19ರ ಆರ್ಥಿಕ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದ ಪರಿಣಾಮ ಮಹಿಳೆಯರು, ಯುವತಿಯರು ವೇಶ್ಯಾವಾಟಿಕೆ ಉದ್ಯಮದಲ್ಲಿ ತೊಡಗಿಕೊಂಡಿರುವುದಾಗಿ ವರದಿ ವಿವರಿಸಿದೆ. ಕ್ಲಬ್ ಮತ್ತು ಪಾರ್ಕ್ ಹೆಸರಿನಲ್ಲಿ ಬೆಳೆಯುತ್ತಿರುವ ಉದ್ಯಮದಲ್ಲಿ ವೇಶ್ಯಾವಾಟಿಕೆ ಮಿತಿಮೀರಿ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ಬೀದಿಯಲ್ಲಿ ರಾಜಾರೋಷವಾಗಿ ವೇಶ್ಯೆವಾಟಿಕೆ ದಂಧೆಯಲ್ಲಿ ತೊಡಗಿಕೊಂಡ ಶೇ.43ರಷ್ಟು ಮಹಿಳೆಯರನ್ನು ಬಂಧಿಸಲಾಗಿದೆ (2023) ಎಂದು ಮೆಟ್ರೊಪೊಲಿಟನ್ ಪೊಲೀಸ್ ಇಲಾಖೆ ಅಂಕಿಅಂಶ ವಿವರಿಸಿದೆ. ಇವರಲ್ಲಿ ಹೆಚ್ಚಿನವರು 20 ಅಥವಾ 19 ವರ್ಷದ ಯುವತಿಯರು ಎಂದು ತಿಳಿಸಿದೆ.! ನೆದರ್ಲ್ಯಾಂಡ್ ನಲ್ಲಿ ವೇಶ್ಯಾವಟಿಕೆ ಕಾನೂನು ಬದ್ಧವಾದ ವಹಿವಾಟು. ಆದರೆ ಮಹಿಳೆಯರ ಆರೋಗ್ಯ ಮತ್ತು ಅವರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ. ಆದರೆ ಜಪಾನ್ ನಲ್ಲಿ ವೇಶ್ಯಾವಾಟಿಕೆ ಹೆಚ್ಚಳದ ಜತೆಗೆ ಮಾರಕ ರೋಗಗಳ ಭೀತಿಯೂ ಹೆಚ್ಚಿಸಿದೆ!