Advertisement

Gujarat ವಡೋದರ: ತೈಲ ಸಂಸ್ಕರಣ ಘಟಕ‌ ಸ್ಫೋಟ, ಓರ್ವ ಸಾವು

12:22 AM Nov 12, 2024 | Team Udayavani |

ವಡೋದರ: ಬೆಂಜೀನ್‌ ಸಂಗ್ರಹಣ ಟ್ಯಾಂಕ್‌ ನ್ಪೋಟ­ಗೊಂಡ ಪರಿಣಾಮ ಗುಜರಾತ್‌ನ ವಡೋದರದಲ್ಲಿರುವ ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ (ಐಒಸಿಎಲ್‌) ಸಂಸ್ಥೆಯ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಕಾಣಿಸಿ­ಕೊಂಡಿದ್ದು, ಓರ್ವ ನೌಕರ ಮೃತಪಟ್ಟಿದ್ದಾರೆ.

Advertisement

ವಡೋದರ ಹೊರ­ವಲಯದಲ್ಲಿರುವ ಕೊಯಾಲಿ ಪ್ರದೇಶದಲ್ಲಿ ಸಂಜೆ ಈ ಘಟನೆ ನಡೆದಿದೆ. ನ್ಪೋಟದ ಬೆನ್ನಲ್ಲೇ ಸಂಗ್ರಹಣ ಟ್ಯಾಂಕ್‌ ಹೊತ್ತಿ ಉರಿಯಲು ಪ್ರಾರಂಭವಾಗಿತ್ತು. ಕೂಡಲೇ ಬೆಂಕಿಯನ್ನು ತಹಬದಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next